ಲಿವಿಂಗ್ ಎನ್ಲೈಟೆನ್ಮೆಂಟ್ - ಒಂದು ಪರಿಚಯ (Living Enlightenment - an Introduction)
ಒಂದು ಪರಿಚಯ
(Living Enlightenment - an Introduction in Kannada) THE SUPREME PONTIFF OF HINDUISM BHAGAWAN SRI NITHYANANDA PARAMASHIVAM
('Living Enlightenment - an Introduction' in Kannada)
THE SUPREME PONTIFF OF HINDUISM BHAGAWAN SRI NITHYANANDA PARAMASHIVAM
ಈ ಪುಸ್ತಕವು ಒಳಗೊಂಡಿರುವ ಧ್ಯಾನ ವಿಧಾನಗಳನ್ನು ನಿತ್ಯಾನಂದ ಧ್ಯಾನಪೀಠದ ದೀಕ್ಟಾಬದ್ದ ಆಚಾರ್ಯರುಗಳ ಸೂಚನೆಗಳನ್ನು ವೈಯಕ್ತಿಕವಾಗಿ ಪಡೆದು ಹಾಗೂ ಈ ತಂತ್ರಗಳನ್ನು ಮಾಡಲು ನಿಮ್ಮ ದೈಹಿಕ ಆರೋಗ್ಯ ಮತ್ತು ಸಾಧ್ಯತೆಯ ಬಗ್ಗೆ ನಿಮ್ಮ ವೈದ್ಯರ ಸಲಹೆಯ ನಂತರವೇ ಮಾಡತಕ್ಕದ್ದು. ಇವು ನಿಮ್ಮ ವೈದ್ಯಕೀಯ ತಪಾಸಣೆ, ಸಲಹೆ ಅಥವಾ ಚಿಕಿತ್ಸೆಗಾಗಲೀ ಬದಲಿಯಾಗಲು ಉದ್ದೇಶಿಸಿಲ್ಲ. ಯಾರಾದರೂ ಈ ತಂತ್ರಗಳನ್ನು ನಿತ್ಯಾನಂದ ಧ್ಯಾನಪೀಠದ ಧ್ಯಾನಕಾರ್ಯಕ್ರಮಗಳಲ್ಲಿ ಪೂರ್ವಭಾವಿಯಾಗಿ ಭಾಗವಹಿಸದಯೇ ಹಾಗೂ ನಿತ್ಯಾನಂದ ಧ್ಯಾನಪೀಠದ ದೀಕ್ಷಾಬದ್ದ ಆಚಾರ್ಯರ ನೇರವಾದ ಸೂಚನೆಗಳಿಲ್ಲದೆ ಅಭ್ಯಾಸ ಮಾಡಲು ಪ್ರಯತ್ನಿಸಿದರೆ, ಅಂತಹವರು ಸಂಪೂರ್ಣವಾಗಿ ತಮ್ಮ ಜವಾಬ್ದಾರಿಯಿಂದಲೇ ಮಾಡುತ್ತಿರುತ್ತಾರೆ; ಗ್ರಂಥಕರ್ತರಾಗಲೀ, ನಿತ್ಯಾನಂದ ಧ್ಯಾನಪೀಠವಾಗಲೀ, ಅವರ ಕೃತ್ಯಗಳ ಪರಿಣಾಮಗಳಿಗೆ ಜವಾಬ್ದಾರರಲ್ಲ.
ಈ ಪುಸ್ತಕದ ವಾರಾಟದಿಂದ ಬರುವ ಎಲ್ಲಾ ಆದಾಯಗಳನ್ನೂ ಧರ್ಮಾರ್ಥ ಚಟುವಟಿಕೆಗಳಿಗೆ ಮೀಸಲಾಗಿರುತ್ತದೆ.
ಜೀವನ್ನುಕ್ತಿ — ಒಂದು ಪರಿಚಯ
ಜೀವನ್ನುಕ್ತಿ – ಒಂದು ಪರಿಚಯ
ಘರ್ಷಣಾರಹಿತ ಜೀವನ
ನಾನು ನಿಮ್ಮೆಲ್ಲರನ್ನೂ ನನ್ನ ಪ್ರೀತಿ ಹಾಗೂ ಆದರಗಳಿಂದ ಸ್ವಾಗತಿಸುತ್ತೇನೆ. ಇಂದಿನ ವಿಷಯ, ಜೀವನ್ನುಕ್ತಿ.
ವೇದಾಂತದಲ್ಲಿ ಶ್ರವಣ, ಮನನ ಹಾಗೂ ನಿಧಿಧ್ಯಾಸನ ಎಂಬ ಮೂರು ಪದಗಳಿವೆ. ಶ್ರವಣ ಎಂದರೆ ಮಹಾಸತ್ಮಗಳನ್ನು ಆಲಿಸುವುದು, ಮನನ ಎಂದರೆ ಮಹಾಸತ್ಮಗಳನ್ನು ಆಳವಾಗಿ ಗ್ರಹಿಸುವುದು ಮತ್ತು ನಿಧಿಧ್ಯಾಸನ ಎಂದರೆ ಅವುಗಳನ್ನು ಬಾಳುವುದು. ಆದ್ದರಿಂದ ಇಂದು ಜೀವನ್ನುಕ್ತಿಯ ವಿಷಯವಾಗಿ ಕೆಲವು ಸತ್ಯಗಳನ್ನು ಕೇಳೋಣ ಹಾಗೂ ಆಳವಾಗಿ ಗ್ರಹಿಸಿಕೊಳ್ಳುವ ಪ್ರಯತ್ನ ಮಾಡೋಣ. ಆಗ ಸಹಜವಾಗಿಯೇ ನೀವು ಜೀವನ್ನುಕ್ತರಾಗಿ ಬಾಳುವಿರಿ.
ನಾನು ಜೀವನ್ನುಕ್ತರಾಗಿ ಬಾಳುವುದು ಎಂದಾಗ ಅದರ ಅರ್ಥವೇನು ?
ಜೀವನ್ನುಕ್ತಿ ಎಂದರೆ ಒಂದು ಘರ್ಷಣಾರಹಿತ ಜೀವನ, ಅಂದರೆ ಯಾವ ಘರ್ಷಣೆಗಳೂ ಇಲ್ಲದೇ ಬಾಳುವುದು. ನೀವು ದೇಹ, ವುನಸ್ಸು ಹಾಗೂ ಹೊರ ಪ್ರಪಂಚವೆಂದು ನೀವು ಭಾವಿಸುವ ನಿಮ್ಮ ಪರಿಸರದೊಂದಿಗೆ ಸಂಪೂರ್ಣವಾಗಿ ನೆಮ್ಮದಿಯಿಂದಿರುವುದು ಎಂದರ್ಥಾ.
ಜನರು ನನ್ನನ್ನು ಕೇಳುತ್ತಾರೆ, ಸ್ವಾಮೀಜಿ, ಘರ್ಷಣೆಗಳಿಂದ ತುಂಬಿರುವ ಈ ಪ್ರಪಂಚದಲ್ಲಿ ಘರ್ಷಣಾರಹಿತವಾಗಿರಲು ಹೇಗೆ ಸಾಧ್ಯ ? ಅದು ಸಾಧ್ಯವಿಲ್ಲ. ಇಡೀ ಪ್ರಪಂಚವು ಮೌನವಾಗಿ, ಸಂತೋಷವಾಗಿ ಮತ್ತು ಶಾಂತಿಯುತವಾಗಿದ್ದಾಗ ಮಾತ್ರ, ನಾನು ಘರ್ಷಣಾರಹಿತನಾಗಿರಲು ಸಾಧ್ಯ' ಎಂದು.
ತಿಳಿಯಿರಿ, 'ಅದೆಂದಿಗೂ ಸಾಧ್ಯವಾಗುವುದಿಲ್ಲ. ಇಡೀ ಪ್ರಪಂಚದ ಶಾಂತಿ ಎಂಬಂತಹುದು ಇಲ್ಲ. ಅದು ಎಂದಿಗೂ ಇರಲೂ ಇಲ್ಲ, ಇರಲು ಸಾಧ್ಯವೂ ಇಲ್ಲ. ಇಡೀ ಪ್ರಪಂಚವನ್ನು ಶಾಂತಗೊಳಿಸಲು ನಿಮ್ಮಿಂದ ಸಾಧ್ಯವಿಲ್ಲ. ಪ್ರಪಂಚವನ್ನು ಶಾಂತಗೊಳಿಸಲು ಯತ್ನಿಸುವ ಜನರಿಂದಲೇ ಎಲ್ಲಾ ಸಮಸ್ಯೆಗಳೂ ಹುಟ್ಟುವಾಗುವುದು.
ನಾನು ಅನೇಕ ಬಾರಿ ಧ್ಯಾನ ಕಾರ್ಯಕ್ರಮಗಳಲ್ಲಿ ನೋಡಿದ್ದೇನೆ, ವಾಸ್ತವವಾಗಿ ಧ್ಯಾನ ವುಂದಿರದಲ್ಲಿ ವುಾತನಾಡುವ ಕೆಲವು ಜನರ ಗಲಾಟೆಗಿಂತಲೂ 'ಮಾತನಾಡಬೇಡಿ! ಸುಮ್ಮನಿರಿ!' ಎಂದು ಕೂಗುವ ಸ್ವಯಂ ಸೇವಕರ ಗಲಾಟೆಂಗೋ ಹೆಚ್ಚಾಗಿರುತ್ತದೆ. ಅವರು
ಜೀವನ್ನುಕ್ತಿ — ಒಂದು ಪರಿಚಯ
ವರೌನವನ್ನು ಪಾಲಿಸುತ್ತಿರುವುದಾಗಿ ಹೇಳಿಕೊಳ್ಳುತ್ತಾರಾದರೂ, ಭಾಗವಹಿಸುವವರಿಗಿಂತಲೂ ಅವರೇ ಹೆಚ್ಚು ಗಲಾಟೆಯನ್ನು ವನಾಡುತ್ತಿರುತ್ತಾರೆ; ಅದೇ ಸಾಧಿಸಲೆತ್ನಿಸುವವರು ಇನ್ನೂ ಹೆಚ್ಚಿನ ಸಮಸ್ಯೆಗಳನ್ನೇ ಸೃಷ್ಟಿಸುತ್ತಿರುತ್ತಾರೆ.
ಕಳೆದ ಮೂರು ಸಾವಿರ ವರ್ಷಗಳಲ್ಲಿ ಐದು ಸಾವಿರ ಯುದ್ದಗಳು ನಡೆದಿವೆ ! ಪ್ರತಿಯೊಂದು ಯುದ್ದವೂ ವಿಶ್ವಶಾಂತಿಗಾಗಿ ಮಾಡಲಾಯಿತೆಂದೇ ಅವರು ಸಮರ್ಥಿಸಿಕೊಂಡದ್ದು. ಯುದ್ದವನ್ನು ಘೋಷಿಸಿದ ಪ್ರತಿಯೊಬ್ಬ ಮುಖಂಡನೂ ವಿಶ್ವಕ್ಕೆ ಶಾಂತಿಯನ್ನು ತರುವುದಾಗಿಯೇ ಸಮರ್ಥಿಸಿಕೊಳ್ಳುತ್ತಿದ್ದನು. ಆದರೆ, ಬಹುಮುಖ್ಯ ವಾದ ಸತ್ಯವು ಅವರೆಲ್ಲರಿಂದಲೂ ತಪ್ಪಿಸಿಕೊಂಡಿತ್ತು. ಘರ್ಷಣೆಗಳಿಲ್ಲದೆ ಜೀವನವನ್ನು ನಡೆಸಲಾರಂಭಿಸಿದಾಗ, ನೀವು ಅನುಭವಿಸುವ ಪ್ರಪಂಚವೂ ಘರ್ಷಣಾರಹಿತವಾಗುತ್ತದೆ. ನೀವು ನೋಡುವ ಪ್ರಪಂಚವೂ ಘರ್ಷಣಾರಹಿತವಾಗುತ್ತದೆ.
ಕಲ್ಪನೆ ಹಾಗೂ ದೃಶ್ಯೀಕರಣ
ನೋಡಿರಿ, ಮನಸ್ಸಿನಲ್ಲಿ ದೃಶ್ಯೀಕರಿಸಿ(Visualisation)ಕೊಳ್ಳುವುದು ಕಲ್ಪನೆಗಿಂತ (Imagination) ಬೇರೆಯಾದುದು. ನೀವು ದೃಶ್ಯೀಕರಿಸಿಕೊಳ್ಳುವಾಗ, ಏನನ್ನು ಚಿತ್ರಿಸಿಕೊಳ್ಳುತ್ತೀರೋ, ಅದು ಸಾಧ್ಯ ಎಂದು ನಿಮ್ಮ ಹೃದಯಕ್ಕೆ ತಿಳಿದಿರುತ್ತದೆ. ಕಲ್ಪನೆಯಲ್ಲಿ, ನಿಮ್ಮ ಕಲ್ಪನೆಗೂ ನಿಮ್ಮ ನಿಜ ಪರಿಸ್ಥಿತಿಗೂ ಏನೇನೂ
ಸಂಬಂಧವಿಲ್ಲವೆಂದು ನಿಮ್ಮ ವುನಸ್ಸಿಗೆ ಬಹಳ ಸ್ಪಷ್ಟವಾಗಿ ತಿಳಿದಿರುತ್ತದೆ.
ಕಲ್ಪನೆ ಹಾಗೂ ದೃಶ್ಯೀಕರಣಗಳ ವ್ಯತ್ಯಾಸವನ್ನು ಸರಿಂತನಾಗಿ ತಿಳಿಯಿರಿ. ಕಲ್ಪನೆಯ ವಿಷಯದಲ್ಲಿ, ನೀವು ಕಲ್ಪಿಸಿಕೊಳ್ಳುತ್ತಿರುವಾಗ, ನೀವು ಕೇವಲ ಕಲ್ಪಿಸಿಕೊಳ್ಳುತ್ತಿದ್ದೀರೆಂದು ನಿಮ್ಮ ವಾನಸ್ಸಿಗೆ ತಿಳಿದಿರುತ್ತದೆ. ಚಿತ್ರಿಸಿಕೊಳ್ಳುವುದರ ವಿಷಯದಲ್ಲಿ, ಇದ್ದಕ್ಕಿದ್ದಂತೆ, ಅದು ನಿಜವಾಗಿಯೂ ಸಾಧ್ಯವಾಗುತ್ತದೆ ಎಂದು ಅರಿತುಕೊಳ್ಳುವಿರಿ. ಅದರೆಡೆಗೆ ಆಲೋಚಿಸುವಿರಿ; ಅದಕ್ಕಾಗಿ ಶ್ರಮಿಸುವಿರಿ. ಇದೇ ಕಲ್ಪನೆ ಹಾಗೂ ಚಿತ್ರಿಸಿಕೊಳ್ಳುವುದರ ನಡುವಿನ ಸೂಕ್ಷ್ಮವಾದ ವ್ಯತ್ಯಾಸ. ನಿಮ್ಮ ಚಿತ್ರಿಸಿಕೊಳ್ಳುವಿಕೆಯು ಘರ್ಷಣಾರಹಿತವಾದಾಗ, ನೀವು ಆಂತರಿಕವಾಗಿ ನಿಮ್ಮೊಂದಿಗೆ ಸವುರಸ್ಯದಿಂದಿದ್ದಾಗ, ನೀವು ಜೀವನ್ನುಕ್ತರಾಗಿ ಬಾಳಿದಂತೆ; ನೀವು ವಿಶ್ವಕ್ಕೆ ಶಾಂತಿಯನ್ನು ತರುತ್ತೀರಿ. ಅದೊಂದೇ ಸಾಧ್ಯ, ವಿುಕ್ಕೆಲ್ಲವೂ ಅಸಾಧ್ಯ.
ಒಂದು ಸಣ್ಣ ಕಥೆ :
ಒಬ್ಬ ಬಾಲಕನು ಸಮುದ್ರ ದಡದಲ್ಲಿ ಸ್ನಾನ ಮಾಡಲು ಕಾಯುತ್ತಿದ್ದನು. ಅವನ ತಾಯಿಯು, 'ಸ್ನಾನ ಮಾಡದೆ ಏತಕ್ಕಾಗಿ ಕಾಯುತ್ತಿರುವೆ ? ಎನ್ನಲು, ಬಾಲಕನು, 'ಇಲ್ಲ, ಸಮುದ್ರದ ಎಲ್ಲಾ ಅಲೆಗಳು ನಿಲ್ಲಲಿ, ನಂತರ ಸ್ನಾನ ಮಾಡುತ್ತೇನೆ' ಎಂದನು.
'ಹಾಗೆ ಆಗಲು ಸಾಧ್ಯವಿಲ್ಲ ! ಅದರಂತೆಯೇ ಜೀವನ್ನುಕ್ತರಾಗಿ ಬಾಳಲು ಇಡೀ
ಜೀವನ್ನುಕ್ತಿ — ಒಂದು ಪರಿಚಯ
ಪ್ರಪಂಚವು ಸಂತೋಷವುಂದು ಹಾಗೂ ಶಾಂತಿಯುತವಾಗಲೆಂದು ಕಾಯಲಾಗುವುದಿಲ್ಲ. ಈ ಸತ್ಯವನ್ನು ತಿಳಿದರೆ, ನೀವು ಶಾಂತಿಯನ್ನು ಸೃಷ್ಟಿಸುವ ನಿಮ್ಮ ಅನಾವಶ್ಯಕ ಪ್ರಯತ್ನಗಳಿಂದ ಮುಕ್ತರಾಗುತ್ತೀರಿ.
ಯುದ್ದ ಮತ್ತು ಭಯೋತ್ಪಾದನೆಗಳಿಗೆ ಪರಿಹಾರ
ಜನರು ನನ್ನನ್ನು ಕೇಳುತ್ತಾರೆ, 'ಸ್ವಾಮೀಜಿ, ಇಷ್ಟೊಂದು ಸ್ಧಳಗಳಲ್ಲಿ ಯುದ್ಧ ಮತ್ತು ಭಯೋತ್ಪಾದನೆಗಳನ್ನು ನೋಡಿ ನಿಮಗೆ ವೇದನೆಯಾಗುವುದಿಲ್ಲವೇ ? ದಾರಿದ್ರ್ಯ ನಿವಾರಣೆಗೆ ನಿಮ್ಮ ಪರಿಹಾರವೇನು ?' ಎಂದು.
