KAILASA Library/ನಿತ್ಯ ಧ್ಯಾನ - ಆನಂದ ಅನುಭವ (Nitya Dhyana - Ananda Anubhava)/ಮಂತ್ರಗಳನ್ನು ಆಲಿಸಿ (ಸಮಯದ ಅವಧಿ : 10 ನಿಮಿಷಗಳು)Sign in
ನಿತ್ಯ ಧ್ಯಾನ - ಆನಂದ ಅನುಭವ (Nitya Dhyana - Ananda Anubhava)

ಮಂತ್ರಗಳನ್ನು ಆಲಿಸಿ (ಸಮಯದ ಅವಧಿ : 10 ನಿಮಿಷಗಳು)

ಈ ಕೊನೆಯ ಹೆಜ್ಜೆಯಲ್ಲಿ , ಸುಮ್ಮನೆ ಆನಂದದ ಮನೋಭಾವನೆಯಲ್ಲಿ ನಿಶ್ಶಬ್ದವಾಗಿ ಕುಳಿತುಕೊಂಡು ಪಠಿಸುತ್ತಿರುವ ಮಂತ್ರವನ್ನು ಆಲಿಸಿ. ವಿಶ್ವಶಕ್ತಿಯೊಂದಿಗೆ ಸಂಬಂಧ ಹೊಂದಿದ ಹಾಗೆ ಸುಮ್ಮನೆ ಅನುಭವಿಸಿ ಮತ್ತು ಶಕ್ತಿಶಾಲಿಯಾದ ಮಂತ್ರಗಳಿಂದ ನಿಮ್ಮ ಅಂತರಂಗದಲ್ಲಿ ಆಗುವ ಕಂಪಗಳನ್ನು ಅನುಭವಿಸಿ. ಮಂತ್ರಗಳು ವಿಶ್ವಶಕ್ತಿಗೆ ಅಥವಾ ಗುರುಗಳಿಗೆ ನಮ್ಮನ್ನು ಅಜ್ಞಾನದಿಂದ ಬಿಡುಗಡೆಗೊಳಿಸಿ ನಿರಂತರವಾದ ಆನಂದವನ್ನು, ಅಂದರೆ ನಿತ್ಯಾನಂದವನ್ನು ಹೊಂದಲು ಸಹಾಯ ಮಾಡುವ ಈ ಮಹತ್ತರ ಪ್ರಜ್ಞೆಯನ್ನು ನಮಗೆ ದಯಪಾಲಿಸಿದ್ದಕ್ಕಾಗಿ ನಮ್ಮ ಕೃತಜ್ಞತೆಗಳನ್ನು ಅರ್ಪಿಸುವ ಒಂದು ವಿಧಾನ.

ನೀವು ವಿಧಿ ವಿಧಾನಗಳಲ್ಲಿ ಆಸಕ್ತರಾಗಿದ್ದರೆ, ನೀವು ಗುರುಪೂಜಾವನ್ನು ( ಗುರುಗಳಿಗೆ ಕೃತಜ್ಞತೆಗಳನ್ನು ಅರ್ಪಿಸುವುದು) ಈ ನಡಿಗೆಯಲ್ಲಿ ಮಂತ್ರಗಳನ್ನು ಉಚ್ಚರಿಸುತ್ತಾ ವಿಧಿಗಳನ್ನು ಮಾಡಬಹುದು.

ನೀವು ವಿಧಿಗಳಲ್ಲಿ ಆಸಕ್ತರಾಗಿಲ್ಲದಿದ್ದರೆ, ಸುಮ್ಮನೆ ನಿಶ್ಶಬ್ದವಾಗಿ ಕುಳಿತು ಮಂತ್ರಗಳನ್ನು ಆಲಿಸಬಹುದು. ಕೇವಲ ಮಂತ್ರಗಳನ್ನು ಆಲಿಸುವುದರಿಂದ ಕೂಡ ನಿಮಗೆ ತುಂಬಾ ಒಳಿತನ್ನು

ಮಾಡುವುದು. ಮಂತ್ರಗಳು ಕಂಪನಗಳಿಂದ ಕೂಡಿದ್ದು ನಿಮ್ಮನ್ನು ಹೆಚ್ಚು ಪವಿತ್ರವಾಗಿಯೂ ಮತ್ತು ಆನಂದದಾಯಕವಾಗಿಯೂ ಇರಲು ನಿಮ್ಮನ್ನು ಪರಿವರ್ತಿಸುತ್ತದೆ.

ಆದುದರಿಂದ ದೈನಂದಿಕವಾಗಿ ಈ ಧ್ಯಾನತಂತ್ರವನ್ನು ದಿನದಲ್ಲಿ ಕನಿಷ್ಟ ಒಂದು ಬಾರಿಯಾದರೂ ಮಾಡಿ ಮತ್ತು ನಿಮ್ಮಲ್ಲಿ ಒಂದು ಹೊಸ ಆಯಾಮವನ್ನು ಅನುಭವಿಸಲು ಪ್ರಾರಂಭಿಸಿ. ಈ ತಂತ್ರವು ನಿಮ್ಮ ಪರಿಶುದ್ದ ಅರಿವನ್ನು ಮತ್ತು ನಿತ್ಯಾನಂದದ ಸ್ಥಿತಿಯನ್ನು ಅನುಭವಿಸಲು ಮನಸ್ಸು ಮತ್ತು ದೇಹವನ್ನು ತಯಾರುಮಾಡಲು ಸಹಾಯಮಾಡುತ್ತದೆ. ನಿಮಗೆ ಅನುಭವವಾಗಲಿ ಮತ್ತು ನಿರಂತರ ಆನಂದವಾದ ನಿತ್ಯಾನಂದನಲ್ಲಿ ಒಂದಾಗಿರಿ.