ಭಾಗ 1: ನಿತ್ಯ ಧ್ಯಾನ - ಆನಂದ ಅನುಭವ
ಆರಂಥಮಯ ಜಿ ೇವಸಕ್ಯಾಗಿ ಧ್ಯಾನ
ಎಶ್ರಮಿಸಿ... ನವೋಲ್ಲಾಸ ಹೊಂದಿ... ಪಸರಿಸಿ...
ನಿತ್ಯ ಧ್ಯಾನ ಆನಂದವನ್ನು ಅನುಭವಿಸಿ
THE SUPREME PONTIFF OF HINDUISM BHAGAWAN SRI NITHYANANDA PARAMASHIVAM
ನಿಮ್ಮಲ್ಲಿ ನಿತ್ಯಾನಂದ ಸ್ಟಿತಿಯನ್ನು ಸಾಧಿಸಲು ಒಂದು ತಂತ್ರ
ಈ ಪುಸ್ತಕದಲ್ಲಿ ಒಳಗೊಂಡಿರುವ ಧ್ಯಾನ ತಂತ್ರಗಳನ್ನು ಲೈಫ್ ಬ್ಲಿಸ್ ಫೌಂಡೇಶನ್ (LBF) ಅಥವಾ ನಿತ್ಯಾನಂದ ಸೈನ್ಸ್ ಯೂನಿವರ್ಸಿಟಿ (NVSU)ನಿಂದ ದೀಕ್ಷೆ ಪಡೆದ ಶಿಕ್ಷಕರ ವೈಯುಕ್ಲಿಕ ಸೂಚನೆಗಳನ್ನು ಪಡೆದ ನಂತರ ಅಭ್ಯಾಸ ಮಾಡತಕ್ಕದ್ದು. ಯಾರಾದರೂ ಈ ತಂತ್ರಗಳನ್ನು LBF ಅಥವಾ NVSU ಕಾರ್ಯಕ್ರಮಗಳಲ್ಲಿ ಮುಂಚಿತವಾಗಿ ಭಾಗವಹಿಸದೆ ಅಭ್ಯಾಸಮಾಡಿದರೆ ಅವರು ಪೂರ್ಣವಾಗಿ ಅವರ ಜವಾಬ್ದಾರಿಯಲ್ಲಿಯೇ ಮಾಡುತ್ತಿರುತ್ತಾರೆ; ಲೇಖಕರಾಗಲೀ ಅಥವಾ LBF ಅಥವಾ NVSU ಆಗಲೀ ಇಂತಹ ಕೃತ್ಯಗಳ ಪರಿಣಾಮಗಳಿಗೆ ಜವಾಬ್ದಾರರಾಗುವುದಿಲ್ಲ.
ನಾನು ನಿತ್ಯಧ್ಯಾನ ಎಂದರೆ ಏನು ಎಂದು ವಿವರಿಸುವುದಕ್ಕೆ ಮೊದಲು ಈ ಅಂತರ್ಜ್ಞಾನ ನನ್ನಲ್ಲಿ ಹೇಗೆ ಉಂಟಾಯಿತು ಎಂಬುದರ ಸಂಕ್ಷಿಪ್ಲ ಹಿನ್ನಲೆಯನ್ನು ಕೊಡಲು ಬಯಸುತ್ತೇನೆ. ಜ್ಞಾನೋದಯದ ನಂತರದಲ್ಲಿ ನಾನು ವಿಸ್ತೃತ ಕಾಲ (ಹಲವಾರು ತಿಂಗಳುಗಳೇ ಇರಬಹುದು) ಮೌನದಿಂದಿದ್ದೆ. ಆ ಸಮಯದಲ್ಲಿ ನನ್ನಲ್ಲಿ ಉಂಟಾದ ಅದೇ ಆನುಭವವನ್ನು ಇತರರಲ್ಲಿಯೂ ಹೇಗೆ ಅದೇ ರೀತಿ ಉಂಟಾಗುವಂತೆ ಮಾಡಬಹುದೆಂದು ಕಾಣಲು ನಾನು ಧ್ಯಾನ ತಂತ್ರಗಳ ಬಗ್ಗೆ ಸಂಶೋಧನೆಯನ್ನು ಮಾಡುತ್ತಿದ್ದೆನು. ಇದರ ಪ್ರಥಮ ಫಲಿತಾಂಶವೇ ನಾನು ಏಳು ಶಕ್ತಿಕೇಂದ್ರಗಳ ಮೇಲೆ ಕೆಲಸ ಮಾಡಿ ಪ್ರತಿಯೊಂದು ಶಕ್ತಿ ಕೇಂದ್ರವನ್ನೂ ಸಚೇತನ ಅಥವಾ ಶುದ್ದಿಗೊಳಿಸಲು ಧ್ಯಾನ ತಂತ್ರಗಳನ್ನು ರೂಪಿಸಿದ ಆನಂದ ಸ್ಪುರಣ ಪ್ರೋಗ್ರಾಮ್ ಅಥವಾ ಲೈಫ್ ಬ್ಲಿಸ್ ಪ್ರೋಗ್ರಾಮ್ (Ananda spurana program or Life Bliss Program). ಇದನ್ನು ಅನುಸರಿಸಿಕೊಂಡ ಪ್ರತಿಯೊಬ್ಬರೂ ಪ್ರಶಾಂತವಾದ ಮತ್ತು ಆನಂದಮಯವಾದ ಮರಣವನ್ನು ಪಡೆಯಲು ಸಹಾಯವಾಗುವುದಕ್ಕೆ ಚೈತನ್ಯ ಶರೀರದ ಏಳು ಕೋಶಗಳ ಪ್ರತಿಯೊಂದಕ್ಕೂ ಧ್ಯಾನ ತಂತ್ರಗಳನ್ನು ಅಳವಡಿಸಿದ ನಿತ್ಯಾನಂದ ಸ್ಪುರಣ ಪ್ರೋಗ್ರಾಂ ಅನ್ನು ರೂಪಿಸಿದೆ. ಅದಾದ ನಂತರ ಪ್ರತಿ ವ್ಯಕ್ತಿಯೂ ಸಾಧ್ಯವಾದ ಎಲ್ಲ ರೀತಿಯ
ಮಾರ್ಗಗಳು ಹಾಗೂ ದಾರಿಗಳಿಂದ ಪರಿಪೂರ್ಣತೆಯನ್ನು ಹೊಂದಲು ಮತ್ತು ಆತೃ ಸಾಕ್ಷಾತ್ತಾರವನ್ನು ಹೊಂದಲು ಧ್ಯಾನ ಸುರುಣ ಪ್ರೋಗ್ರಾಂ, ಆತ್ಕ ಸುರಣ ಪ್ರೋಗ್ರಾಂ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದೇನೆ. ನಾನು ಸುಮಾರು ನೂರು ವಿವಿಧ ಧ್ಯಾನ ತಂತ್ರಗಳನ್ನು ನನ್ನೆಲ್ಲ ಕಾರ್ಯಕ್ರಮಗಳಲ್ಲಿ ಅಳವಡಿಸಿದ್ದು ಮತ್ತು ಪ್ರತಿಯೊಂದು ಧ್ಯಾನ ತಂತ್ರವೂ ಜೀವಿಯ ಯಾವುದಾದರೂ ವಿಷಯವನ್ನು ಕುರಿತು ಕೆಲಸ ಮಾಡುತ್ತಾ ವ್ಯಕ್ತಿಯ ಪ್ರಜ್ಞೆಯನ್ನು ಮೇಲಿನ ಸ್ತರಕ್ಕೆ ಎತ್ತರಿಸಲು ವಾಡುವ ಪ್ರಯತವಾಗಿರುತ್ತದೆ.
ಪ್ರತಿಯೊಬ್ಬರಿಗೂ ಸೂಕ್ತವಾಗುವಂತಹ ಮತ್ತು ಅದನ್ನು ಅವರು ನಿತ್ಯವೂ ಅಭ್ಯಾಸ ಮಾಡಬಹುದಾದಂತಹ ಯಾವುದಾದರೂ ಧ್ಯಾನ ತಂತ್ರವು ನನ್ನ ಬಳಿ ಇದೆಯೇ ಎಂದು ಜನಗಳು ಯಾವಾಗಲೂ ನನ್ನನ್ನು ಕೇಳುತ್ತಿದ್ದರು. ಈ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಿದ್ದಾಗ ನಾನು ಇದರ ಬಗ್ಗೆ ಯೋಚಿಸಲಾರಂಭಿಸಿದೆ.
ನನ್ನ ತತ್ವವನ್ನು ಬೋಧನೆಗಳನ್ನು ಮತ್ತು ನನ್ನ ಅನುಭವವನ್ನು ಸಮಗ್ರವಾಗಿ ಪ್ರತಿನಿಧಿಸುವಂತಹ ಒಂದು ತಂತ್ರವನ್ನು ರೂಪಿಸಲು ನಾನು ಆಳವಾಗಿ ಯೋಚಿಸಲಾರಂಭಿಸಿದೆ. ಜೀವಿಯ ಯಾವುದೋ ಒಂದು ನಿರ್ದಿಷ್ಟ ವಿಷಯದ ಬಗ್ಗೆ ಕೇಂದ್ರೀಕರಿಸುವ ಬದಲು ಒಂದು ಸಮಗ್ರವಾದ ಮತ್ತು ಸ್ನಯಂ ಪೂರ್ಣವಾದ ಧ್ಯಾನ ತಂತ್ರದ ಬಗ್ಗೆ ದೃಷ್ಟಿಯನ್ನಿಟ್ಟುಕೊಂಡೆ ; ಆ ತಂತ್ರವು ಇಡಿಯ ಜೀವಿಯ ಮೇಲೆ ಕೆಲಸ ಮಾಡಿ ಅದನ್ನು ಪರಿವರ್ತನೆಗೊಳಿಸುವಂತಹ ಮತ್ತು ಪರಮ ಅನುಭವವು ಉದಯವಾಗುವುದಕ್ಕೆ ಸಜ್ಜಾಗಿಸುವಂತಹ ತಂತ್ರವಾಗಿರಬೇಕು. ಮತ್ತು ಒಂದು ದಿನ, ಈಗ ನಾನು ನಿಮ್ಜೆಲ್ಲರಿಗೂ
ಬೋಧಿಸಲಿರುವ ಈ ಧ್ಯಾನ ತಂತ್ರವು ನಿತ್ಯ ಧ್ಯಾನ (THE SUPREME PONTIFF OF HINDUISM BHAGAWAN SRI NITHYANANDA PARAMASHIVAMಕ್ಕಾಗಿ ಧ್ಯಾನ) ಒಂದು ಮಿಂಚಿನಂತೆ ನನಗೆ ಹೊಳೆಯಿತು. ಒಂದು ಕ್ಷಣದಲ್ಲಿ ಈ ತಂತ್ರದ ವಿವಿಧ ಅಂಗಗಳನ್ನು ನಿಚ್ಚಳವಾಗಿ ನೋಡಬಲ್ಲೆನಾದೆನು ; ಹೇಗೆ ಪ್ರತಿಯೊಂದು ಅಂಗವೂ ಬೇರೊಂದಿಗೆ ಸಂಬಂಧಿಸಿ ವ್ಯಕ್ತಿಗತ ಪ್ರಜ್ಞೆಯನ್ನು ಮೇಲೆತ್ತಲು ಸಹಾಯ ಮಾಡುವುದೆಂದು ನನ್ನ ಒಳಗೆ ( ಒಳಗಿನ ಸ್ಥಳದಲ್ಲಿ) ಕಂಡುಕೊಂಡೆ. ಧ್ಯಾನದ ನನ್ನ ಪರಿಶೋಧನೆಯಲ್ಲಿ ನಿತ್ಯಧ್ಯಾನವು ಕಲಶಪ್ರಾಯವೆಂದು ನಾನು ಹೇಳುತ್ತೇನೆ.
ನೀವೊಂದು ಮುಖ್ಯವಾದ ವಿಚಾರವನ್ನು ಅರಿತುಕೊಳ್ಳಬೇಕು. ಒಬ್ಬ ಖುಷಿಯನ್ನು ಮಂತ್ರದ್ರಷ್ಟ (ಮಂತ್ರವನ್ನು ನೋಡುವ ವ್ಯಕ್ತಿ) ಎಂದೂ ಕರೆಯುವರು. ಇದರ ಅರ್ಥ ಆವನು ತನ್ನ ದೃಷ್ಟಿಯಿಂದ ಆ ಮಂತ್ರವನ್ನು ಅಥವಾ ತಂತ್ರವನ್ನು ಸಮಾಧಿ ಸ್ಥಿತಿಯಲ್ಲಿ ನೋಡುವವನು ಎಂದು. ಆ ಮಂತ್ರ ಅಥವಾ ತಂತ್ರವನ್ನು ಸೃಷ್ಟಿಸಿದವನು ಎಂದಲ್ಲ. ಅದು ಹಾಗೆಯೇ ಅವನಿಗೆ ಗೋಚರಿಸಿರುವುದು. ಪ್ರಪಂಚಶಕ್ತಿಯು ಸ್ವಯಂ ಪರಿಪೂರ್ಣ ವಾಗಿರುವುದು ಮತ್ತು ಯಾವುದನ್ನೂ ಸೃಷ್ಟಿಸಲಾಗುವುದಿಲ್ಲ ಹಾಗೂ ಆದ್ದರಿಂದ ಯಾವುದೇ ತಂತ್ರ ಅಥವಾ ಮಂತ್ರವು ಯಾವುದೇ ವ್ಯಕ್ತಿಯ ಸೃಷ್ಟಿಯಾಗಿರುವುದಿಲ್ಲ. ಈ ಅಂಶವನ್ನು ಬಹಳ ಸ್ಪಷ್ಟವಾಗಿಸಲು ಬಯಸುತ್ತೇನೆ. ಈ ತಂತ್ರಕ್ಕಾಗಿ ಗೌರವವನ್ನು ನಾನು ತೆಗೆದುಕೊಳ್ಳುವುದಿಲ್ಲ, ಅದು ಸಮಯವು ಪಕ್ಷವಾದಾಗ ಸ್ನಯಂ ವ್ಯಕ್ತಗೊಂಡಿತು. ಈಗ ಈ ತಂತ್ರದ ವಿವರಗಳಿಗೆ ಹೋಗುವೆನು. ಈ ತಂತ್ರವು ಐದು ಭಾಗಗಳನ್ನೊಳಗೊಂಡಿದೆ. ನಿಮಗೆ ಒಂದೊಂದು ಭಾಗವಾಗಿ ವಿವರಿಸುತ್ತೇನೆ.