ಇತರರ ವೇದನೆಯಿಂದ ನೀವು ಕ್ಷೋಬೆಗೊಂಡರೆ, ಭೂಗ್ರಹಕ್ಕೆ ಇನ್ನೂ ಹೆಚ್ಚಿನ ವೇದನೆಯನ್ನು ಸೇರಿಸುತ್ತೀರಿ ಎಂದು ನಾನವರಿಗೆ ಹೇಳುತ್ತೇನೆ. ಅವರನ್ನು ನಿಮ್ಮ ಮಟ್ಟಕ್ಕೆ ಏರಿಸುವ ಬದಲು, ನೀವೇ ಅವರ ಮಟ್ಟಕ್ಕೆ ಇಳಿಯುತ್ತೀರಿ. ಅವರನ್ನು ನಿಮ್ಮ ಮಟ್ಟಕ್ಕೆ ತರಲು ಂುತ್ನಿಸಿರಿ. ಜೀವನದ ಬಗ್ಗೆ ಅವರ ಅರಿವು ಹಾಗೂ ಅಭಿಪ್ರಾಯವನ್ನು ಬದಲಾಯಿಸಿರಿ. ನೀವು ಅವರ ಬಗ್ಗೆ ಸತತವಾಗಿ ಯೋಚಿಸಿ ಖಿನ್ನರಾದರೆ, ನೀವೂ ಅವರ ಮಟ್ಟವನ್ನೇ ತಲುಪುತ್ತೀರಿ. ಆಗ ನಾವು ವೇದನೆ ಹೊಂದಿರುವ ಮತ್ತೊಬ್ಬ ವ್ಯಕ್ತಿಯನ್ನು ಪಡೆದಂತಾಗುತ್ತದೆ, ಅಷ್ಟೇ ! ಅದು ಯಾವ ರೀತಿಯಲ್ಲಿಯೂ ಪ್ರಯೋಜನವಾಗುವುದಿಲ್ಲ. ಜೀವನ್ನುಕ್ತರಾಗಿ ಬಾಳಿದಾಗ ಮಾತ್ರ ಶಾಂತಿಯನ್ನು ನಿರ್ಮಿಸಲು ಸಾಧ್ಯ
ಆದ್ದರಿಂದ, ಅರ್ಥವೇನು ?
ಜೀವನ್ನುಕ್ತಿ ಎಂದರೆ, ನಿಮ್ಮ ದೇಹ, ಮನಸ್ಸು ಹಾಗೂ ನೀವು ಭಾವಿಸುವ ಪ್ರಪಂಚದಲ್ಲಿ ಘರ್ಷಣೆಗಳಿಲ್ಲದೆ ಬಾಳುವುದು. ನಾನು 'ಪ್ರಪಂಚ'ವೆಂಬ ಪದವನ್ನು ಬಳಸಲಿಲ್ಲ. ಇಲ್ಲ. ನಾನು ನೀವು ಭಾವಿಸುವ ಪ್ರಪಂಚೆವೆಂಬ ಪದಗಳನ್ನು ಬಳಸುತ್ತಿದ್ದೇನೆ. ಅದೊಂದೇ ಸಾಧ್ಯತೆ, ಮತ್ತಾವುದೂ ಸಾಧ್ಯವಿಲ್ಲ. ಇದು ಸಾಧ್ಯವಾದರೆ, ಆಗ ಜೀವನ್ನುಕ್ತಿಯನ್ನು ಬಾಳಿದಂತೆ.
ಸಾಮಾನ್ಯವಾಗಿ, ನಾವೆಲ್ಲರೂ ಅಸಾಧ್ಯವಾದ ಗುರಿಗಳನ್ನಿಟ್ಟುಕೊಂಡು, ಅದನ್ನು ಸಾಧಿಸಲು ಯತ್ನಿಸುತ್ತೇವೆ. ನಂತರ ಸೋತಾಗ, ಅದು ನಿಜವಾಗಿಯೂ ಅಸಾಧ್ಯವಾದುದೆಂದು ನಿರ್ಣಯಿಸುತ್ತೇವೆ. ಹಾಗೂ ಅದು ಅಸಾಧ್ಯವಾದುದೆಂದು ನಿಶ್ಚಯಿಸಿದಾಗ ನಾವು ವರಾಡುತ್ತಿದ್ದ ಅಲ್ಪಸ್ವಲ್ಪ ಪ್ರಯತ್ನವನ್ನೂ ನಿಲ್ಲಿಸುತ್ತೇವೆ. ನಂತರ ನಾವು ಮಾಡುವುದೇನೆಂದರೆ, ಪ್ರಪಂಚವನ್ನು, ದೇವರನ್ನು, ಎಲ್ಲವನ್ನೂ ನಿಂದಿಸುವುದು. ನಮ್ಮ ಜೀವನವೆಲ್ಲವೂ ಇತರರನ್ನು ನಿಂದಿಸುವುದರಲ್ಲೇ ಕೊನೆಗೊಳ್ಳುತ್ತದೆ.
ಆದ್ದರಿಂದ, ಗುರಿಯನ್ನಿಟ್ಟುಕೊಳ್ಳಿರಿ. ಯಾವುದು ಸಾಧ್ಯವೆಂಬುದನ್ನರಿತು, ಅದಕ್ಕಾಗಿ ಕಾಂರ್ಯಶೀಲರಾಗಿರಿ. ಏನಾದರೂ ಸಾಧ್ಯವೆಂದು ನಿವುಗೆ ಅರಿವಾದಾಗ, ಹಾಗೂ ಅದಕ್ಕಾಗಿ ಶ್ರಮಿಸಲಾರಂಭಿಸಿದಾಗ, ನೀವು
ಜೀವನ್ನುಕ್ತಿ – ಒಂದು ಪರಿಚಯ
ಪಡೆಂತುುವ ಸಣ್ಣ ಸಣ್ಣ ಗೆಲುವುಗಳೂ ಅಗಾಧ್ ವಾದ ಪ್ರೋತ್ಸಾಹವನ್ನು ನೀಡುತ್ತವೆ. ಅವು ಮುಹತ್ಕರವಾದ ದೈಂರ್ಯ ಮತ್ತು ಭರವಸೆಯನ್ನು ಕೊಡುತ್ತವೆ. ಆಗ ನೀವು ಇನ್ನೂ ಆಳವಾದ ಸತ್ಯದೆಡೆಗೆ ಸ್ಲಿರವಾಗಿ ಹೋಗಲಾರಂಭಿಸುವಿರಿ. ನಾನು ಜೀವನ್ನುಕ್ಕಿ' ಎನ್ನುವುದನ್ನು ನೀವು ಪಡೆದು ಜೀವಿಸಲಾರಂಭಿಸುವಿರಿ.
ಜೀವನ್ನುಕ್ತರಾಗಿ ಬಾಳಲು ತಂತ್ರಗಳು
ಈಗ ಜೀವನ್ನುಕ್ತಿಂತುನ್ನು ಅಳವಡಿಸಿಕೊಳ್ಳಬಹುದಾದ ತಂತ್ರಗಳೊಡನೆ ಇನ್ನೂ ಹೆಚ್ಚು ವಿಸ್ತಾರವಾಗಿ ವಿವರಿಸುತ್ತೇನೆ. ದೇಹ, ವುನಸ್ಸು ಹಾಗೂ ನೀವು ಭಾವಿಸುವ ಪ್ರಪಂಚದಲ್ಲಿ ಘರ್ಷಣಾರಹಿತವಾಗಿ ಜೀವಿಸುವುದನ್ನು ಜೀವನ್ನುಕ್ತಿ ಎಂದು ನಾನು ಹೇಳಿದೆ. ಅದೇ ಸತ್ಯ. ಈಗ ನಾನು ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲಾಗುವಂತ ವಿಜ್ಞಾನವಾಗಿ ಉಪಯೋಗಿಸಲು ತಂತ್ರಗಳನ್ನು ಕೊಡುತ್ತೇನೆ.
ಜೀವನ್ಮುಕ್ತಿಯನ್ನು ಅನ್ವಯಿತ ವಿಜ್ಞಾನವನ್ನಾಗಿ ವರಾಡುವ ತಂತ್ರಗಳನ್ನು ನೀಡುತ್ತೇನೆ.
ಜೀವನ್ನುಕ್ತ ಬಾಳಿಗಾಗಿ ನಾಲ್ಕು ತಂತ್ರಗಳಿವೆ
ಶಕ್ತಿ–ಬದಲಾಯಿಸಲು ಬೇಕಾದ ಚೈತನ್ಯ
ವೊದಲನೆಯುದಾಗಿ, ನೀವು ಏನನ್ನು ಬದಲಾಯಿಸಬಹುದೋ ಅದನ್ನು ಬದಲಾಯಿಸುವುದು. ನಿಮ್ಮ ಜೀವನದಲ್ಲಿ ಏನನ್ನು ಬದಲಾಯಿಸಬಹುದೋ ಅದನ್ನು ಬದಲಾಯಿಸುವ ಶಕ್ತಿಯನ್ನು ವ್ಯಕ್ಕಪಡಿಸಿರಿ.
ಆಧ್ಯಾತ್ಮಿಕತೆಯು ತಾಮಸಿಕ ಜೀವನದ ಅಂಗೀಕಾರವಲ್ಲವೆಂಬುದನ್ನು ತಿಳಿದುಕೊಳ್ಳಿರಿ. ತಮಸ್ಸು ಎಂದರೆ ಸೋಮಾರಿತನ, ಮತ್ತು ಸೋಮಾರಿತನವು ಆಧ್ಯಾತ್ಮಿಕತೆಯಲ್ಲ. ಭರತದಲ್ಲಿ ಅನೇಕ ವೇಳೆ ಆಧ್ಯಾತ್ಮಿಕತೆಯನ್ನು ಸೋಮಾರಿತನವೆಂದು ಪರಿಗಣಿಸಲಾಗಿದೆ. ಒಂದು ಕಾಲದಲ್ಲಿ ಭರತದ ನಾಗರಿಕತೆಯು ಜೀವನ್ನುಕ್ತಿಯನ್ನು ಪ್ರತಿಪಾದಿಸುತ್ತಿತ್ತು; ಇಡೀ ದೇಶದ ಮೂಲಭೂತ ವ್ಯವಸ್ಥೆಯು ಜೀವನ್ನುಕ್ತಿಯ ಮೇಲೆ ನಿರ್ಮಾಣವಾಗಿತ್ತು.
ಆದರೆ ಏಕೋ ಏನೋ, ಕಾಲ ಕಳೆದಂತೆ, 'ಯೋಗೋ ನಷ್ಟ ಪರಂತಪ' ಎಂದು ಶ್ರೀಕೃಷ್ಣನು ಹೇಳಿದಂತೆ, ಯೋಗವು ಇಲ್ಲವಾಗಿದೆ, ಆ ಪವಿತ್ರ ವಿಜ್ಞಾನವು ಕಣ್ಕರೆಯಾಗಿದೆ. ಆ ವಿಜ್ಞಾನವು ನಾಶವಾದಾಗ, ಸೋಮಾರಿತನವು ಜೀವನ್ನುಕ್ಕಿ ಎಂಬುದಾಗಿ ಪರಿಗಣಿಸಿಸಲ್ಪಡುತ್ತದೆ, ವುತ್ತು ಆಧ್ಯಾತ್ಮಿಕತೆಯು ಸೋವರಾರಿತನವಾಗುತ್ತದೆ.
ನಿಮ್ಮ ಜೀವನದಲ್ಲಿ ಸಾಧ್ಯವಾದುದನ್ನೆಲ್ಲಾ ಬದಲಾಯಿಸುವ ಶಕ್ತಿ
ನಿವುಗಿದೆ. ಪೂರ್ವನಿಯಾಮಕವೋ ಅಥವಾ ನವುಗೆ ಇಚ್ಛಾಶಕ್ತಿ ಇದೆಯೋ ?' ಎಂದು ನನ್ನನ್ನು ಕೇಳುತ್ತಾರೆ.
ಜೀವನವು ಒಂದು ಟೇಪ್ರೆಕಾರ್ಡರ್ನಂತೆ. ನೀವು ಅಡ್ಡ ಬರದಿದ್ದರೆ ಅದು ಪೂರ್ವ ನಿಯಾಮಕದಂತೆ ನಡೆಯುತ್ತದೆ. ಆದರೆ ನೀವು ಇಚ್ಛಿಸಿದರೆ, ಂನಾವುದೇ ಸನ್ನಿವೇಶದಲ್ಲಿಯಾದರೂ ನೀವು ಮಧ್ಯೆ ಬಂದು, ಬದಲಾಯಿಸಬಹುದು. ಅದಕ್ಕೆ ಬಹಳ ಬಲವಾದ ಸಂಕಲ್ಪವೇನೂ ಬೇಕಾಗುವುದಿಲ್ಲ. ಅನೇಕ ಚಟಗಳನ್ನು, ವುನೋವ್ಯವಸ್ಥೆಗಳನ್ನು ಬದಲಾಯಿಸಲು ಕೇವಲ ಸರಳವಾದ ಪ್ರಂಯತ್ನವೇ ಸಾಕು. ವುದ್ಯಪಾನ ಅಥವಾ ಧೂಮಪಾನದಂತಹ ಪ್ರಧಾನವಾದ ಚಟಗಳ ಬಗ್ಗೆ ನಾನು ಹೇಳುತ್ತಿಲ್ಲ. ಸಾವಾನ್ಯವಾದ ವರಾನಸಿಕ ವೇದನೆಗಳು, ಸತತವಾಗಿ ಅನುಭವಿಸುವ ಅಶಾಂತಿ ವುತ್ತು ಕಿರಿಕಿರಿಂತು ಬಗ್ಗೆ ಹೇಳುತ್ತಿದ್ದೇನೆ.
ಈ ಸತತ ಕಿರಿಕಿರಿಯು ಒಂದು ಚಟವಾಗಿಬಿಟ್ಟಿರುತ್ತದೆ. ನೋಡಿರಿ, ನಿಮ್ಮಲ್ಲಿ ಕಿರಿಕಿರಿ ಉಂಟು ವರಾಡಲು ಘಟನೆಂತೋನೂ ಸಂಭವಿಸಬೇಕಾಗಿಲ್ಲ; ಕೇವಲ ಜನರ ಮೇಲೆರಗಲು ಕಾದಿರುತ್ತೀರಿ. ಅವರು ತಪ್ಪನ್ನೇನೂ ವರಾಡಬೇಕಾಗಿಲ್ಲ. ಅವರು ಕೇವಲ ನಿಮ್ಮ
ವುುಂದೆ ಆಶೀರ್ವಾದವಾಗಿಬಿಡುತ್ತದೆ ! ಜನರ ಮೇಲೆರಗಲು ಕೇವಲ ಹವಣಿಸುತ್ತಿರುತ್ತೀರಿ ! ಬೆಳಗಿನಿಂದಲೂ ಕುದಿಸುತ್ತಿರುತ್ತೀರಿ. ಇದೂ ಸಹ ಒಂದು ಬದಲಾಯಿಸಿಕೊಳ್ಳಬಹುದು. ಈಗಲೇ ಈ ಸಾಧಾರಣವಾದ ವಿಷಯಗಳನ್ನು ಬದಲಾಯಿಸಿಕೊಳ್ಳಬಹುದು. ಇದಕ್ಕೆ ಬೇಕಾದುದು ูด ల Ho ಅರಿವು.
ನೀವು, 'ಇಲ್ಲ, ಸ್ವಾಮಿೀಜಿ, ನಾನು ಬಹಳ ಸಲ ಪ್ರಯತ್ನಿಸಿ ಸೋತಿದ್ದೇನೆ, ಇನ್ನು ನನ್ನಿಂದ ಸಾಧ್ಯವಿಲ್ಲ' ಎನ್ನಬಹುದು.
ತಿಳಿಯಿರಿ, ಹಿಂದೆ ಶಾಂತಿಗಾಗಿ ನೀವು ಪ್ರಯತ್ನಿಸಿದಾಗಲೆಲ್ಲಾ, ನಿಮ್ಮ ಪ್ರಯತ್ನವಿದ್ದಷ್ಟು ಕಾಲವೂ ಶಾಂತಿ ಇರುತ್ತಿತ್ತು. ಒಮ್ಮೆ ಶಾಂತಿ ನೆಲೆಸಿದಾಗ, ಪ್ರಯತ್ನ ವರಾಡುವುದನ್ನು ಬಿಟ್ಟಿರಿ.
ನೀವು ಮರೆತಾಗ, ನಿಮ್ಮ ಪ್ರಯತ್ನವನ್ನು ನಿಲ್ಲಿಸಿದಾಗ, ಅಶಾಂತಿ ಮರುಕಳಿಸುತ್ತಿತ್ತು. ಆದರೆ ಅದು ಏಕೆ ಮತ್ತು ಹೇಗೆ ಮರುಕಳಿಸಿತು ಎಂಬುದು ನಿವುಗೆ ನೆನಪಿರುವುದಿಲ್ಲ. ನಿವುಗೆ ಕೇವಲ ಅಶಾಂತಿ ವುರುಕಳಿಸಿದುದು ವರಾತ್ರ ತಿಳಿದಿರುತ್ತದೆ. ವಾಸ್ತವವಾಗಿ, ನೀವು ನಿಮ್ಮ
ಜೀವನ್ನುಕ್ತಿ — ಒಂದು ಪರಿಚಯ
ಹಿಂದಿರುಗಿದುದು.
ನೀವು, 'ಇಲ್ಲ ಸ್ವಾವಿೀಜಿ, ನೆನ್ನೆ ಬೆಳಗ್ಗೆ ಶಾಂತವಾಗಿರಲು ಪ್ರಯತ್ನಿಸಿದೆ. ಆದರೆ ಇಂದು ನಾನು ಶಾಂತನಾಗಿಲ್ಲ !' ಎನ್ನಬಹುದು.
ನೆನ್ನೆ ಬೆಳಗ್ಗೆ ನೀವು ಶಾಂತವಾಗಿರಲು ಪ್ರಂಸುತ್ನಿಸಿದಿರಿ, ಆದರೆ ಸಂಜೆಯ ವೇಳೆಗೆ ಶಾಂತವಾಗಿರಬೇಕೆಂಬುದನ್ನು ಮರೆತಿರಿ ! ನಿಮ್ಮ ಪ್ರಯತ್ನವನ್ನು ಬಿಟ್ಟಿರಿ, ಆದುದರಿಂದಲೇ ನಿವುಜು ಅಶಾಂತಿ ಹಿಂದಿರುಗಿತು. ನೀವು ನಿಮ್ಮ ಪ್ರಯತ್ನವನ್ನು ವರಾಡಿದಾಗಲೆಲ್ಲಾ ಪರಿಣಾಮವಿರುತ್ತದೆ. ಪ್ರಯತ್ನವನ್ನು ನಿಲ್ಲಿಸಿದಾಗ ಮಾತ್ರ ಮನಸ್ಸು ಹಿಂದಕ್ಕೆ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ನೀವು ನಿಮ್ಮ ಪ್ರಯತ್ನವನ್ನು ಪ್ರಾರಂಭಿಸಿದುದನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುವಿರಿ, ಅದರೆ ವುರೆತುದನ್ನಲ್ಲ. ನೀವು ನಿಮ್ಮ ಮನಸ್ಸನ್ನು ಅಲೆದಾಡಲು ಬಿಟ್ಟು ಅಶಾಂತರಾಗುತ್ತೀರಿ.
ಆದುದರಿಂದ, ಈ ಮುಖ್ಯವಾದ ಸತ್ಯವನ್ನು ತಿಳಿದುಕೊಳ್ಳಿರಿ. ನೀವೇನನ್ನು ಬದಲಾಯಿಸಬಹುದೋ ಅದನ್ನು ಬದಲಾಯಿಸುವುದು ಶಕ್ಕಿ. ನಿಮ್ಮಿಂದೇನನ್ನು ಬದಲಾಯಿಸಲು ಸಾಧ್ಯವೋ ಅದನ್ನು ಬದಲಾಯಿಸುವ ಶಕ್ತಿ ನಿವುಗಿದೆ. ನಿಮ್ಮ ಜೀವನದಲ್ಲಿ
ಬದಲಾಯಿಸಲು ಸಾಧ್ಯವಾಗುವ ಅದೆಷ್ಟೋ ವಿಷಯಗಳಿವೆ. ಆದರೆ ಅದಕ್ಕೆ ನಿಮ್ಮ ಶಕ್ತಿಂತುನ್ನು ವಿನಿಯೋಗಿಸುವುದಿಲ್ಲ.
ನಡೆದ ಒಂದು ಘಟನೆಯನ್ನು ಹೇಳುತ್ತೇನೆ.
ಒಂದು ದಿನ ಒಬ್ಬಾತನು ಬಂದು, ಸ್ವಾವೀಜಿ, ನಾನು ನಿವುಗೆ ಶರಣಾಗಿದ್ದೇನೆ. ನೀವೇ ನನ್ನನ್ನು ಕಾಪಾಡಬೇಕು'ಎಂದನು.
'ಶರಣಾಗಿದ್ದೇನೆ ಎಂದರೆ ನಿನ್ನ ಅರ್ಥವೇನು ? ನಿನ್ನನ್ನು ನಾನು ಕಾಪಾಡಬೇಕೆಂದೇಕೆ ಬಯಸುತ್ತಿದ್ದೀಯೆ ?' ಎಂದು ನಾನು ಕೇಳಿದೆ.
ಆತನು, 'ಸ್ವಾಮೀಜಿ, ನಾನು ಹೋಗಬಾರದ ಸ್ಥಳಗಳಿಗೆ ಹೋಗುವ ದುರಭ್ಯಾಸವನ್ನಿಟ್ಟುಕೊಂಡಿದ್ದೇನೆ. ನಾನು ನನ್ನ ಹೆಂಡತಿಗೆ ಪ್ರಾಮಾಣಿಕನಾಗಿಲ್ಲ. ಈಗ ನಾನು ನಿಮಗೆ ಶರಣಾಗಿರುವುದರಿಂದ ನೀವು ಈ ದುರಭ್ಯಾಸವನ್ನು ಹೋಗಲಾಡಿಸಲು ಸಹಾಯ ಮಾಡಬೇಕು'ಎಂದನು.
ನಾನು ಆತನೊಡನೆ ಕುಳಿತು ಸ್ವಲ್ಪ ಕಾಲ ಕಳೆದೆ. 'ಇದು ಸರಿಯಲ್ಲ, ನಿನ್ನ ಹೆಂಡತಿಯ ಬಗ್ಗೆ ಏಕೆ ಚಿಂತಿಸುವುದಿಲ್ಲ ? ನೀನು ಪ್ರೀತಿಗೆ ಸ್ಪಂದಿಸುತ್ತಿಲ್ಲ, ನೀನು ದಾಂಪತ್ಯ ಸಂಬಂಧವನ್ನು ಗೌರವಿಸುತ್ತಿಲ್ಲ' ಎಂದೆ. ನಾನು ಹೀಗೆಯೇ ಕೆಲವು ವಾತುಗಳನ್ನಾಡಿದ ಮೇಲೆ ಆತನು ಹೊರಟು ಹೋದನು.
ಕೆಲವು ವಾರಗಳ ನಂತರ ಆತನು ಮತ್ತೆ ಬಂದು, 'ಸ್ವಾಮೀಜಿ, ನೀವು ನನ್ನನ್ನು
ಜೀವನ್ನುಕ್ತಿ — ಒಂದು ಪರಿಚಯ
ಉದ್ದಾರ ಮಾಡಿಯೇ ಇಲ್ಲ ! ನಾನು ನಿಮಗೆ ಶರಣಾಗಿದ್ದೇನೆ. ಆದರೆ ನಾನು ಇನ್ನೂ ಅದನ್ನೇ ಮಾಡುತ್ತಿದ್ದೇನೆ !' ಎಂದನು.
ನಾನು, 'ನಿನ್ನ ಅರ್ಥವಾದರೂ ಏನು ?' ಎಂದು ಕೇಳಿದೆ.
ಆತನು, 'ಹಾಗಲ್ಲ, ನಾನು ನಿವುಗೆ ಶರಣಾದೆ. ಆದರೂ ನಾನಿನ್ನೂ ಆ ಹಳಬನಾಗಿಂತೇ ಇದ್ದೇನೆಲ್ಲಾ !' ಎಂದನು.
ನಾನು, 'ಹಾಗೆಂದರೇನು ? ನಾನು ನಿನ್ನ ಕಾರಿನ ಬೀಗದ ಕೈಯನ್ನು ಬಚ್ಚಿಟ್ಟು, ಬೇರೆಲ್ಲೂ ಹೋಗಬೇಡವೆನ್ನಬೇಕೆ ? ನಿನಗೇ ಸ್ವಾತಂತ್ರ್ಯವಿದೆಯಲ್ಲಾ ! ನೋಡು, ನಿನಗೆ ಸ್ವಾತಂತ್ರ್ಯ ಬೇಕಾಗಿದ್ದಾಗ.... ನಿನ್ನ ಇಷ್ಟ ಬಂದಂತೆ ಇರಲಿಚ್ಛಿಸಿದಾಗ.... ನಾನು ನಿನಗೆ ತಿಳಿವಳಿಕೆಂತುನ್ನು ವರಾತ್ರ ಕೊಡಬಲ್ಲೆ. ಅಳವಡಿಸಿಕೊಳ್ಳಬೇಕಾದವನು ನೀನು' ಎಂದೆ.
ನಂತರ, 'ಶರಣಾದೆ' ಎನ್ನುವ ನಿನ್ನ ಮಾತಿನ ಅರ್ಥವೇನು ? ನಾನು ನಿನ್ನನ್ನು ಕಾಪಾಡಬೇಕೆಂಬ ನಿನ್ನ ಅರ್ಥವಾದರೂ ಏನು ? ನೀನು ಆ ವಿಪರೀತಕ್ಕೆ ಹೋಗಬೇಕೆಂದಿದ್ದ ಪಕ್ಷದಲ್ಲಿ, ಇಲ್ಲಿಯೇ ಕುಳಿತುಕೋ, ಬೇರೆಲ್ಲಿಯೂ ಹೋಗಬೇಡ !' ಎಂದೆ.
ಅಂತಹ ಸಂದರ್ಭದಲ್ಲಿ ನೀವು, 'ಇಲ್ಲ. ಇಲ್ಲ ! ನನಗೆ ಸ್ವಾತಂತ್ರ ಬೇಕು' ಎನ್ನುವಿರಿ, ಆಗ ನಾನು, 'ಆಗಲಿ, ಸ್ವತಂತ್ರವಾಗಿರಿ ! ನಿಮ್ಮ ಜೀವನವನ್ನು ಅರಿವಿನಿಂದ ಸಾಗಿಸಲು
ಸ್ನತಂತ್ರದ ಜೊತೆಗೆ ಈ ತಿಳಿವಳಿಕೆಂಸ್ಕೂ ಪಡೆಯಿರಿ' ಎನ್ನಬೇಕಾಗುತ್ತದೆ.
ವಾಸ್ತವಾಗಿ, ನಿಮಗೆ ತಿಳಿವಳಿಕೆ ಬೇಕಾಗಿಲ್ಲ, ನೀವು ಬಯಸುವುದು ಸ್ವಾತಂತ್ರ್ಯ ವನ್ನು. ಆದರೆ ಏನಾದರೂ ಸರಿಂನಾಗದಿದ್ದಾಗ, 'ಇಲ್ಲ, ಇಲ್ಲ ! ನಾನು ಈ ದೇವರಿಗೆ ಶರಣಾಗಿದ್ದೇನೆ. ನಾನು ಆ ಗುರುವಿಗೆ ಶರಣಾಗಿದ್ದೇನೆ; ಆದರೂ ಏನೂ ಆಗಿಲ್ಲ !' ಎಂದು ಹೇಳುತ್ತೀರಿ.
ನಿಮ್ಮ ಜೀವನದಲ್ಲಿ ಅನೇಕ ವಿಷಂತುಗಳನ್ನು ಬದಲಾಯಿಸುವ ಸ್ವಾತಂತ್ರ್ಯ ನಿವುಗಿದೆ. ಆದರೂ, ನಿವುಗೆ ಇಷ್ಟವಿರುವುದಿಲ್ಲ. ನಿವುಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಕ್ಕೆ ಇಷ್ಟವಿರುವುದಿಲ್ಲ. ನಿಮಗೆ ತಿಳಿವಳಿಕೆ ಇದ್ದರೆ, ನಿಮ್ಮ ಸ್ವಾತಂತ್ರ್ಯವನ್ನು ಬುದ್ದಿವಂತಿಕೆಯೊಂದಿಗೆ ಉಪಯೋಗಿಸುತ್ತೀರಿ. ಅದನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ. ನಿಮ್ಮ ಜೀವನಕ್ಕೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೀರಿ.
ನಿಮ್ಮನ್ನು ರಕ್ಷಿಸುವ ದೇವರು ನೀವೇ ಎಂದು ತಿಳಿಯಿರಿ. ನಿಮ್ಮನ್ನು ಉದ್ಗರಿಕೊಳ್ಳುವವರು ನೀವೇ ಎಂದು ತಿಳಿಯಿರಿ. ನಿಮ್ಮನ್ನು ನೀವು ಉದ್ಗರಿಸಿಕೊಳ್ಳಲಾಗದಿದ್ದರೆ, ನಿಮಗೆ ನೀವೇ ಅತ್ಯಂತ ಕೆಟ್ಟ ಶತ್ರು. ನಿಮ್ಮನ್ನು ನೀವು ಉದ್ದರಿಸಿಕೊಳ್ಳಲು ಸಾಧ್ಯವಾದರೆ, ನಿಮಗೆ ನೀವೇ ಆಪ್ತಸ್ನೇಹಿತ. ಇದನ್ನು ನೀವೇ ಮಾಡಬೇಕು.
ಆದ್ದರಿಂದ ಜೀವನ್ಮುಕ್ತಿಯ ವೊದಲ ತಂತ್ರವು ನಿಮ್ಮ ಜೀವನದಲ್ಲಿ ಬದಲಾಯಿಸಲಾಗುವುದನ್ನು ಬದಲಾಯಿಸುವ ಶಕ್ತಿಯನ್ನು ವ್ಯಕ್ತಪಡಿಸುವುದು.
ಸಣ್ಣ ಪರಿವರ್ತನೆಗಳ ಪ್ರಭಾವ
ಮತ್ತೊಂದು ವಿಷಯ: ನೀವು ಮಾಡುವ ಸಣ್ಣ ಬದಲಾವಣೆಗಳೂ ನಿಮ್ಮ ಜೀವನದಲ್ಲಿ ನೀವು ಮಾಡುವ ಸಣ್ಣ ಬದಲಾವಣೆಗಳ ಪ್ರಭಾವವು ನಿಮಗೆ ತಿಳಿದಿಲ್ಲ. ಬದಲಾವಣೆಗಳನ್ನು ವರ್ಷಗಳಲ್ಲಿಯೇ ಕಾಣುವಿರಿ !
ಇದ್ದಕ್ಕಿದ್ದಂತೆ, ಆ ಸಣ್ಣ ಬದಲಾವಣೆಗಳ ಸಮಷ್ಟಿಯ ಪ್ರಭಾವವನ್ನು ಕಾಣುತ್ತೀರಿ. ಕಾಲ ಕಳೆದಂತೆ, ಅವು ಒಂದು ದೊಡ್ಡ ಪರಿವರ್ತನೆಗೆ ಕಾರಣವಾಗುತ್ತವೆ. ಅದು ಕೆಲವು ಸರಳವಾದ ಬದಲಾವಣೆಗಳ ಸವುಷ್ತಿಯು ಪ್ರಭಾವ. ಆದರೆ ಏಕೋ ಏನೋ ನಾವು ಆ ಸರಳವಾದ ಬದಲಾವಣೆಗಳನ್ನು ಗೌರವಿಸುವುದೇ ಇಲ್ಲ. ನಮಗೆ ಧಿಡೀರ್ ಪರಿವರ್ತನೆ ಬೇಕಾಗಿರುತ್ತದೆ, ಆದರೆ ಅದಕ್ಕೆ ಬೇಕಾದ ತೀವ್ರತೆ ಇರುವುದಿಲ್ಲ. ಇರುವ ಒಂದೇ ಆಯ್ಕೆ ಎಂದರೆ ನಿಮ್ಮಿಂದ ಬದಲಾಗುವುದನ್ನು ಬದಲಾಯಿಸಲು ಶಕ್ತಿಯನ್ನು ವ್ಯಕ್ತಪಡಿಸುವುದು.
ಜನರು ಸಾವರಾನ್ಯವಾಗಿ, 'ಇಲ್ಲ ಸ್ವಾಮೀಜಿ, ನಾನು ಬದಲಾಗಬೇಕು, ಆದರೆ ನನ್ನಿಂದ ಕುಡಿಯುವುದನ್ನು, ಧೂಮಪಾನ ಸೇವನೆಯನ್ನು ಬಿಡಲಾಗುತ್ತಿಲ್ಲ. ನನ್ನಿಂದ ಬದಲಾಗಲು ಆಗುತ್ತಿಲ್ಲ' ಎಂದು ಗೊಣಗುತ್ತಾರೆ.
ಈ ಎಲ್ಲವನ್ನೂ ನಿಮ್ಮಿಂದ ಬದಲಾಯಿಸಲು ಆಗಬಹುದು ಅಥವಾ ಆಗದಿರಬಹುದು, ಏಕೆಂದರೆ ಅದು ನಿಮ್ಮ ವ್ಯವಸ್ಥೆಯ ಒಂದು ಭಾಗವಾಗಿದೆ ಎಂದು ತಿಳಿಯಿರಿ. ಆದರೆ ನಿಮ್ಮಿಂದ ಕೂಡಲೆ ಬದಲಾಯಿಸಿಕೊಳ್ಳಬಹುದಾದ ಒಂದು ವಿಷಂತುವಿದೆ. ಅದನ್ನೇ ನಾನು ಸ್ತಿತ್ಯಂತರ ಎನ್ನುವುದು. ಇದ್ದಕ್ಕಿದ್ದಂತೆ ಬದಲಾಗುವುದನ್ನೇ ನಾನು ಸ್ತಿತ್ಯಂತರ ಎನ್ನುವುದು. ಇದು ಉಂಟಾಗಲು ನಿಮ್ಮ ತಿಳಿವಳಿಕೆಂಸುನ್ನು ಬದಲಾಯಿಸಿಕೊಳ್ಳಬೇಕು.
ನಿಮ್ಮ ಬಗ್ಗೆ, ಪ್ರಪಂಚದ ಬಗ್ಗೆ ಹಾಗೂ ನಿಮ್ಮ ಜೀವನದ ಬಗ್ಗೆ ನಿಮ್ಮ ತಿಳಿವಳಿಕೆಯನ್ನು ಬದಲಾಯಿಸಿಕೊಳ್ಳಿರಿ. ಮತ್ತೇನೂ ವಾಡಬೇಕಾಗಿಲ್ಲ. ಅದು ಸರಳವೆಂಬಂತೆ ತೋರಬಹುದು. ಆದರೆ ಅನುಸರಿಸಿದಾಗ, ಅದೊಂದು ಮಹತ್ತರ ಪರಿವರ್ತನೆಂತುನ್ನು ತರುತ್ತದೆ. ಆಗ ಸ್ತಿತ್ಯಂತರವು ಶ್ರಮವಿಲ್ಲದೆಯೇ ಆಗುತ್ತದೆ.
ನೋಡಿರಿ, ನೀವು ಸಾಧ್ಯವಾದದ್ದನ್ನು ಬದಲಾಯಿಸಲು ಬೇಕಾದ 'ಶಕ್ತಿ' ಎಂಬ ಪದವನ್ನು ನಾನು ಉಪಯೋಗಿಸಿದಾಗಲೆಲ್ಲಾ, ಅದರ ಅರ್ಥವೇನೆಂದರೆ, ನೀವು ಬದಲಾಯಿಸಿರಿ, ಎಂದು. ನಾನು ಜನರಿಗೆ ಬದಲಾಗಿರೆಂದು ಹೇಳಿದಾಗಲೆಲ್ಲಾ, ಅವರು ಕೂಡಲೆ ವುದ್ಯಪಾನ ಹಾಗೂ ಧೂಮಪಾನ ಸೇವನೆಗಳನ್ನು ಬಿಡಲು ಂದುತ್ತಿಸುತ್ತಾರೆ. ಅವರು ತಪ್ಪಾದ ದೃಷ್ಟಿಕೋನದಿಂದ ಆರಂಭಿಸುತ್ತಾರೆ. ವುದ್ಮಪಾನ, ಧೂಮಪಾನ ಅಥವಾ ಯಾವುದಾದರೂ ಪ್ರಬಲವಾದ ಚಟವನ್ನು ಬಿಡಲು ಒದ್ದಾಡುತ್ತಾರೆ. ಆಗ ಸೋಲಾಗುವುದು ಖಂಡಿತ.
