KAILASA Library/ನಿಜವಾಗಿಯೂ ನೀನು ಯಾರು... (Who are you really...)/THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಬಗ್ಗೆSign in
ನಿಜವಾಗಿಯೂ ನೀನು ಯಾರು... (Who are you really...)

THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಬಗ್ಗೆ

ಮಾನವನ ಜೀವನದುದ್ದೇಶದ ಕೊನೆಯಿಲ್ಲದ ಅನ್ವೇಷಣೆಯು ಈ ಸಾಲಿನಿಂದ ಕೊನೆಗೊಳ್ಳುತ್ತದೆ. ಪರಮಾನಂದವೇ ಹಾದಿ ಹಾಗೂ ಗುರಿ. ಇದು ಪರಮಹಂಸ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಅನುಭವ ಹಾಗೂ ಬೋಧನೆ. THE SUPREME PONTIFF OF HINDUISM BHAGAWAN SRI NITHYANANDA PARAMASHIVAM ನಮ್ಮೊಡನೆ ಈಗಿರುವ ಒಬ್ಬ ಜ್ಞಾನೋದಯ ಹೊಂದಿದ ಗುರು ಹಾಗೂ ನವಕಾಲೀನ ಅತೀಂದ್ರಿಯವಾದಿ.

ಪರಮಾನಂದವು ