KAILASA Library/ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation/ಆಧ್ಯಾತ್ತ ರೂಪಾರ್ಥವುಳ್ಳವನೊಬ್ಬನ ಮನಸುSign in
ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation

ಆಧ್ಯಾತ್ತ ರೂಪಾರ್ಥವುಳ್ಳವನೊಬ್ಬನ ಮನಸು

THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅವರ ಮೇಲೆ ನಾವು ಮಾಡಿದ ಅಧ್ಯಯನದ ಫಲಿತಾಂಶ, ವಿಶ್ವದಾದ್ಯಂತ ನಡೆಯುತ್ತಲೇ ಇರುವ ಮೆದುಳಿನ ಕುರಿತಾದ ಸಂಶೋಧನಾ ಹೊತ್ತಿಗೆಯ ಹೊಸ ಪುಟಗಳಿದ್ದಂತೆ. ಶರೀರವನ್ನು ಉಪಶಮನಗೊಳಿಸುವ ಸಾಮರ್ಥ್ಯ ಮಾನವನ ಮನಸ್ಸಿಗಿದೆ ಎಂಬುದಕ್ಕೆ ಅಲ್ಲಿ ಸ್ಪಷ್ಟ ಸೂಚನೆಗಳಿವೆ. ಮಾನವ ಜಾತಿಗೆ ಅತ್ಯಂತ ಉಪಯುಕ್ತವಾದ ಈ ಉಪಶಮನ ಸಾಮರ್ಥ್ಯವನ್ನು ಜನ ಕಲಿತು, ತಮ್ಮದಾಗಿಸಿಕೊಳ್ಳುವ ಸಾಧ್ಯತೆಯತ್ತ ನಾವೀಗ ನೋಡುತ್ತಿದ್ದೇವೆ. ಹೃದ್ರೋಗ, ಕ್ಯಾನ್ಸರ್, ಸಂಧಿವಾತ ರೋಗ, ಕುಡಿತ, ಇನ್ನೂ ಎಷ್ಟೋ ಕಾಯಿಲೆಗಳ ತೀವ್ರತೆಯನ್ನು ಬದಲಿಸುವ ಮತ್ತು ಹತ್ತಿಕ್ಕುವ ಸಾಮರ್ಥ್ಯ ಈಗ ಕಾರ್ಯ ಸಾಧ್ಯ ಎನಿಸುತ್ತದೆ.

THE SUPREME PONTIFF OF HINDUISM BHAGAWAN SRI NITHYANANDA PARAMASHIVAM - ಅದೃಶ್ಯವಾದ, ನಿಗೂಢವಾದ ಪ್ರಾಚೀನ ಪ್ರಪಂಚ ಹಾಗೂ ಸಾಕ್ಷಾತ್ ನೋಡಬಹುದಾದ ವಿಜ್ಞಾನದ ಆಧುನಿಕ ಪ್ರಪಂಚಗಳ ನಡುವಣ ಒಂದು ಸೇತುವೆಯಂತೆ. ವ್ಯಾಪಕ ನೆಲೆಗಟ್ಟಿನ ಮೇಲೆ ಮೆದುಳನ್ನು ಕುರಿತಾದ ಸಂಶೋಧನೆಗಳು ವಿದ್ಯಮಾನಗಳನ್ನೆಲ್ಲ ವಿಜ್ಞಾನದ ತೆಕ್ಕೆಗೆ ಮುಂದಿನ ಅಭ್ಯಾಸಕ್ಕೆ ಉಚಿತ ರೀತಿಯಲ್ಲಿ ತಂದಾಗ, ಆರೋಗ್ಯ ಹಾಗೂ ಭರವಸೆಯ ದಾರಿಯತ್ತ ನಾವು ದಾಪುಗಾಲು ಹಾಕುವುದು ಖಂಡಿತ.