ಮೊದಲು, ನಿಮ್ಮ ಚಿಂತನೆಯ ವಿಧಾನವನ್ನು, ನಿಮ್ಮ ತಿಳಿವಳಿಕೆಯನ್ನು ಬದಲಾಯಿಸಬೇಕು. ಪ್ರಪಂಚದ ಬಗ್ಗೆ ನಿಮ್ಮನ್ನೂ, ಇತರರನ್ನೂ ಅನೇಕ ಬಾರಿ ವಿಚಲಿತಗೊಳಿಸುವ ಬಹಳ ಅಭಿಪ್ರಾಯಗಳೂ ತಿಳಿವಳಿಕೆಗಳೂ ನಿವುಗಿವೆ. ಅವನ್ನು ಮೊದಲು ಬದಲಾಯಿಸಿರಿ.
ವಾಸ್ತವವಾಗಿ, ಕೇವಲ ನೀವು ವೀಕ್ಷಿಸುವ ರೀತಿಂತುನ್ನು ಬದಲಾಯಿಸಿದರೆ, ನಿಮ್ಮ ಚಟಗಳು ತಾವಾಗಿಯೇ ಬದಲಾಗುತ್ತವೆ. ಅವು ಬದಲಾಗದಿದ್ದರೂ ಪರವಾಗಿಲ್ಲ. ಹಾಗೆಂದ ವಾಾತ್ರಕ್ಕೆ ನಿಮಗೆ ಬೇಕಾದುದನ್ನು ವಾಡಲು ನಾನು ಪರವಾನಗಿಯನ್ನು ನೀಡುತ್ತಿಲ್ಲ. ಇಲ್ಲ ! ಬದಲಾಯಿಸಲಾರಂಭಿಸಿದರೆ, ಅನೇಕ ಚಟಗಳು ತಾವಾಗಿಯೋ ಬಿಟ್ಟು ಹೋಗುತ್ತವೆ.
ನೀವಾಗಿಯೇ ಬದಲಾಗುತ್ತೀರಿ. ನಿಮ್ಮ ಇಡೀ ಜೀವನವೇ ಬದಲಾಗಿರುವುದನ್ನು ಮನಗಾಣುತ್ತೀರಿ. ನಿಮ್ಮ ತಿಳಿವಳಿಕೆ, ನೀವು ಯೋಚಿಸುವ ರೀತಿ, ಎಲ್ಲವೂ ಬದಲಾಗುತ್ತದೆ. ನಿಮ್ಮ ಆಂತರಿಕ ಸಾಫ್ಟ್ವೇರ್(ವುನಸ್ಸಿನ ಕಾರ್ಯ ವಿಧಾನ)ನ್ನು ಬದಲಾಯಿಸಬಹುದು. ನೀವು ಎಲ್ಲದರ ಬಗ್ಗೆಯೂ ಹೆಚ್ಚು ಸ್ಪಷ್ಟತೆ ಹಾಗೂ ತಿಳಿವಳಿಕೆಂಸುನ್ನು ಪಡೆಯಬಹುದು.
ಧರ್ಮ–ವಿಶ್ವದ ಕಾನೂನು
ಧರ್ಮವೆಂಬ ಮತ್ತೊಂದು ಸತ್ಯದ ಬಗ್ಗೆ ತಿಳಿದುಕೊಳ್ಳಿರಿ. ಧರ್ಮವೆಂದರೆ, ಬ್ರಹ್ಮಾಂಡವು ನಡೆಯುವ ರೀತಿಯ ಬಗ್ಗೆ ಇರುವ ನೈತಿಕ ಅಭಿಪ್ರಾಯ ! ಧರ್ಮವು ಒಂದು ನಂಬಿಕೆಯ ವ್ಯವಸ್ಥೆಯಲ್ಲ. ಒಬ್ಬ ವಕೀಲರೊಡನೆ ವರಾತನಾಡಿದರೆ, ದೇಶವು ಹೇಗೆ ನಡೆಯುತ್ತಿದೆ ಎಂಬುದರ ಬಗ್ಗೆ ತಿಳಿಯಬಹುದು. ಅದೇ ರೀತಿ, ವಿಶ್ವಪ್ರೇವುವನ್ನು ಸವಿದಿರುವ ಒಬ್ಬ ಆಧ್ಯಾತ್ಮಿಕ ವ್ಯಕ್ತಿಯೊಂದಿಗೆ ವಾತನಾಡಿ, ಅವರನ್ನು ಸಂಪರ್ಕಿಸಿ, ಅವರ ಅಭಿಪ್ರಾಯಗಳನ್ನು ಪಡೆದರೆ, ವಿಶ್ವವು ಹೇಗೆ ಕೆಲಸ ವನಾಡುತ್ತಿದೆಂಬುದರ ಬಗ್ಗೆ ಅಭಿಪ್ರಾಯವನ್ನು ಪಡೆದುಕೊಳ್ಳುತ್ತೀರಿ !
ನಾನು ಮಾತನಾಡುವುದೆಲ್ಲವೂ ವಿಶ್ವದ ನೈತಿಕ ಅಭಿಪ್ರಾಯ. ಅದನ್ನೇ ನಾನು ಧರ್ಮ ಎನ್ನುವುದು. ಆದ್ದರಿಂದ, ಅಂತರ್ಗತಗೊಳಿಸಿಕೊಳ್ಳುವುದು ಎಂದರೆ, ಕೇವಲ ಕೆಲವು ವಿಷಯಗಳನ್ನು ನಂಬುವುದಲ್ಲ. ವಿಶ್ವವು ಹೇಗೆ ನಡೆಯುತ್ತಿದೆ, ಪ್ರಕೃತಿಯ ಕಾನೂನುಗಳು ಹೇಗೆ ಕೆಲಸ ವಾಡುತ್ತವೆಂಬ ವಿಷಯಗಳನ್ನು ತಿಳಿಯುವುದೇ ಧರ್ಮ. ಸ್ಪಷ್ಟವಾಗಿ ತಿಳಿಯಿರಿ, ಇಂದು ಏನಾದರೂ ಕೆಟ್ಟದ್ದನ್ನು ವರಾಡಿ, ಆ ಕಾರಣದಿಂದ ನಾಳೆ ನಿಮಗೆ ಏನೋ ಕೆಟ್ಟದ್ದಾಗುತ್ತದೆ ಎಂದು ನಂಬಿದರೆ, ಅದು ಧರ್ಮವಲ್ಲ.
ನಿಜವಾಗಿ ಏನು ನಡೆಯುತ್ತದೆಂತೋ ಅದರೊಂದಿಗೆ ವಿರ್ತಕದ ಭಾವನೆಂತುನ್ನು (ಅಂದರೆ ಆಳವಾದ ಸಂಬಂಧ'ವಿರುವ ಭಾವನೆಯನ್ನು ಹೊಂದಿ - feeling connected), ಅದನ್ನು ಮನನ ವುಾಡಿಕೊಂಡು, ಅದನ್ನು ತಿಳಿಯುವುದೇ ಧರ್ಮ. ಅದನ್ನು ನಿಮ್ಮ ಮಿತಿಯಾದ ತರ್ಕದಿಂದ ಇಂದು ತಿಳಿಯುಲಾಗದಿರಬಹುದು, ಆದರೆ, ಧರ್ಮವನ್ನು ತಿಳಿಯಲು ನಿಮ್ಮ ತರ್ಕವನ್ನು ವಿಸ್ತರಿಸಿದಾಗ, ನಿಮ್ಮ ಮನೋವ್ಯವಸ್ಥೆಯು ಬದಲಾಗುತ್ತದೆ. ಸ್ತಿತ್ಯಂತರವು ಸುಲಭವಾಗಿ ಆಗುತ್ತದೆ.
ನೀವು ತಿಳಿಯಬೇಕಾದ ಮುಖ್ಯವಾದ ಒಂದು ವಿಷಯವೆಂದರೆ, ಸ್ಠಿತ್ಯಂತರವಾದಾಗ, ನಿಮ್ಮ ವರಾನಸಿಕ ವ್ಯವಸ್ಥೆಯು ಬದಲಾದಾಗ, ನಿಮ್ಮ ಮೆದುಳಿನ ಯಾಂತ್ರಿಕವಲ್ಲದ ಭಾಗಗಳು ಜಾಗೃತವಾಗುತ್ತವೆ.
ಕೇವಲ ನೀವು ಮನುಷ್ಯರಾಗಿರುವ ಕಾರಣದಿಂದ, ನೀವು ಹುಟ್ಟಿದ ಕ್ಷಣದಿಂದಲೇ ನಿಮ್ಮ ಮೆದುಳಿನ ಕ್ರಿಯಾಶೀಲವಾಗಿರುತ್ತವೆ. ಆದರೆ, ಮಹಾ ಸತ್ಮಗಳನ್ನು, ವಿಶ್ವದ ಧರ್ಮವನ್ನು ತಿಳಿಯಲಾರಂಭಿಸಿದಾಗ, ನಿಮ್ಮ ಮೆದುಳಿನ ಂರಾಂತ್ರಿಕವಲ್ಲದ ಭಾಗಗಳೂ ಜಾಗೃತವಾಗುತ್ತವೆ. ಇದನ್ನು ದ್ವಿಜ, ಎರಡನೆಯ ಜನನ ಅಥವಾ ಪುನರ್ಜನ್ಜವೆನ್ನುತ್ತಾರೆ. ಆದ್ದರಿಂದಲೇ ಭಾರದ ಸಂಪ್ರದಾಯದಲ್ಲಿ ಆಧ್ಯಾತ್ಮಿಕತೆಗೆ ದೀಕ್ಷೆ ನೀಡಿದಾಗ, ನಿಮ್ಮನ್ನು ದ್ವಿಜ ಎನ್ನುತ್ತಾರೆ. ಈಗ ನೀವು ವಿಶ್ವದ ಧರ್ಮವನ್ನು ತಿಳಿಂತುಬಲ್ಲವರೆಂದು ಅದರರ್ಥ. ನಿಮ್ಮದು ಹೊಸದಾಗುತ್ತದೆ. ಅದು ಪ್ರಾಣಿಗಳಂತೆ ಭಯ ಹಾಗೂ ದುರಾಸೆಯ ಮೇಲೆ ಆಧಾರಿತವಾಗಿರುವುದಿಲ್ಲ.
ಪ್ರಾಣಿಗಳು ಂನೋಚಿಸಬೇಕಾಗಿಲ್ಲ. ಏಕೆಂದರೆ ಅವು ಏನನ್ನೂ ವನಾಡಬೇಕಾಗಿಲ್ಲ. ಅವು ವರಾಡುವುದೆಲ್ಲವೂ ಭಯ ಹಾಗೂ ದುರಾಸೆಗಳ ಮೇಲೆ ಆಧಾರಿತವಾಗಿಯೇ ಇರುತ್ತದೆ. ನೀವು ಭಯ ವತ್ತು ದುರಾಸೆಗಳ ಆಧಾರದ ಮೇಲೆಯೇ ವರ್ತಿಸಿದರೆ, ನಿಮ್ಮ ಮೆದುಳಿನ ಯಾಂತ್ರಿಕ ಭಾಗಗಳೇ ಸಾಕಾಗುತ್ತವೆ. ಆದರೆ, ಭಯ ಹಾಗೂ ದುರಾಸೆಗಳನ್ನು ಮೀರಿ ಹೋಗಲು, ನಿಮ್ಮ ಮೆದುಳಿನ ಯಾಂತ್ರಿಕವಲ್ಲದ ಭಾಗಗಳೂ ಜಾಗೃತವಾಗಬೇಕು. ಯಾಂತ್ರಿಕವಲ್ಲದ ಮೆದುಳಿನ ಭಾಗಗಳ ಜಾಗೃತಿಯನ್ನೇ ಕುಂಡಲಿನೀ ಜಾಗೃತಿ ಎನ್ನುವುದು.
ಚಟಗಳ ಬಗ್ಗೆ ಇನ್ನೂ ಆಳವಾದ ರಹಸ್ಯಗಳು
ತಿಳಿವಳಿಕೆಯನ್ನು ಬದಲಾಯಿಸುವ ವರಾತ್ರದಿಂದಲೇ, ಶಕ್ತಿಂಬನ್ನು ಹೇಗೆ ಜಾಗೃತಗೊಳಿಸಲು ಸಾಧ್ಯವೆಂದು ಜನರು ನನ್ನನ್ನು ಕೇಳುತ್ತಾರೆ. ನೋಡಿರಿ, ನಿಮ್ಮ ದಿನನಿತ್ಯ ಜೀವನದಲ್ಲಿ, ಒಂದು ನಿರ್ದಿಷ್ಟ ವೇಳೆಗೆ ನಿಮಗೆ ಆಯಾಸವಾಗುವಂತೆ ಅಭ್ಯಾಸ ವನಾಡಿಕೊಂಡಿದ್ದರೆ, ಆ ನಿರ್ದಿಷ್ಟ ಸವುಂದುಕ್ಕೆ ನಿಮಗೆ ಆಂರವಾಸವಾಗುತ್ತದೆ. ಇಡೀ ದಿನ ಕೆಲಸ ವರಾಡದಿದ್ದಾಗಲೂ, ನಿಮಗೆ ಆಂಕಾಸವಾಗುತ್ತದೆ !
ಉದಾಹರಣೆಗೆ, ನೀವು ಆಫೀಸಿಗೆ ಹೋಗಬೇಕೆಂಬ ಕಾರಣದಿಂದ ಸಾವನಾನ್ಯವಾಗಿ ಬೆಳಗ್ಗೆ 9.30 ಕ್ಕೆ ನಿರುತ್ಸಾಹ ಉಂಟಾಗುತ್ತದೆ ಎಂದಿಟ್ಟುಕೊಳ್ಳೋಣ. ನೀವು ಆಫೀಸಿಗೆ ಹೋಗಬೇಕಾಗಿಲ್ಲದ ಭಾನುವಾರಗಳಂದೂ ಆ ನಿರ್ದಿಷ್ಟ ಸಮಯುದಲ್ಲಿ ಮಂಕಾಗಿರುತ್ತೀರಿ. ನಿಮ್ಮಲ್ಲಿ ಖಿನ್ನತೆ ಉಂಟಾಗುತ್ತದೆ. ಇದ್ದಕ್ಕಿದ್ದಂತೆ ನೀವೆಂದುಕೊಳ್ಳುವಿರಿ, 'ಓ, ಇಂದು ಭಾನುವಾರ. ನಾನು ಆಫೀಸಿಗೆ ಹೋಗಬೇಕಾಗಿಲ್ಲ. ಇನ್ನು ಹಾಯಾಗಿರೋಣ' ಎಂದು. ಆದರೆ ಆಗಲೂ ಸಹ, ಖಿನ್ನತೆ ಹೋಗುವುದಿಲ್ಲ. ನೀವಿನ್ನೂ ನಿರುತ್ಸಾಹದಿಂದಲೇ ಇರುತ್ತೀರಿ.
ನಿಮ್ಮ ಮಾನಸಿಕ ವ್ಯವಸ್ಥೆಯು ನಿಮ್ಮ ಕುಂಡಲಿನೀ ಜಾಗೃತಿಗೆ ನೇರವಾಗಿ ಸಂಬಂಧಿಸಿದೆ. ಆದ್ದರಿಂದ ನಿಮ್ಮಿಂದ ಬದಲಾಯಿಸಲಾಗುವುದನ್ನು ಬದಲಾಯಿಸಲು, ನಿಮ್ಮ ತಿಳಿವಳಿಕೆಯನ್ನು ಬದಲಾಯಿಸಲು ಶಕ್ಕಿಯನ್ನು ಉಪಯೋಗಿಸಿದಾಗ, ನಿಮ್ಮಲ್ಲಿರುವ ಅಸಾಧಾರಣ ಶಕ್ತಿಂದುನ್ನು ಜಾಗೃತಗೊಳಿಸುತ್ತೀರಿ.
ನಿಮ್ಮಲ್ಲಿರುವ ಯಾವುದೇ ಒಂದು ಚಟದೊಂದಿಗೆ ಹೋರಾಡಿದಾಗ, ಅದು ನಿಮ್ಮಲ್ಲಿ ಅಸಾಧಾರಣ ಶಕ್ತಿಂತುನ್ನು ಜಾಗೃತಗೊಳಿಸುತ್ತದೆಂದು ಪತಂಜಲಿ ಮಹರ್ಷಿಗಳು ಸುಂದರವಾಗಿ ಹೇಳುತ್ತಾರೆ. ಚಟ ಎಂದರೆ ಶಕ್ತಿಯನ್ನು ಅನಾವಶ್ಯಕವಾಗಿ ತಪ್ಪು ದಾರಿಂದುಲ್ಲಿ ವ್ಯಯಿಸುವುದು ಎಂದರ್ಥ. ಅದು ಬೆಳಗಾಗೆದ್ದು ಕಾಫಿ ಕುಡಿಯುವಂತಹ ಸರಳವಾದದ್ದೇ ಆದರೂ, ಒಂದು ಚಟವನ್ನು ಮುರಿದಾಗ, ನಿಮ್ಮ ವ್ಯವಸ್ಥೆಯೊಳಗೆ ಅಸಾಧಾರಣವಾದ ಶಕ್ತಿ ಬಿಡುಗಡೆಂತನಾಗುತ್ತದೆ. ಆದ್ದರಿಂದಲೇ ನಮ್ಮ ಸಂಪ್ರದಾಯಗಳಲ್ಲಿ ಉಪವಾಸ ಹಾಗೂ ಜಾಗರಣೆ ಮಾಡುವ ಪದ್ಧತಿಗಳಿರುವುದು. ನಮ್ಮ ಅಭ್ಯಾಸಗಳನ್ನು ವುುರಿದು, ಒಂದು ನವಶಕ್ತಿಯು ಹರಿವನ್ನು ಸೃಷ್ಟಿಸಲೆಂದೇ ಅವು ಇರುವವು.
