KAILASA Library/ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation/ಇದಕ್ಕೆ ಕಾಲಾವಧಿ 21 ನಿಮಿಷಗಳುSign in
ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation

ಇದಕ್ಕೆ ಕಾಲಾವಧಿ 21 ನಿಮಿಷಗಳು

ಈ ಧ್ಯಾನವನ್ನು ಬೆಳಗಿನ ಹೊತು ಅಭ್ಯಾಸ ಮಾಡಿರಿ. ಸೂರ್ಯೋದಯ ವಾದೊಡನೆಯೇ ಪ್ರತಿಯೊಂದು ಜೀವರಾಶಿಯೂ ಸೂರ್ಯನೆಡೆಗೆ ಚೈತನ್ನವನ್ನು ಹೊಂದಲು ತಿರುಗುತವೆ. ಈ ಮಹತರವಾದ ಅಲೆಯ ಒಂದು ಭಾಗವೇ ಆಗಿಬಿಡುತವೆ.

ಬೆಳಿಗ್ಗೆ ಎದ್ದ ಕೂಡಲೇ ನೀವು ಇದನ್ನು ಅಭ್ಯಾಸ ಮಾಡಿರಿ. ಇನ್ನೂ ಹಾಸಿಗೆಯಲ್ಲಿ ಮಲಗಿರುವಾಗಲೇ, ಕಣ್ಣು ಮುಚ್ಚಿಕೊಂಡು ಉಸಿರನ್ನು ಒಳಕ್ಕೆ ತೆಗೆದುಕೊಳ್ಳಿ. ನೀವು ಉಸಿರು ತೆಗೆದುಕೊಳ್ಳುವಾಗಲೇ ನಿಮ್ಮ ನೆತ್ತಿಯಿಂದ ಬಂಗಾರದ ಬೆಳಕು

ನಿಮ್ಮ ಒಳಕ್ಕೆ ಹರಿದು ಬರುತಿದೆ ಎಂದು ಭಾವಿಸಿಕೊಳ್ಳಿರಿ. ಆ ಬೆಳಕು ನಿಮ್ಮ ಕಾಲ್ಬೆರಳುಗಳವರೆಗೂ ಮೇಲಿನಿಂದ ನಿಮ್ಮ ಒಳಕ್ಕೆ ಸುರಿಯಲ್ಪಡುತ್ತಿದೆ ಅದು ನಿಮ್ಮ ಕಾಲ್ಬೆರಳುಗಳಿಂದಲೂ ಹೊರಕ್ಕೆ ಹೋಗುತ್ತಿದೆ! ಇದು ಕೇವಲ ನೀವು ಮಾಡಿಕೊಂಡ ಒಂದು ಕಲನೆ ಮಾತ,ವೆಂದು ತಿಳಿಯಬೇಡಿ. ನೀವು ಕಲನೆ ಮಾಡಿದಂತೆಯೇ ಅದು ಸಂಭವಿಸುತ್ತದೆ. ಆ ಚೈತನ್ಯವು ನಿಜವಾಗಿಯೂ ನಿಮ್ಮೊಳಕ್ಕೆ ಹರಿಯುತ್ತಿದೆ.

ನೀವು ಉಸಿರು ಬಿಟ್ಟಾಗ, ಇದಕ್ಕೆ ವ್ಯತಿರಿಕವಾಗಿ ಕಲ್ಪಿಸಿಕೊಳ್ಳಿರಿ. ನಿಮ್ಮ ಕಾಲ್ಬೆರಳುಗಳಿಂದ, ಮಹಾ ಅಂಧಕಾರವು ನಿಮ್ಮ ಒಳಕ್ಕೆ ಹತ್ತುತ್ತಿದೆ ಎಂದು ಕಲ್ಪಿಸಿಕೊಳ್ಳಿರಿ, ಹಾಗೂ ಮೇಲು ಮೇಲಕ್ಕೆ ಸಾಗುತ್ತಾ ನಿಮ್ಜ ತಲೆಯವರೆಗೂ ಹೋಗುತ್ತಿದೆ ಎಂದು ಭಾವಿಸಿ. ಆ ಅಂಧಕಾರವು ನಿಮ್ಮ ತಲೆಯಿಂದ ಮೇಲಕ್ಕೆ ಹೊರಹೋಗುತ್ತಿದೆ. ಬಂಗಾರ ಬಣ್ಣದ ಬೆಳಕು ಪುರುಷ ಶಕ್ತಿ ಅದು ಬಲಪಡಿಸುತ್ತದೆ ಮತ್ತು ಸಂರಕ್ಷಿಸುತ್ತದೆ. ಅಂಧಕಾರವು ಸ್ತ್ರೀಶಕ್ತಿ ಅದು ಪ,ಶಾಂತತೆಯನ್ನುಂಟು ಮಾಡುತದೆ.

ಇದನ್ನು ರಾತ್ರಿಯ ವೇಳೆಯಲ್ಲೂ ಮಲಗಿ ನಿದ್ರಿಸುವ ಮುನ್ನ ಅಭ್ಯಾಸ ಮಾಡಬಹುದು. ಒಂದು ವೇಳೆ ಇದನ್ನು ಮಾಡುತ್ತಿದ್ದಾಗಲೇ ನಿಮಗೆ ನಿದ್ರೆ ಬಂದಿತೆಂದರೆ, ಅದೊಂದು ಸುಂದರ (ಅಪೂರ್ವ) ಅನುಭವ. ಇದನ್ನು ಎರಡು, ಮೂರು ತಿಂಗಳುಗಳವರೆಗೆ ಮುಂದುವರಿಸಿದರೆ, ನಿಮ್ಮಲ್ಲಿ ಹೆಚ್ಚಿನ ಬದಲಾವಣೆ ಆಗಿರುವುದನ್ನು ತಿಳಿಯುತೀರಿ. ಈ ತಂತ್ರವು ನಿಮ್ಮ ಲೈಂಗಿಕ ಶಕ್ತಿಯನ್ನು (ಮೂಲಾಧಾರದ ಶಕ್ತಿಯನ್ನು) ಊರ್ಧ್ಯಗಾಮಿಯಾಗಿ ಮಾಡಲು ಪ್ರಶಸ್ತವಾದದ್ದು. ಯಾವಾಗಲೂ ನಿಮ್ಮ ಬೆನ್ನಿನ ಕೆಳಭಾಗವು ಬಾರವಾಗಿರುವುದು ಸಹಜ. ಅದು ನಿವಾರಣೆಯಾದ ಅನುಭವ ನಿಮಗೆ ಉಂಟಾಗುತ್ತದೆ ಹಾಗೂ ನಿಮ್ಮ ಚೈತನ್ನವು ಮೇಲಿನ ಚಕ,ಗಳತ ಸಾಗುತದೆ.

ಯಂತ, ಧ್ಯಾನ