ಚಟವೆಂದರೇನೆಂದು ನೀವು ಕೇಳಬಹುದು. ನಿಮ್ಮ ಅರಿವನ್ನು ಈ ಕ್ಷಣಕ್ಕೆ ತಂದುಕೊಳ್ಳದೆ, ಒಂದು ಂನಾಂತ್ರಿಕ ಬಾಳುವುದನ್ನೇ ಚಟವೆನ್ನುವುದು. ನಿಮ್ಮ ಇಡೀ ಜೀವನವು ಎರಡು ಭಾಗಗಳನ್ನೊಳಗೊಂಡಿದೆ: ಒಂದು ಚಟ, ಮತ್ಕೊಂದು ಧ್ಯಾನ. ಅರಿವಿಲ್ಲದೆಯೇ ಏನನ್ನಾದರೂ ವಾಡುವುದೇ ಚಟ; ಏನನ್ನಾದರೂ, ಯಾವುದೇ ಕ್ರಿಯೆಯನ್ನಾದರೂ ಅರಿವಿನಿಂದ ಮಾಡುವುದೇ ಧ್ಯಾನ.
ವಾಹನ ಚಾಲನೆ ವಾಡುವುದೂ ಒಂದು ಚಟ ! ಇದನ್ನು ಕೇಳಲು ನಿಮಗೆ ಆಶ್ಚಂರ್ಯವಾಗಬಹುದು. ವಾಹನ ಚಾಲನೆಂತುು ಹೇಗೆ ಒಂದು ಚಟವಾಗಬಲ್ಲುದೆಂದು ನಿಮಗೆ ಆಶ್ಚಂರ್ಯವಾಗಬಹುದು. ನಿಮ್ಮ ಆಫೀಸ್ವರೆಗಿನ ನಿಮ್ಮ ವಾಹನ ಚಾಲನೆಯನ್ನು ಗಮನಿಸಿರಿ. ನಿಮ್ಮ ಕಾರನ್ನು ಚಲಿಸಲಾರಂಭಿಸಿ, ಅರ್ಧ ಗಂಟೆ ಚಾಲನೆ ವಾಾಡಿ, ಕಾಂಸರ್ಕಾಲಯವನ್ನು ತಲುಪಿ, ಕಾರನ್ನು ವಾಹನ ನಿಲ್ದಾಣದಲ್ಲಿ ನಿಲ್ಲಿಸಿದಾಗಲೇ ನೀವು ವಾಹನ ಚಾಲನೆ ವನಾಡುತ್ಮಿದ್ದಿರೆಂದು ನೆನಪಿಗೆ ಬರುವುದು ! ಅಲ್ಲಿಯವರೆಗೂ ನೀವು ಸುವಾರು 200-300 ನಿರ್ಧಾರಗಳನ್ನು ತೆಗೆದುಕೊಂಡಿರುತ್ತೀರಿ. ಎಡತಿರುವು, ಬಲ ತಿರುವು, ಸೂಚನೆಗಳಲ್ಲಿ ನಿಲ್ಲುವುದು, ಹಾರನ್ನಿನ ಶಬ್ದ ಮಾಡುವುದು ವುುಂತಾದವು, ಆದರೆ ಆಫೀಸ್ನ್ನು ತಲುಪಿದ ನಂತರವೇ ನೀವು ವಾಹನ ಚಾಲನೆ ವಾಡುತ್ತಿದ್ದ ನೆನಪು ಬರುವುದು.
ನಿಮ್ಮ ವಾಹನ ಚಾಲನೆಯು ಒಂದು ಚಟವಾಗಿ ಬಿಟ್ಟಿರುತ್ತದೆ. ನಿಮ್ಮ ಜೀವನದ ಧ್ಯಾನವಲ್ಲದ ಂನಾವುದೇ ಭಾಗವು, ಒಂದು ಚಟ. ಅಂದರೆ, ಈ ಕ್ಷಣದವರೆಗೂ, ಬಹುಶಃ ನಮ್ಮ ಇಡೀ ಜೀವನವೇ ಒಂದು ಮುಂದುವರಿಯುತ್ತಲೇ ಇದ್ದ ಒಂದು ಚಟ !
ನಿಮ್ಮ ಚಟಗಳಿಗೆ ಅರಿವನ್ನು ತನ್ನಿರಿ. ಅರಿವನ್ನು ತರುವುದೇ ನಿಮ್ಮಿಂದ ಬದಲಾಯಿಸಲಾಗುವುದನ್ನು ಬದಲಾಯಿಸಲು ಪ್ರಯತ್ನಿಸುವುದು, ಅಂದರೆ ಶಕ್ತಿಯನ್ನು ಬಳಸುವುದು. ನಿಮ್ಮಿಂದಾಗುವುದನ್ನು ಬದಲಾಯಿಸುವ ಶಕ್ತಿಯನ್ನು ವ್ಯಕ್ತಪಡಿಸುವುದನ್ನೇ ನಾನು ಮೊದಲ ತಂತ್ರ, ಮೊದಲ ವಿಧಾನ, ಎನ್ನುವುದು. ನಿಮ್ಮಿಂದ ಸಾಧ್ಯವಾದರೆ ಸರಳವಾದದ್ದನ್ನೂ ಸಹ ಬದಲಿಸಿರಿ. ಸತತವಾಗಿ ಬದಲಾಯಿಸುತ್ತಿರಿ. ಇದು ಜೀವನದ ಮೊದಲ ಭಾಗ, ವುುಖ್ಯ ಜೀವನದ ಮೊದಲ ತಂತ್ರ.
ಎರಡನೆಯ ತಂತ್ರವು, ಬದಲಾಯಿಸಲಾಗದುದನ್ನು ಒಪ್ಪಿಕೊಳ್ಳುವುದು.
ಈಗ ಒಂದು ದೊಡ್ಡ ಪ್ರಶ್ನೆಯು ಮೇಲೇಳುತ್ತದೆ. 'ಆ ಎಲ್ಲೆಯು ಎಲ್ಲಿದೆ ಸ್ವಾಮೀಜಿ ? ನಾನು ಏನನ್ನು ಬದಲಾಯಿಸಬಹುದು, ಏನನ್ನು ಬದಲಾಯಿಸಲಾಗುವುದಿಲ್ಲ ?' ಎಂಬುದು.
ಒಪ್ಪಿಗೆ ಎಂದರೆ ಏನೆಂದು ಮೊದಲು ನಿರೂಪಿಸುತ್ತೇನೆ. ಆಗ ಈ ಪ್ರಶ್ನೆಗೆ ತಾನಾಗಿಯೇ ಉತ್ತರ ಸಿಗುತ್ತದೆ.
ಬುದ್ಗಿ—ಸ್ತೀಕರಿಸುವ ಜಾಣೆ
ಮೊದಲು, ನಿಮ್ಮಿಂದಾಗುವುದನ್ನು ಬದಲಾಯಿಸಲು ಶಕ್ತಿಯನ್ನು ವ್ಯಕ್ತಪಡಿಸಿರೆಂದು ಹೇಳಿದೆ. ಈಗ ಹೇಳುತ್ತೇನೆ, ಏನನ್ನು ಬದಲಾಯಿಸಲು ಸಾಧ್ಯವಿಲ್ಲವೋ ಆದನ್ನು ಸ್ತೀಕರಿಸುವ, ಒಪ್ಪಿಕೊಳ್ಳುವ ಬುದ್ದಿಯನ್ನು ಹೊಂದಿರಿ, ಎಂದು. ಜೀವನದಲ್ಲಿ ಸಾವಿನಂತಹ ಅನೇಕ ವಿಷಯಗಳನ್ನು ಬದಲಾಯಿಸಲಾಗುವುದಿಲ್ಲ. ಬದಲಾಯಿಸಲಾಗದಿರುವುದನ್ನು ಒಪ್ಪಿಕೊಂಡು ಅದರೊಂದಿಗೆ ನೆಮ್ಮದಿಯಿಂದಿರುವುದೇ ಬುದ್ಗಿವಂತಿಕೆ.
ಶಕ್ತಿಯಿಂದ ಬದಲಾಯಿಸುವುದೋ ಅಥವಾ ಬುದ್ದಿಯಿಂದ ಸಮ್ಮತಿಸುವುದೋ ?
ಈಗ ಒಂದು ದೊಡ್ಡ ಪ್ರಶ್ನೆ ಏಳುತ್ತದೆ, 'ನನ್ನ ಜೀವನದಲ್ಲಿ ಒಂದು ಸಂದರ್ಭವೊದಗಿದಾಗ, ನನ್ನ ಶಕ್ತಿಯನ್ನು ಉಪಯೋಗಿಸಿ ಅದನ್ನು ಬದಲಾಯಿಸಬೇಕೋ ಅಥವಾ ನನ್ನ ಬುದ್ದಿವಂತಿಕೆಯನ್ನು ಉಪಯೋಗಿಸಿ ಅದನ್ನು ಸಮ್ಮತಿಸುವುದೋ ಎಂಬುದು ನನಗೆ ಹೇಗೆ ತಿಳಿಯುತ್ತದೆ ? ಇದನ್ನು ನಿರ್ಧರಿಸುವುದು ಹೇಗೆ ?" ಎಂದು.
ಬದಲಾಯಿಸಲಾಗದ ವಿಷಯಗಳನ್ನು ಬದಲಾಯಿಸುವ ಪ್ರಯತ್ನದಲ್ಲಿ ನೀವು ನಿಮ್ಮ ಶಕ್ತಿಯನ್ನು ವ್ಯಯಿಸುತ್ತಾ ಪ್ರಂಯಾಸವಡುತ್ತಿರುವಿರೋ ಅಥವಾ ನೆಮ್ಜಾದಿಯಾಗಿರುವಿರೋ ಎಂಬುದನ್ನು ಸಾಧ್ಯವಾಗುವಂತಹ ಒಂದು ವರಾಪನವನ್ನು ನೀಡುತ್ತೇನೆ. ಈ ಒಂದು ವರಾಪನವು ಬಹಳ ವುಖ್ಯವಾದುದು.
ಬೆಳಗಿನ ಜಾವದಲ್ಲಿ, ನಿದ್ರಾ ಓಡಾಡಲಾರಂಭಿಸಿದಾಗ, ಗಾಢ'ನಿದ್ರಾಸ್ಥಿತಿಯಿಂದ ಜಾಗೃತ ಸ್ಥಿತಿಗೆ ಬರಲಾರಂಭಿಸಿದಾಗ, ಗಾಢ ನಿದ್ರಾ ಸ್ಟಿತಿಯಿಂದ, ಜಾಗೃತ ಸ್ಟಿತಿಗೆ ಬರುವ ಪರಿವರ್ತನೆಯು ಬಹಳ ಸರಾಗವಾಗಿದ್ದರೆ, ನಿಮ್ಮ ಜೀವನವು ಬಹಳ ಸುಗವುವಾಗಿ ಸಾಗುತ್ತಿದೆಂದೆಂದು ತಿಳಿಯಿರಿ. ಂತರಾವುದನ್ನು ಒಪ್ಪಿಕೊಳ್ಳಬೇಕೋ ಅದನ್ನು ಒಪ್ಪಿಕೊಳ್ಳುತ್ತಿದ್ದೀರಿ, ಂತುಾವುದನ್ನು ಬದಲಾಯಿಸುವ ಅವಶ್ಯಕತೆ ಇದೆಯೋ ಅದನ್ನು ಮಾತ್ರ ಪರದಾಡುತ್ತಿಲ್ಲವೆಂದರ್ಥ. ಒಂದು ವೇಳೆ ಆ ಪರಿವರ್ತನೆಂತು ಬಹಳ ತೊಂದರೆಗೊಳಿಸುತ್ತಿದ್ದರೆ, ನೀವು ಇನ್ನೂ ಹೆಚ್ಚಾಗಿ ಒಪ್ಪಿಕೊಳ್ಳುವುದನ್ನು ಕಲಿಯಬೇಕೆಂದು ತಿಳಿಯಿರಿ. ನಿಮ್ಮ ಶಕ್ತಿಯನ್ನು ವ್ಯಯಿಸುವ ಅಗತ್ಯವಿಲ್ಲ. ಈಗ ನಿಮಗೆ ಬೇಕಾಗಿರುವುದೆಲ್ಲವೂ ಒಪ್ಪಿಗೆ.
ಇದನ್ನು ಚೆನ್ನಾಗಿ ಸ್ಪಷ್ಟಪಡಿಸುತ್ತೇನೆ. ಇದು ಬಹಳ ಆಳವಾದ, ಸೂಕ್ಷ್ಮವಾದ ಹಾಗೂ ರಹಸ್ಯವಾದ ಅಂಶ. ಇದೊಂದು ನಿಜವಾಗಿಯೂ ಮಾಡಲು ಸಾಧ್ಯವಾದ ಅಂಶವೆನ್ನುತ್ತೇನೆ. ಬೆಳಗ್ಗೆ ಗಾಢನಿದ್ರಾ ಸ್ಥಿತಿಯಿಂದ ಜಾಗೃತಸ್ಥಿತಿಗೆ ಜರುಗಿ, ಜಾಗೃತ ಸ್ಥಿತಿಗೆ ಬಂದನಂತರ,ಈ ಎರಡರಲ್ಲಿ ಂತುಾವುದಾದರೊಂದರೊಂದು ಭಾವನೆ ಇರುತ್ತದೆ: ಕೆಲವು ಬಾರಿ ಎಚ್ಚರದ ಸ್ಥಿತಿಗೆ ಬಂದಾಗ, 'ಓ ದೇವರೇ ! ನಿದ್ರಿಸಿದ್ದರೇ ಮೇಲಾಗಿತ್ತು. ಅದೇ ಚೆನ್ನಾಗಿರುತ್ತಿತ್ತು. ' ಎನಿಸಬಹುದು, ಅಥವಾ, ಚಿತ್ರಹಿಂಸೆಂತುಾಗಿತ್ತು. ಸಧ್ಯ, ಎದ್ದೆನಲ್ಲಾ ಎನಿಸಬಹುದು. ಅದರಲ್ಲೂ ಒಂದು ಘೋರ ಸ್ವಪ್ನದ ನಂತರ, ಅದರಿಂದ ಹೊರಬಂದ ಮೇಲೆ, 'ಓ ದೇವರೇ ! ಅದು ಎಷ್ಟು ಭಂಯಂಕರ ಸನ್ನಿವೇಶ. ಈಗ ಎಷ್ಟೋ ನೆಮ್ಮದಿಂತನಾಗಿದ್ದೇನೆ !' ಎನಿಸಲೂಬಹುದು.
ಗಾಢನಿದ್ರಾಸ್ಥಿತಿ ಹಾಗೂ ಸಂಪೂರ್ಣ ಜಾಗೃತಸ್ಥಿತಿಗಳೆರಡರಲ್ಲಿಯೂ ಸಂಪೂರ್ಣ ವಿಶ್ರಾಂತರಾಗಿದ್ದರೆ, ಏನನ್ನೂ ಮಾಡಬೇಕಾದ ಅವಶ್ಯಕತೆ ಇಲ್ಲ. ಆರಾಮವಾಗಿರಿ, ನೀವು ಸರಿಯಾದ ವಲಯದಲ್ಲಿರುವಿರಿ. ನೀವು ಸರಿಯಾದಷ್ಟು ಶಕ್ತಿಯನ್ನು ಹಾಗೂ ಬುದ್ದಿಂದುನ್ನು ವ್ಯಕ್ತಪಡಿಸುತ್ತಿದ್ದೀರಿ. ನಿಮಗೆ ಸಾಧ್ಯವಾದುದನ್ನು ಬದಲಾಯಿಸುತ್ತಿದ್ದೀರಿ, ಹಾಗೂ ಸಾಧ್ಯವಾಗದುದನ್ನು ಒಪ್ಪಿಕೊಳ್ಳುತ್ತಿದ್ದೀರಿ. ನೀವು ಸರಿಯಾದ ಮಾರ್ಗದಲ್ಲಿರುವಿರಿ.
ನೀವು ಜಾಗೃತಸ್ಥಿತಿಂದುಲ್ಲಿ ಹೆಚ್ಚು ಸಂತೋಷವಾಗಿಂತುೂ, ಅದಕ್ಕೆ ಹೊಂದಿಕೊಂಡತೆಯೂ ಗಾಢನಿದ್ರಾವಸ್ಟೆಂಸುಲ್ಲಿ ಖಿನ್ನತೆಯುಂಟಾದರೆ, ನಿಮಗೆ ಶಕ್ತಿ ಕಡಿಮೆ ಇದೆ ಎಂದರ್ಥ, ಸುಮಾರು ಠಾಯಕ್ಕೆ ಒಂದು ಸೇರಿ ಎಂದರೆ, ಕೆಲವು ವಿಷಯಗಳನ್ನು ಬದಲಾಯಿಸಿಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ ಎಂದರ್ಥ.
ಕೆಲವು ಬಾರಿ ಜನರು ಬಂದು, 'ಸ್ವಾಮೀಜಿ, ನೆನ್ನೆ ರಾತ್ರಿ ಒಂದು ದೆವ್ವ ಬಂದು ನನ್ನ ಎದೆಯ ಮೇಲೆ ಕುಳಿತು ನನ್ನನ್ನು ಉಸಿರು ಗಟ್ಟಿಸುತ್ತಿತ್ತು' ಎಂದು ಗೋಳಾಡುತ್ತಾರೆ.
ತಿಳಿಯಿರಿ, ಯಾವ ದೆವ್ವವೂ ನಿಮ್ಮನ್ನು ತೊಂದರೆಪಡಿಸಲಾಗುವುದಿಲ್ಲ. ವಾಸ್ತವವಾಗಿ ಂರುಾವುದೇ ದೆವ್ವಕ್ಕಿಂತಲೂ ನೀವೇ ಹೆಚ್ಚು ಪ್ರಭಾವಶಾಲಿಗಳು. ಕೆಲವರಿಗೆ ಗಾಢ'ನಿದ್ರೆಯಲ್ಲಿ ಉಸಿರುಗಟ್ಟಿದಂತೆ ಭಾಸವಾಗುತ್ತದೆ. ಅದನ್ನವರು ದೆವ್ವ ತಮ್ಮ ಎದೆಂಸು ಮೇಲೆ ಕುಳಿತಿತ್ತೆಂದೂ, ಉಸಿರುಗಟ್ಟಿಸಿತೆಂದೂ ವರ್ಣಿಸುತ್ತಾರೆ. ಗಾಢ'ನಿದ್ರಾ ಸ್ಟಿತಿಯುಲ್ಲಿ ಉಸಿರುಗಟ್ಟಿದಂತೆಯೂ ಹಾಗೂ ಎಚ್ಚರದ ಆರಾಮವಾದಂತೆಯೂ; ಎಚ್ಚರದ ಸ್ವಿತಿಯಲ್ಲಿ ಸಂತೋಷವಾಗಿದ್ದು ಅದಕ್ಕೆ ಹೊಂದಿಕೊಂಡಂತಿದ್ದು, ಕಷ್ಟಪಡುತ್ತೀರೆನಿಸಿದರೆ, ನೀವು ನಿಮ್ಮ ಜೀವನದಲ್ಲಿ ಅನೇಕ ವಿಷಯಗಳನ್ನು ಬದಲಾಯಿಸಬೇಕೆಂದು ಸ್ಪಷ್ಟವಾಗಿ ತಿಳಿಯಿರಿ. ನೀವು ನಿಮ್ಮ ಶಕ್ತಿಂತುನ್ನು ಬಳಸಬೇಕಾಗಿದೆ, ಬುದ್ದಿಂತುನ್ನಲ್ಲ. ಪರಿಸ್ಥಿತಿಯನ್ನು ನೀವೀಗ ಬದಲಾಯಿಸಬೇಕು.
ಗಾಢನಿದ್ರಾಸ್ಟಿತಿಯಲ್ಲಿ ಆರಾಮವಾಗಿದ್ದು, ಜಾಗೃತಸ್ಥಿತಿಗೆ ಬಂದ ಕೂಡಲೇ ಕದಡಿದಂತೆ, ಅಥವಾ ಒತ್ತಡವಾದಂತೆನಿಸಿದರೆ, ನೀವು ಬುದ್ಗಿಯನ್ನು ಉಪಯೋಗಿಸಬೇಕೆಂದರ್ಥ. ನೀವು ವಿಷಯಗಳನ್ನು ಬದಲಾಯಿಸ ಬೇಕಾಗಿಲ್ಲ. ನೀವು ಆರಾಮವಾಗಿದ್ದು, ಬದಲಾಯಿಸಲಾಗದುದಕ್ಕೆ ಒಪ್ಪಿಗೆಯಿಂದಿರಬೇಕಷ್ಟೆ
ಅದರಲ್ಲೂ ಪಾಶ್ಚಿಮಾತ್ಯರಲ್ಲಿ, ಶೇಕಡಾ ತೊಂಬತ್ತರಷ್ಟು ಹೃದಯಾಘಾತಗಳು ಬೆಳಗಿನ ಹೊತ್ತಿನಲ್ಲಿ ಸಂಭವಿಸುತ್ತವೆ ಎನ್ನುತ್ತಾರೆ. ಅದನ್ನವರು 'ಮಂಡೇ ಮಾರ್ನಿಂಗ್ ಬ್ಲೂಸ್" ಎಂದು ಕರೆಯುತ್ತಾರೆ. ಅದು ಒತ್ತಡದಿಂದ ಉಂಟಾಗಿ, ನಿದ್ರೆಯಿಂದೆದ್ದಾಗ ಉಸಿರುಗಟ್ಟಿದಂತೆ ವ್ಯಕ್ತವಾಗುತ್ತದೆ. ಉಪಯೋಗಿಸಬೇಕು ಎಂದು ಇದು ಸೂಚಿಸುತ್ತದೆ. ವಿಷಯಗಳನ್ನು ಬದಲಾಯಿಸಬೇಕಾಗಿಲ್ಲ. ವಿಶ್ರಾಂತವಾಗಿರಲಾರಂಭಿಸಬೇಕು.
ವಿಷಯಗಳನ್ನು ಬದಲಾಯಿಸಲು ಶ್ರಮಿಸಬೇಕೋ ಅಥವಾ ಆರಾಮವಾಗಿದ್ದು ವಿಷಯಗಳನ್ನು ಒಪ್ಪಿಕೊಳ್ಳಬೇಕೋ ಎಂಬುದರ ಮಾಪನ ಇದು. ಪ್ರತಿದಿನವೂ ಎದ್ದ ಕ್ಷಣವೇ ಹೇಗನ್ನಿಸುತ್ತದೆ ಎಂಬುದನ್ನು ಕೇವಲ ಗಮನಿಸಿರಿ. ಗಾಢ'ನಿದ್ರಾ ಸ್ಥಿತಿಯಲ್ಲಿಂತೋ ಅಥವಾ ಜಾಗೃತ ಸ್ಟಿತಿಯಲ್ಲಿಂಗೋ, ಯಾವ ಸ್ಟಿತಿಯಲ್ಲಿ ಹೆಚ್ಚಾಗಿ ನೆಮ್ಮಾದಿ ಇದೆ ಎಂಬುದನ್ನು ನೀವೇ ಕಂಡುಕೊಳ್ಳಬಹುದು. ಶಕ್ತಿಯನ್ನೋ ಅಥವಾ ಬುದ್ದಿಯನ್ನು ಉಪಯೋಗಿಸಬೇಕು ಎಂದು ಕಂಡುಕೊಳ್ಳಲು ಇದು ಬಹಳ ಪ್ರಾಂಯೋಗಿಕವಾದ ಸೂತ್ರ. ಂರುಾವುದೇ ಆಧ್ಯಾತ್ಮಿಕ ಅನ್ವೇಷಕನಿಗೆ ಇವೆರಡು ವಿಷಂತುಗಳ ನಡುವೆ ದ್ವಂದ್ವವಿರುವುದು.
ಅನೇಕರು ತಮ್ಮ ಸಮಸ್ಯೆಗಳನ್ನು ನನ್ನಲ್ಲಿ ಹೇಳಿಕೊಂಡು, 'ಸ್ವಾಮೀಜಿ, ಇದು ನನ್ನ ಪರಿಸ್ಥಿತಿ. ಇದನ್ನು ದೈವೇಚ್ಛೆ ಎಂದುಕೊಳ್ಳಬೇಕೇ ಅಥವಾ ಇದನ್ನು ನಾನೇ ಜಯಿಸಬೇಕೆ ? ಹೇಳಿರಿ ಸ್ನಾವೀಜಿ' ಎಂದು ಕೇಳುತ್ತಾರೆ.
ಸರಿಯಾಗಿ ತಿಳಿಯಿರಿ, ನಾನು ಕೇವಲ ಸೂತ್ರವನ್ನು ಕೊಡಬಲ್ಲೆ, ಪರಿಹಾರವನ್ನು ನೀವೇ ಕಂಡುಕೊಳ್ಳಬೇಕು.
ಪ್ರತಿ ಬೆಳಗ್ಗೆಯೂ ನಿಮ್ಮನ್ನು ನೀವೇ ವಿಶ್ಲೇಷಿಸಿಕೊಳ್ಳಿರಿ. ಜಾಗ್ಬತ ಸ್ಟಿತಿಯಲ್ಲಿ ಸೆಣಸಾಡುತ್ತಿದ್ದೀರೆಂದರ್ಥ. ನೀವು ನಿಮ್ಮ ಬುದ್ಧಿಯನ್ನು ಉಪಯೋಗಿಸಬೇಕು. ಅವುಗಳನ್ನು ಒಪ್ಪಿಕೊಳ್ಳಿರಿ.
ಗಾಢ ನಿದ್ರಾಸ್ಥಿತಿಯಲ್ಲಿ, ಪ್ರಜ್ಞಾರಹಿತ ಸ್ಟಿತಿಯಲ್ಲಿ, ಹೆಚ್ಚಾಗಿ ಒತ್ತಡ ಅಥವಾ ಪ್ರಯಾಸವಿದ್ದರೆ ಒಪ್ಪಿಗೆಯು ಅವಶ್ಯಕವಲ್ಲ. ನಿಮಗೆ ಹೋರಾಟದ ಸ್ಪೂರ್ತಿ ಬೇಕಾಗಿರುತ್ತದೆ. ವಿಷಂದುಗಳನ್ನು ಬದಲಾಯಿಸಲು ಪ್ರಾರಂಭಿಸಿರಿ. ಈ ಒಂದು ತಂತ್ರದಿಂದ, ಜೀವನದಲ್ಲಿ ಹೊಡೆದಾಡುವುದೋ ಅಥವಾ ಅದು ನಡೆಯುವಂತೆ ಒಪ್ಪಿಕೊಳ್ಳುವುದೋ ಎಂಬುದನ್ನು 24 ಗಂಟೆಗಳಲ್ಲಿ ನಿರ್ಧರಿಸಬಹುದು.
ವುತ್ತೊಂದು ವಿಷಯ : ನಾನು ಹೇಳುತ್ತಿರುವುದಕ್ಕೆ ನಾನು ಜವಾಬ್ದಾರನಾಗಿದ್ದೇನೆ. ನಾನು ಇದನ್ನು ನನ್ನ ಮೇಲೆಯೇ ಪ್ರಯೋಗಿಸಿಕೊಂಡಿರುವುದಲ್ಲದೆ, ಸಾವಿರಾರು ಶಿಷ್ಯರ ಮೇಲೆಯೂ ಪ್ರಯೋಗಿಸಿದ್ದೇನೆ. ಅದು ಸಿದ್ಧಿಸಿದೆ. ನಮ್ಮ ಜೀವನದಲ್ಲಿ ವಿಷಯಗಳೊಂದಿಗೆ ಹೋರಾಡಬೇಕೇ ಅಥವಾ ಒಪ್ಪಿಕೊಳ್ಳಬೇಕೇ ಎಂಬುದನ್ನು ತಿಳಿಯಲು ಇದೇ ವಿಧಾನ.
ರಾತ್ರಿ ಕೇವಲ ಯಾವುದಾದರೊಂದು ಸಮಸ್ಯೆಯೊಂದಿಗೆ ನಿದ್ರಿಸಿರಿ. ಮರುದಿನ ಬೆಳಗ್ಗೆ ಎದ್ದಾಗ ಏನನಿಸುತ್ತದೆಂಗೋ ನೋಡಿರಿ. ನಿಮಗೆ ರಾತ್ರಿ ಉಸಿರುಗಟ್ಟಿಸಿದ್ದಂತೆನಿಸಿದರೆ, ಆಗ ನೀವು ಹೋರಾಡಲು, ವಿಷಯಗಳನ್ನು ಬದಲಾಯಿಸಲು, ಶಕ್ತಿಯನ್ನುಪಯೋಗಿಸುವ ಕಾಲ ಬಂದಿದೆ ಎಂದರಿತುಕೊಳ್ಳಿರಿ. ಬೆಳಗ್ಗೆ ಎದ್ದನಂತರ ಒತ್ತಡದ ಭಾವನೆಯಿದ್ದರೆ, ಆಗ ನೀವು ವಿಶ್ರಮಿಸುವ, ಬುದ್ದಿಂತುನ್ನು ಉಪಂತೋಗಿಸುವ ಕಾಲ ಬಂದಿದೆ ಎಂದರ್ಥ.
ನಿಮ್ಮ ಬುದ್ದಿಶಕ್ತಿಯು ನೀವು ತಿಳಿದುಕೊಂಡಿರುವುದಕ್ಕಿಂತಲೂ ಹೆಚ್ಚು ಬುದ್ದಿಶಾಲಿಯಾದುದು ಎಂಬುದನ್ನು ತಿಳಿಯಿರಿ.
ನಿರ್ಲಕ್ಷಿಸಲಾಗದಷ್ಟು ಒಳ್ಳೆಯತನ
ನಿಮ್ಮ ಜೀವನದಲ್ಲಿ ನೀವು ಬದಲಾಯಿಸಲಾಗದ ಎಷ್ಟೋ ವಿಷಯಗಳಿವೆ. ಅವುಗಳನ್ನು ಅವು ಇರುವಂತೆಯೇ ಒಪ್ಪಿಕೊಳ್ಳ ಬೇಕು. ಕೇವಲ ವಿಷಯಗಳ ಒಪ್ಪಿಗೆಯೇ ನಿಮ್ಮನ್ನು ಅವುಗಳಿಂದಾಚೆಗೆ ಒಯ್ಯುತ್ತದೆ. ಅದು ಯಾವುದೇ ಸಮಸ್ಯೆ ಆಗಿರಬಹುದು, ಯಾವುದೇ ತೊಂದರೆ ಆಗಿರಬಹುದು. ಅದನ್ನು ಅಂಗೀಕರಿಸುವುದರಿಂದ ಅದನ್ನು ಮೀರಿ ಹೋಗಬಹುದು. ಕೇವಲ ಒಪ್ಪಿಕೊಳ್ಳುವುದರಿಂದಲೇ ಎಷ್ಟೋ ಸಮಸ್ಯೆಗಳನ್ನು ಮೀರಿ ಹೋಗಬಹುದು. ನಿಮ್ಮೊಡನೆ ಹೋರಾಟಕ್ಕೆ ಬಂದ ಎಷ್ಟೋ ಜನರು ಸಹ ಅವರನ್ನು ನೀವು ಒಪ್ಪಿಕೊಳ್ಳುವುದರಿಂದಲೇ ಇದ್ದಕ್ಕಿದ್ದಂತೆಯೇ ನಿಮ್ಮೊಡನೆ ಹೋರಾಡುವ ಬಲವನ್ನೇ ಕಳೆದುಕೊಳ್ಳುತ್ತಾರೆ. 'ಇವರೊಡನೆ ಹೋರಾಡುವುದರಿಂದ ಏನು ಪ್ರಯೋಜನ ? ಎಂದುಕೊಳ್ಳುತ್ತಾರೆ. ತಿಳಿಯಿರಿ, ನೀವು ಬಹಳ ಒಳ್ಳೆಯವರಾದರೆ, ನಿಮ್ಮನ್ನು ಅಗೌರವಿಸಲಾಗುವುದಿಲ್ಲ, ನಿಮ್ಮನ್ನು ನಿರ್ಲಕ್ಷಿಸಲಾಗುವುದಿಲ್ಲ. ಇದು ಅತ್ಯಂತ ಮುಖ್ಯವಾದ ಸೂತ್ರ. ಬಹಳ ಒಳ್ಳೆಯವರಾಗಿರಿ, ನಿಮ್ಮನ್ನು ನಿರ್ಲಕ್ಷಿಸಲಾಗುವುದಿಲ್ಲ. ಕಾಣಲಾಗುವುದಿಲ್ಲ. ಬಹಳ ಒಳ್ಳೆಯವರಾಗಿರಲು ಬೇಕಾದ ಸಹನೆ ನಮಗೆ ಇಲ್ಲದಿರುವುದೇ ಸವುಸ್ಯೆ.
ಆದ್ದರಿಂದ ನೀವು, 'ಇಲ್ಲ ಸ್ವಾಮೀಜಿ ! ಇದು ಕಲಿಯುಗ. ಹಾಗಾಗಿ, ಒಳ್ಳೆಯವರು ಕಷ್ಟಪಡುತ್ತಲೇ ಕೊನೆಗೊಳ್ಳುತ್ತಾರೆ ಹಾಗೂ ಕೆಟ್ಟವರು ಸಂತೋಷವಾಗಿ ಬಾಳುತ್ತಾರೆ' ಎಂದು ದೂರಲಾರಂಭಿಸುವಿರಿ.
ವಿರಮಿಸಿರಿ ! ವಿಶ್ವವು ಕ್ರೂರವಲ್ಲ. ಅದು ಇನ್ನೂ ಧರ್ಮದ ಮೇಲೆ ನಿಂತಿದೆ. ಕಲಿಯುಗವೆಂಬುದಿಲ್ಲ. ಕಲಿಯುಗವೆಂಬುದೆಲ್ಲವೂ ನಿಮ್ಮ ವುನಸ್ಸಲ್ಲದೆ ಬೇರೆಂದುಲ್ಲ. ಅಹಂಕಾರವಲ್ಲದೆ ಬೇರೆ ಏನೂ ಅಲ್ಲ. ಕಲಿಯುಗ ಎಂಬುದು ಸತ್ಯವನ್ನವಲೋಕಿಸಲು ನಿಮಗಿರುವ ಅಸಹನೆಯಲ್ಲದೆ ಇನ್ನೇನೂ ಅಲ್ಲ.
ಒಂದು ರೀತಿಯಲ್ಲಿ ನೋಡಿದರೆ, ನಮ್ಮ ಕಷ್ಟವು ನಮ್ಮ ಅಹಂಕಾರಕ್ಕೆ ಭೂಷಣವಾಗಿರುವುದರಿಂದ ಅದರ ಬಗ್ಗೆ ನಾವು ನಿಜವಾಗಿಯೂ ಸಂತೋಷವಡುತ್ತೇವೆ. ನಾವು ಅನೇಕ ಸವುಸ್ಕೆಗಳನ್ನು ಹೊತ್ತಿರುವೆವೆಂದು ನಮ್ಮ ಅಹಂಕಾರವು ಭಾವಿಸುತ್ತದೆ. ಆ ಕಾರಣದಿಂದಲೇ ನಾವು ಹಿಂಸೆಪಡುತ್ತಲೇ ಇರುವುದು. ಆದರೆ ನಮಗೆ ಅದರ ಬಗ್ಗೆ ತಪ್ಪಿತಸ್ಥ ಭಾವನೆ, ಪ್ರಜ್ಞೆಯುಂಟಾಗುತ್ತದೆ. ಹಾಗಾಗಿ ಏನು ವರಾಡುತ್ತೇವೆ ? ಇಡೀ ಜಗತ್ತನ್ನು ದೂರಲಾರಂಭಿಸುತ್ತೇವೆ. ಒಳ್ಳೆಯುವರನ್ನೆಲ್ಲಾ ದೇವರು ಶಿಕ್ಷಿಸುತ್ತಾನೆಂದೂ, ಕೆಟ್ಟವರನ್ನೆಲ್ಲಾ ಸುಖಪಡಲು ದಾರಿವುಾಡಿ ಕೊಡುವನೆಂದೂ ಹೇಳುತ್ತೇವೆ.
ನೀವು ವಿಶ್ವದ ಪರಿಷೂರ್ಣತೆ
ತಿಳಿಯಿರಿ : ವಿಶ್ವವು ನಿಮ್ಮ ವನೂಲಕ ತನ್ನನ್ನೇ ತಾನು ಪೂರ್ಣವಾಗಿಸಿಕೊಳ್ಳುತ್ತಿದೆ. ನೀವು ವಿಶ್ವದ ಪವಾಡ; ನೀವು ಆಕಸ್ಟಿಕವಲ್ಲ. ನಾವು ಆಕಸ್ಮಿಕವೆಂದೂ, ವಿಶ್ವವು ನಮ್ಮನ್ನು ಹಿಂಸಿಸುತ್ತಿದೆಯೆಂದೂ ಸತತವಾಗಿ ಭಾವಿಸುತ್ತೇವೆ. ಇಲ್ಲ ! ವಿಶ್ವವು ಹಿಂಸಾಸಕ್ತವಾದುದಲ್ಲ. ದೇವರು ನಿಮ್ಮನ್ನು ಶಿಕ್ಷಿಸುವುದಿಲ್ಲ.
ಕೆಲವರು, 'ಇಲ್ಲ ಸ್ವಾಮೀಜಿ, ನಿಮಗೆ ತಿಳಿಯದು ! ದೇವರು ನನ್ನನ್ನು ಶಿಕ್ಷಿಸುತ್ತಿದ್ದಾನೆ !' ಎನ್ನುತ್ತಾರೆ. ದೇವರು ನಿಮ್ಮನ್ನು ಶಿಕ್ಷಿಸುವ ಮಟ್ಟಕ್ಕೆ ಇಳಿಯುವುದಿಲ್ಲವೆಂಬುದನ್ನು ಮನಗಾಣಿರಿ, ಅಲ್ಲದೆ, ದೇವರಿಂದ ಶಿಕ್ಷಿಸಲ್ಪಡುವ ಮಟ್ಟಕ್ಕೆ ನೀವು ಏರಿಲ್ಲ ! ನೀವು ಸತತವಾಗಿ ಧರ್ಮವನ್ನು (ವಿಶ್ವದ ನಿಯಮಗಳು) ತೆಗಳುತ್ತಲೇ ಇರುತ್ತೀರಿ.
ನೀವು, 'ಇಲ್ಲ ಎನ್ನಬಹುದು ಸ್ವಾಮೀಜಿ ! ನಿಮಗೆ ತಿಳಿಯದು ! ಇದು ಕಲಿಯುಗವೇ. ಧರ್ಮವು ಇನ್ನಿಲ್ಲ. ಈ ಚರಿತ್ರೆ, ಆ ಕಾವ್ಯ, ಭಾಗವತ, ಆ ಸೂತ್ರವು... ಇದು ಕಲಿಯುಗ ಎನ್ನುತ್ತದೆ. ಜೀವನವು ಹೀಗೆಯೇ ಇರುವುದು !'
ಸ್ಪಷ್ಟವಾಗಿ ತಿಳಿಯಿರಿ, ಕಲಿಯುಗ ಎಂಬುದಿಲ್ಲ. ಹೇಳುತ್ತೇನೆ ಕೇಳಿರಿ, ನಾನು ಆಡುತ್ತಿರುವ ಮಾತಿಗೆ ನಾನು ಜವಾಬ್ದಾರನಾಗಿದ್ದೇನೆ. ನಾನೇನು ಹೇಳುತ್ತಿದ್ದೇನೆಂಬುದು ನನಗೆ ಗೊತ್ತು. ಕಲಿಯುಗ ಎಂಬುದು ಇಲ್ಲ. ಅದು ಸತ್ಯವನ್ನು ವೀಕ್ಷಿಸಲು ನೀವು ತೋರುವ ಅಸಹನೆ. ಸತ್ಯವನ್ನು ಸ್ವಲ್ಪ ಆಳವಾಗಿ ನೋಡಿದಲ್ಲಿ ಧರ್ಮವು ಎಲ್ಲೆಡೆಯೂ ಇರುವುದನ್ನು ಕಾಣುತ್ತೀರಿ.
ಇದು ನಿಜವಾಗಿಯೂ ಸತ್ಯಯುಗ. ನೀವು ತೋರಿಕೆಯವರಾದಾಗ, ವಿಷಯಗಳನ್ನು ಬಹಳ ಆಳವಾಗಿ ಗಮನಿಸದಿದ್ದಾಗ, ನಿಮಗೆ ಪ್ರಪಂಚವು ಕಲಿಯುಗವೆನಿಸುತ್ತದೆ ಹಾಗೂ ನೀವು ಕಲಿಯುಗದಲ್ಲಿ ಇದ್ದೀರೆನಿಸುತ್ತದೆ. ಆದ್ದರಿಂದ ನಿಮ್ಮ ಸುತ್ತಲೂ ಅಂತಹ ಜನರನ್ನೇ ಆಕರ್ಷಿಸುತ್ತೀರಿ. ನಿಮ್ಮ ಸುತ್ತಲೂ ಅಂತಹ ಸ್ನೇಹಿತರನ್ನೇ ಆಕರ್ಷಿಸುತ್ತೀರಿ. ನಿಮ್ಮ ಸುತ್ತಲೂ ಅಂತಹ ಸಂಬಂಧಗಳನ್ನೇ ಆಕರ್ಷಿಸುತ್ತೀರಿ. ನಿಮ್ಮ ಸುತ್ತಲೂ ಅಂತಹ ಸನ್ನಿವೇಶಗಳನ್ನೇ ಆಕರ್ಷಿಸುತ್ತೀರಿ. ಕಲಿಯುಗದಲ್ಲಿಯೇ ಜೀವಿಸುತ್ತಿರುತ್ತೀರಿ.
ಸರಿಯಾದ ಜನರನ್ನು ಆಕರ್ಷಿಸುವುದು
ವಾಸ್ತವವಾಗಿ ನೀವು ಯಾವ ಪ್ರಜ್ಞಾವುಟ್ಟದಲ್ಲಿರುತ್ತೀರೋ ನಿಮ್ಮ ಸುಸಂಸ್ಕೃತಿ ಮುಖ್ಯಾತ ಮತ್ತು ಸಂಪ್ರದ ಮತ್ತು ಮತ್ತು ಸಂಕರಣ ಮತ್ತು ಅವ ಅಂತಹ ಜನರನ್ನು ವಾಸ್ತವವಾಗಿಯೇ ಆಕರ್ಷಿಸುತ್ತೀರಿ. ಸ್ವಲ್ಪ ಗಾಢವಾಗಿ ಪರಿಶೀಲಿಸಿದಲ್ಲಿ, ನೈಜತೆಗಳನ್ನು, ಸತ್ಯವನ್ನು ಈಕ್ಷಿಸುವ ಸಹನೆ ಇದ್ದಲ್ಲಿ, ವಾಸ್ತವವಾಗಿ ಇದು ಸತ್ಯಯುಗವೆಂದು ಆ ಕೂಡಲೆ ತಿಳಿಯುತ್ತೀರಿ. ಕೃಷ್ಣನ ಲೀಲೆ ಇನ್ನೂ ನಡೆಯುತ್ತಿದೆ. ರಾಮನು ಇನ್ನೂ ಜೀವಂತವಾಗಿದ್ದಾನೆ. ಎಲ್ಲಾ ಮಹಾನ್ ಗುರುಗಳೂ ಸಜೀವವಾಗಿದ್ದಾರೆ. ಇದು ಸತ್ಯಯುಗ. ಧರ್ಮವು ಇನ್ನೂ ಅಸ್ತಿತ್ವದಲ್ಲಿದೆ.
ಜನರು, ಭಯೋತ್ಪಾದಕತೆ ನಡೆಯುತ್ತಿದೆ; ಎಷ್ಟೊಂದು ದಾರಿದ್ರ್ಯವಿದೆ, ಇಷ್ಟೇ ಅಲ್ಲದೆ, ಯುದ್ದ ನಡೆಯುತ್ತಿದೆ ! ಇದು ಸತ್ಯಯುಗವೆಂದು ಹೇಗೆ ಹೇಳುವಿರಿ ?' ಎಂದು ನನ್ನನ್ನು ಕೇಳುತ್ತಾರೆ.
ಕೃಷ್ಣನ ಕಾಲದಲ್ಲಿ ಯುದ್ಧವೇ ಇರಲಿಲ್ಲವೆಂದುಕೊಂಡಿದ್ದೀರಾ ? ರಾಮನ ಕಾಲದಲ್ಲಿ ಬಡತನವಿರಲಿಲ್ಲವೆಂದುಕೊಂಡಿದ್ದೀರಾ ? ಇಲ್ಲ ! ತಿಳಿಯಿರಿ, ರಾಮನ ಕಾಲದಲ್ಲಿಯೂ ಪ್ರಪಂಚದ ಯಾವುದೋ ಒಂದು ಭಾಗದಲ್ಲಿ ಕೆಲವರು ಕಲಿಯುಗದಲ್ಲಿಯೂ ಇದ್ದರು. ಅದೇ ರೀತಿ, ಈಗಲೂ ಕೆಲವರು ಸತ್ಯಯುಗದಲ್ಲಿದ್ದಾರೆ.
ಸತ್ಯಯುಗ ಹಾಗೂ ಕಲಿಯುಗಗಳು ಕಾಲಗಣನೆಗೆ ಅನ್ವಯಿಸುವ ಕಾಲಗಳಲ್ಲ. ಅದು ವೈಯಕ್ತಿಕ ನಿರ್ಧಾರ. ನಿಮಗೆ ಬೇಕಾದರೆ ಈಗಲೇ ಸತ್ಯಯುಗದಲ್ಲಿರಬಹುದು; ಅದನ್ನು ಇಂದಿನಿಂದಲೇ ನಿರ್ಧರಿಸಿದರೆ, ನಿಮ್ಮ ಮನೋವ್ಯವಸ್ಥೆಯನ್ನು ಬದಲಾಯಿಸಿಕೊಳ್ಳಬಹುದು. ಆಗ ನಿಮ್ಮ ಜೀವನದಲ್ಲಿ ಸಹಜವಾಗಿಯೇ ಸರಿಹೊಂದಿದ ಸನ್ನಿವೇಶಗಳನ್ನು ಹಾಗೂ ಸ್ನೇಹಿತರನ್ನು ಆಕರ್ಷಿಸುತ್ತೀರಿ.
ಆದರೆ, ನಿಮ್ಮ ಜೀವನದಲ್ಲಿ ನೀವು ಸತತವಾಗಿ ದುಃಖದಲ್ಲಿದ್ದರೆ, ನಿಮಗೆ ಸತತವಾಗಿ ಸ್ವಾನುಕಂಪವಿದ್ದರೆ, ನಿಮ್ಮ ಜೀವನವನ್ನು ಇನ್ನೂ ಹೆಚ್ಚು ದುಃಖಮೂರಿತವಾಗಿ ಮಾಡುವ ಸಂಬಂಧಗಳನ್ನೂ, ಸ್ನೇಹಿತರನ್ನೂ ಆಕರ್ಷಿಸುವುದನ್ನು ನೋಡಬಹುದು. ನಿಮ್ಮನ್ನು ವಂಚಿಸುವವರನ್ನು ಸತತವಾಗಿ ಆಕರ್ಷಿಸುತ್ತೀರಿ, ಏಕೆಂದರೆ ಅವರೊಂದಿಗೆ ನಿಮಗೆ ನೆಮ್ಮದಿಯಾಗಿರುವಂತೆನಿಸುತ್ತದೆ. ಅವರು ವಂಚಿಸಿದರೂ, ವಂಚಿಸಿದರೆಂಬುದನ್ನು ಮರೆತು, ಅವರೊಂದಿಗೆ ಪುನಃ ಸಂಬಂಧ ಕಂಡುಕೊಳ್ಳಲಾರಂಭಿಸುವಿರಿ.
ನೀವು, 'ಇಲ್ಲ ಸ್ವಾಮೀಜಿ, ಪರವಾಗಿಲ್ಲ, ಆತನು ಒಳ್ಳೆಯವನು; ಆತನ ಮನಸ್ಸು ಬಹಳ ಒಳ್ಳೆಯದು' ಎನ್ನುತ್ತೀರಿ.
'ಆತನು ನನ್ನನ್ನು ತೆಗಳಿದರೂ ಆತನ ಮನಸ್ಸು ಬಹಳ ಒಳ್ಳೆಯದು !' ಎನ್ನುವ ಅವರ ಮಾತುಗಳ ಅರ್ಥವೇನೆಂದು ನನಗೆ ತಿಳಿಯುವುದಿಲ್ಲ. ನಡೆಯುತ್ತಿರುವುದನ್ನು ಸಮರ್ಥಿಸಿಕೊಳ್ಳಲು ಅವರಿಗೆ ತಮ್ಮದೇ ಆದ ತಾಂತ್ರಿಕ ಪದಗಳಿರುತ್ತವೆ, ನೀವು ಅಂತಹ ಮಾನಸಿಕ ಸ್ಥಿತಿಯಲ್ಲಿದ್ದರೆ, ಅಂತಹ ಪ್ರಜ್ಞೆಯಲ್ಲಿದ್ದರೆ, ನಿಮ್ಮ ಸುತ್ತಲೂ ವಂಚಿಸುವ ಸಂಬಂಧಗಳನ್ನು ಹಾಗೂ ತೆಗಳುವ ಜನರನ್ನು ಆಕರ್ಷಿಸುತ್ತೀರಿ.
ಆದುದರಿಂದ ಸ್ಪಷ್ಟವಾಗಿರಿ, ಇಡೀ ಪ್ರಪಂಚವು ಧರ್ಮದ ಪ್ರಕಾರವೇ ನಡೆಯುತ್ತಿದೆ ಎಂಬುದನ್ನು ನೀವು ತಿಳಿದ ಕ್ಷಣವೇ ಅದು ಸತ್ಯಯುಗ. ಆ ಕೂಡಲೇ ನೀವು ಸತ್ಯಯುಗದಲ್ಲಿ ಬಾಳುತ್ತಿರುವ ಜನರನ್ನು ಆಕರ್ಷಿಸಲಾರಂಭಿಸುತ್ತೀರಿ. ನಿಮ್ಮ ಸುತ್ತಲೂ ಅಂತಹುದೇ ಆನಂದದ ವರ್ತುಲವನ್ನು ನಿರ್ಮಿಸಿಕೊಳ್ಳುತ್ತೀರಿ. ಇದ್ದಕ್ಕಿದ್ದಂತೆ ನೀವು ಸತ್ಯಯುಗದಲ್ಲಿರುವುದನ್ನು ಮನಗಾಣುತ್ತೀರಿ !
ಸತ್ಯಯುಗದಲ್ಲಿರಲು, ಅದನ್ನು ನೀವು ನಿರ್ಮಿಸುವ ಅಗತ್ಯವಿಲ್ಲ. ನೀವು ಮಾಡಬೇಕಾದುದೆಲ್ಲವೂ ಏನೆಂದರೆ, ಅದಕ್ಕೆ ನಿಮ್ಮನ್ನು ಶೃತಿಗೂಡಿಸಿಕೊಳ್ಳುವುದು. ಅಷ್ಟೇ ! ನಿಮ್ಮ ಚರ್ಮದೊಳಗಿರುವ ಆರು ಅಡಿ ದೇಹವನ್ನು 'ಸತ್ಯಯುಗ'ದಂತೆ ಮಾಡಿಕೊಳ್ಳಿರಿ ! ಇದ್ದಕ್ಕಿದ್ದಂತೆ ನಿಮ್ಮ ಚರ್ಮದ ಹೊರಗಿರುವುದೆಲ್ಲವೂ ಸಹ ಸತ್ಯಯುಗವಾಗುತ್ತದೆ. ಬೇರೇನೂ ಮಾಡುವ ಅವಶ್ಯಕತೆ ಇಲ್ಲ.
ನೀವು ಪ್ರಪಂಚವನ್ನೆಲ್ಲಾ ಬದಲಾಯಿಸುವ ಅವಶ್ಯಕತೆ ಇಲ್ಲ. ಪ್ರತಿಯೊಂದು ಊರಿಗೂ ಹೋಗಿ ಸತ್ಯಯುಗದ ಬಗ್ಗೆ ಪ್ರವಚನಗಳನ್ನು ನೀಡಬೇಕಾಗಿಲ್ಲ. 'ಪ್ರಪಂಚವೆಲ್ಲವೂ ಸತ್ಯಯುಗವಾಗಲಿ, ಆಗ ಮಾತ್ರವೇ ನಾನು ಸತ್ಯಯುಗದಲ್ಲಿರಲು ಸಾಧ್ಯ' ಎಂದು ಹೇಳಬೇಕಾದ ಅಗತ್ಯವಿಲ್ಲ. ಇಲ್ಲ, ಕೇವಲ ನಿಮ್ಮ ಅಂತರಂಗವನ್ನು ಸತ್ಯಯುಗವಾಗಿ ಬದಲಾಯಿಸಿರಿ. ಇದ್ದಕ್ಕಿದ್ದಂತೆ ಅಂತಹ ಸ್ನೇಹಿತರನ್ನೇ ಆಕರ್ಷಿಸುತ್ತೀರಿ. ಇದ್ದಕ್ಕಿದ್ದಂತೆ, ಅಂತಹ ಪುಸ್ತಕಗಳು ನಿಮ್ಮನ್ನು ತಲುಪುತ್ತವೆ, ಅಂತಹ ದಿನಪತ್ರಿಕೆಗಳು ನಿಮ್ಮನ್ನು ತಲುಪುತ್ತವೆ. ಅಲ್ಲದೆ ಇತರ ವಿಷಯಗಳೆಲ್ಲವೂ ನಿಮ್ಮ ಜೀವನದಲ್ಲಿ ತಮ್ಮ ಮಹತ್ತವನ್ನು ಕಳೆದುಕೊಳ್ಳುತ್ತವೆ. ಇದ್ದಕ್ಕಿದ್ದಂತೆ ನೀವು ಮಿಕ್ಕೆಲ್ಲಾ ವಿಷಯಗಳಲ್ಲೂ ಆಸಕ್ತಿಯನ್ನು ಕಳೆದುಕೊಳ್ಳುತ್ತೀರಿ.
ನನ್ನ ಇಡೀ ಜೀವನದಲ್ಲಿ, ನಾನು ಒಂದು ಬಾರಿಯೂ ಚಿತ್ರಮಂದಿರಕ್ಕೆ ಹೋಗಿಲ್ಲ ! ಜನರು ನನ್ನನ್ನು ಕೇಳುತ್ತಾರೆ, 'ಸ್ವಾಮೀಜಿ, ಕಾಲೇಜಿನಲ್ಲಿದ್ದಾಗಲಾದರೂ, ಒಮ್ಮೆಯೂ ಸಿನಿಮಾಗೆ ಹೋಗದೆ ಹೇಗಿದ್ದಿರಿ ?' ಎಂದು.
ನಾನವರಿಗೆ, 'ಹೇಗೋ ಏನೋ, ಅದು ನನ್ನ ಜೀವನದ ಭಾಗವೆಂದೇ ನನಗನಿಸಲಿಲ್ಲ' ಎಂದು ಹೇಳುತ್ತೇನೆ. ನಾನೇನು 60 ವರ್ಷಗಳ ಹಿಂದೆ ಯುವಕನಾಗಿದ್ದೆ ಎಂದು ಹೇಳಿಕೊಳ್ಳಬೇಕಾದ ಮುದುಕನೇನಲ್ಲ. ನನಗೀಗ ಕೇವಲ 31 ವರ್ಷಗಳು ! ಹೇಗೋ ಏನೋ ನನಗೆ ಟಿ.ವಿ. ಅಥವಾ ಸಿನಿಮಾಗಳಲ್ಲಿ ಆಸಕ್ತಿಯೇ ಇರಲಿಲ್ಲ. ಅದು ಎಂದೂ ನನ್ನ ಜೀವನದ ಭಾಗವಾಗಿಯೇ ಇರಲಿಲ್ಲ !
'ಅದು ಅಸಾಧ್ಯ ! ಸಿನಿಮಾ ಹಾಗೂ ಟಿ.ವಿ.ಗಳಿಂದ ಆಕರ್ಷಿತರಾಗದೇ ಇರುವವರು ಹೇಗೆ ತಾನೇ ಬದುಕಿರಲು ಸಾಧ್ಯ ?' ಎಂದು ಜನರು ಕೇಳುತ್ತಾರೆ.
ಹೇಗೋ ಏನೋ, ನಾನಿರುವುದೇ ಹೀಗೆ.
'ನೀವು ಅಸಾಮಾನ್ಯರು. ನೀವು ಜ್ಞಾನಿಗಳು' ಎಂದು ಅವರು ಹೇಳುತ್ತಾರೆ. ಆದರೆ ಜ್ಞಾನೋದಯಕ್ಕೆ ಮುಂಚೆಯೂ, ಅದು ನನ್ನ ಜೀವನದ ಭಾಗವಾಗಿರಲಿಲ್ಲ.
ಆದ್ದರಿಂದ ಸರಿಯಾಗಿ ತಿಳಿಯಿರಿ. ನೀವು ಸತ್ಯಯುಗವನ್ನು ಪ್ರವೇಶಿಸಿದರೆ, ಎಲ್ಲವೂ ಧರ್ಮದ ಅನುಗುಣವಾಗಿ ನಡೆಯುತ್ತದೆಂದು ತಿಳಿದರೆ, ವಿಶ್ವವು ನಿಮ್ಮನ್ನು ಹಿಂಸಿಸಿ ಆನಂದಿಸುವುದಂತಹುದಲ್ಲ ಎಂದು ತಿಳಿಯುವಿರಿ. ಇದ್ದಕ್ಕಿದ್ದಂತೆ, ನಿಮ್ಮ ಸುತ್ತ ಮುತ್ತ ಸರಿಯಾದ ಜನರು ಹಾಗೂ ಸರಿಯಾದ ವಿಷಯಗಳನ್ನು ಆಕರ್ಷಿಸಲಾರಂಭಿಸುತ್ತೀರಿ. ನಿಮ್ಮ ಇಡೀ ಪ್ರಪಂಚವೇ ಬದಲಾಗುತ್ತದೆ. ಇದೊಂದು ದೃಢವಾದ, ನೇರವಾದ, ಸರಳವಾದ, ಪ್ರಮಾಣಿಕವಾದ, ಅನುಭವಾತ್ಮಕ ಸತ್ಯ. ನಿಮ್ಮ ಅಂತರಂಗವನ್ನು ಇಂದು ಬದಲಾಯಿಸಿಕೊಂಡರೆ, ಹನ್ನೆರಡು ವರ್ಷಗಳ ನಂತರ ನಿಮ್ಮ ಪರಿಸರವು ಬದಲಾಗುತ್ತದೆಂದು ನಾನು ಹೇಳುತ್ತಿಲ್ಲ, ಇಲ್ಲ ! ನೀವು ಈಗ ಬದಲಾದರೆ, ಈ ಕ್ಷಣದಲ್ಲಿಯೇ ಬದಲಾವಣೆಯನ್ನು ಕಾಣುತ್ತೀರೆಂದು ಹೇಳುತ್ತಿದ್ದೇನೆ. ನಾನು ಯಾವ ತತ್ವಗಳನ್ನೂ ಪ್ರತಿಪಾದಿಸುತ್ತಿಲ್ಲ. ನಾನೇನು ಮಾತನಾಡುತ್ತಿದ್ದೇನೆಂದು ನನಗೆ ತಿಳಿದಿದೆ. ನನ್ನ ಮಾತುಗಳಿಗೆ ನಾನು ಜವಾಬ್ದಾರನಾಗಿದ್ದೇನೆ.
ನೋಡಿರಿ, ಅನೇಕ ಬಗೆಯ ಜನರಿದ್ದಾರೆ. ಯಾವಾಗಲೂ ಟೀಕೆ ಮಾಡುವವರು ಏನಾದರೊಂದನ್ನು ಟೀಕಿಸುತ್ತಲೇ ಇರುತ್ತಾರೆ. ಅವರು, 'ಇಲ್ಲ ! ಈ ಸ್ವಾಮೀಜಿ ಏನು ಮಾತನಾಡುತ್ತಾರೆ ? ಇವರು ಬಣ್ಣ ಬಣ್ಣದ ಮಾತುಗಳಿಂದ ಕಟ್ಟುಕಥೆಗಳನ್ನು ಹೇಳುತ್ತಾರೆ. ನಾನು ಎಲ್ಲವನ್ನೂ ಅನುಭವಿಸಿದ್ದೇನೆ. ನಾನು ಇವೆಲ್ಲದರ ಬಗ್ಗೆ ಈ ಹಿಂದೆಯೇ ಓದಿದ್ದೇನೆ. ನಾನು ಈ ಎಲ್ಲವನ್ನೂ ಸಾಕಷ್ಟು ಕೇಳಿದ್ದೇನೆ. ಇವು ಪ್ರಾಯೋಗಿಕ ಸತ್ಯಗಳಲ್ಲ' ಎಂದು ಹೇಳುತ್ತಾರೆ.
ನೋಡಿರಿ, ಇವುಗಳ ಬಗ್ಗೆ ನೀವು ಓದಿ, ಕೇಳಿರುವಿರಿ. ಆದರೆ ಅವರು ಹೇಳುವಕ ಸಂಸ್ಕೃತಿ ಮಾರ್ಗಾರಿ ಮತ್ತು ಮತ್ತು ಸಂಸ್ಕೃತಿ ಸಂಸ್ಕೃತಿ ಮತ್ತು ಮತ್ತು ನೀವು ಅಭ್ಯಾಸ ಮಾಡಿದ್ದೀರೇನು ? ಇಲ್ಲ ! ನೀವು ಅವುಗಳ ಬಗ್ಗೆ ಕೇವಲ ಓದಿದ್ದೀರಿ. ಕೆಲವು ಕಥೆಗಳನ್ನು, ವದಂತಿಗಳನ್ನು ಆಲಿಸಿ, ನಿರ್ಧಾರಕ್ಕೆ ಬರುತ್ತೀರಿ. ಅಷ್ಟೇ ಅಲ್ಲದೆ, ನೀವು ಏನೇ ಹೇಳಿದರೂ, ಅದನ್ನು ವಿರೋಧಿಸುವ ಒಂದು ಗುಂಪು ಯಾವಾಗಲೂ ಇದ್ದೇ ಇರುತ್ತದೆ.
ಒಂದು ಸಣ್ಣ ಕಥೆ :
ಒಂದು ಹಳ್ಳಿಯಲ್ಲಿ, ಒಬ್ಬ ವ್ಯಕ್ತಿಯನ್ನು ಮೂರ್ಖನೆಂದು ಎಲ್ಲರೂ ತೆಗಳುತ್ತಿದ್ದರು. ಒಮ್ಮೆ ಒಬ್ಬ ಜ್ಞಾನಿಯು ಆ ಹಳ್ಳಿಯ ಮಾರ್ಗವಾಗಿ ಸಾಗುತ್ತಿದ್ದರು.
ಆ ವ್ಯಕ್ತಿಯು ಆ ಜ್ಞಾನಿಯ ಬಳಿಗೆ ಹೋಗಿ, 'ಈ ಹಳ್ಳಿಯವರೆಲ್ಲರೂ ನನ್ನನ್ನು ಗೇಲಿ ಮಾಡುತ್ತಾರೆ. ನಾನೊಬ್ಬ ಮೂರ್ಖ. ನನ್ನನ್ನು ಯಾರೂ ಗೌರವಿಸುವುದಿಲ್ಲ. ಸಣ್ಣ ಮಕ್ಕಳೂ ಸಹ ಕಲ್ಲುಗಳಿಂದ ಹೊಡೆದು ನನ್ನನ್ನು ಮೂರ್ಖನೆಂದು ಕರೆಯುತ್ತಾರೆ. ದಯವಿಟ್ಟು ನಾನು ಬುದ್ದಿವಂತನೆಂದು ತೋರುವಂತೆ ಮಾಡಿರಿ' ಎಂದು ಕೇಳಿಕೊಂಡನು.
ಗುರುಗಳು, 'ಹಾಗೆಯೇ ಆಗಲಿ. ಚಿಂತಿಸಬೇಡ. ನಿನಗೆ ಒಂದು ಸರಳವಾದ ತಂತ್ರವನ್ನು ಹೇಳಿಕೊಡುತ್ತೇನೆ. ಒಂದು ವಾರದವರೆಗೆ ಅದನ್ನು ಅಭ್ಯಾಸ ಮಾಡು. ನೀನು ಬುದ್ದಿವಂತನೆಂಬಂತೆ ಕಾಣುವೆ. ನೀನು ಇಡೀ ಹಳ್ಳಿಯವರಿಂದ ಗೌರವಿಸಲ್ಪಡುವೆ' ಎಂದು ಹೇಳಿದರು.
ಆ ವ್ಯಕ್ತಿಯು ಆಶ್ಚರ್ಯದಿಂದ, 'ಏನು ? ಒಂದೇ ವಾರದಲ್ಲಿ ! ಹಳ್ಳಿಯವರೆಲ್ಲರೂ ನನ್ನನ್ನು ಗೌರವಿಸುತ್ತಾರೋ ! ಹೇಳಿರಿ. ತಲೆಕೆಳಗಾಗಿ ನಿಲ್ಲುವುದಾದರೂ, ನಾನು ಅದನ್ನು ಮಾಡುತ್ತೇನೆ' ಎಂದು ಹೇಳಿದನು.
ಗುರುಗಳು, "ನೀನು ತಲೆಕೆಳಗಾಗಿ ನಿಲ್ಲಬೇಕಾಗಿಲ್ಲ. ಅದು ಅಷ್ಟೊಂದು ಕಷ್ಟವಾದದ್ದೇನಲ್ಲ. ಇಷ್ಟನ್ನು ಮಾತ್ರ ಮಾಡು; ಏನನ್ನು ಕಂಡರೂ, ಅದನ್ನು ಟೀಕಿಸು. ಬೇರೇನೂ ಮಾಡುವ ಅಗತ್ಯವಿಲ್ಲ. ಯಾರಾದರೂ, 'ಚಂದ್ರ ಎಷ್ಟು ಸುಂದರವಾಗಿದ್ದಾನೆ !' ಎಂದರೆ, 'ಅದೇನು ಮಹಾ ? ಅದರಲ್ಲಿ ಎಷ್ಟೊಂದು ಕಪ್ಪು ಕಲೆಗಳಿವೆ !' ಎಂದು ಹೇಳು. ಯಾರಾದರೂ 'ಈ ರೋಜಾ ಹೂ ಎಷ್ಟು ಸುಂದರವಾಗಿದೆ' ಎಂದರೆ, ಅದನ್ನು ಟೀಕಿಸುತ್ತಾ 'ಇದೆಂತಹ ಸೊಬಗು ? ಅದರಲ್ಲಿ ಎಷ್ಟು ಮುಳ್ಳುಗಳಿವೆ" ಎಂದು ಹೇಳು. ಸತತವಾಗಿ ಎಲ್ಲವನ್ನೂ ಟೀಕಿಸು. ಬೇರೇನೂ ಮಾಡುವ ಅಗತ್ಯವಿಲ್ಲ' ಎಂದು ಹೇಳಿದರು.
ಆ ವ್ಯಕ್ತಿಯು ಇದಕ್ಕೊಪ್ಪಿ ಇದನ್ನು ಕ್ರಮಬದ್ದವಾಗಿ ಅನುಸರಿಸಿದನು.
ಜೀವನ್ಮುಕ್ತಿ – ಒಂದು ಪರಿಚಯ
ಕೆಲವು ದಿನಗಳ ನಂತರ ಗುರುಗಳು ತಮ್ಮ ತೀರ್ಥಯಾತ್ರೆಯನ್ನು ಮುಗಿಸಿ, ಆ ಹಳ್ಳಿಗೆ ಹಿಂದಿರುಗಿದರು. ಒಂದು ದೊಡ್ಡ ಬೇವಿನ ಮರದ ಕೆಳಗೆ ಈ ವ್ಯಕ್ತಿಯು ಕುಳಿತಿರುವುದನ್ನು ಕಂಡರು. ಇಡೀ ಹಳ್ಳಿಯವರೆಲ್ಲಾ ಆತನ ಮಾತನ್ನು ಕೇಳುತ್ತಾ ಆತನ ಸುತ್ತಲೂ ಕುಳಿತಿರುವುದನ್ನು ಕಂಡರು. ಗುರುಗಳು ಬಂದಾಗ, ಅವನು ಅವರತ್ತ ನೋಡಿದನು.
ಗುರುಗಳು, 'ನಾನು ನಿನ್ನೊಡನೆ ಮಾತನಾಡಬೇಕು' ಎಂದು ಹೇಳಿದರು. ಆ ವ್ಯಕ್ತಿಯು, 'ನನ್ನ ಉಪನ್ಯಾಸದ ನಂತರ ಬಂದು ನಿಮ್ಮನ್ನು ನೋಡುತ್ತೇನೆ' ಎಂದು ಹೇಳಿದನು.
ಎಲ್ಲರೂ ಹೊರಟು ಹೋದಮೇಲೆ, ಆ ವ್ಯಕ್ತಿಯು ಗುರುಗಳ ಪಾದಗಳಿಗೆರಗಿ ಹೇಳಿದನು, 'ಓ ಗುರುವೆ ! ನಿಮ್ಮ ಉಪಾಯವು ನಿಜವಾಗಿಯೂ ಪವಾಡಸದೃಶವಾಗಿದೆ. ನಾನು ಎಲ್ಲವನ್ನೂ ನಿಂದಿಸಲಾರಂಭಿಸಿದೆ. ಕಂಡ ಕಂಡದ್ದನ್ನೆಲ್ಲಾ ಟೀಕಿಸಲಾರಂಭಿಸಿದೆ. ಕೆಲವರು ಬುದ್ದಿವಂತನೆಂದುಕೊಂಡರು. ನಾನೀಗ ಹಳ್ಳಿಯಲ್ಲಿ ಬಹಳವಾಗಿ ಗೌರವಿಸಲ್ಪಟ್ಟಿದ್ದೇನೆ ಎಂದನು.
ಅದಕ್ಕೆ ಬೇಕಾಗಿರುವುದು ಇಷ್ಟೇ ! ಬುದ್ದಿವಂತರಾಗಿ ತೋರಲು, ನಿಮ್ಮ ಸುತ್ತಲಿರುವುದೆಲ್ಲವನ್ನೂ ಸತತವಾಗಿ ಟೀಕಿಸುತ್ತಿರಬೇಕು.
ಕೆಲವೊಮ್ಮೆ ಜನರು ನನ್ನನ್ನು ಟೀಕಿಸಿದಾಗ, ನನ್ನ ಸುತ್ತಲಿರುವವರು ಸಿಟ್ಟಿಗೆದ್ದು, 'ಸ್ವಾಮೀಜಿ, ಈ ವ್ಯಕ್ತಿಯು ನಿಮ್ಮನ್ನು ಟೀಕೆ ಮಾಡಿದ್ದಾನೆ. ಆತನನ್ನು ದಂಡಿಸಿರಿ. ಆತನು ನಿಮ್ಮನ್ನು ಅಗೌರವದಿಂದ ನೋಡಿದ್ದಾನೆ' ಎನ್ನುತ್ತಾರೆ.
ನಾನು, 'ಆತನಿಗೆ ಯಾವ ಶಿಕ್ಷೆಯೂ ಬೇಕಾಗಿಲ್ಲ. ಆತನು ಈಗಾಗಲೇ ನರಕದಲ್ಲಿದ್ದಾನೆ ! ಆತನಿಗೆ ಯಾವ ಶಿಕ್ಷೆಯೂ ಅಗತ್ಯವಿಲ್ಲ. ಆತನಿರುವ ಪ್ರಜ್ಞಾಸ್ಥಿತಿಯೇ ಆತನಿಗೆ ಅತ್ಯಂತ ಕೆಟ್ಟ ಶಿಕ್ಷೆ. ಆತನಿಗೆ ಬೇರೆ ಒಂದು ನರಕವೇ ಬೇಕಾಗಿಲ್ಲ' ಎಂದು ಅವರಿಗೆ ಹೇಳುತ್ತೇನೆ.
ತಿಳಿಯಿರಿ, ಆತನಿಗೆ ಬೇರೆ ನರಕವೇ ಬೇಕಾಗಿಲ್ಲ ! ಆತನಿಗೆ ಬೇರೆ ಶಿಕ್ಷೆಯು ಬೇಕಾಗಿಲ್ಲ. ಆತನಾಗಲೇ ನರಕದಲ್ಲಿದ್ದಾನೆ ! ಸರಿಯಾಗಿ ತಿಳಿಯಿರಿ, ನಿಮಗೆ ಎರಡು ಮನಸ್ಸುಗಳಿದ್ದು, ಒಂದು ಮನಸ್ಸಿನಿಂದ ಬೇರೆಯವರನ್ನು ಅಳೆದು, ಇನ್ನೊಂದು ಮನಸ್ಸಿನಿಂದ ನಿಮ್ಮೊಂದಿಗೆ ನೀವು ಬಾಳುವಷ್ಟು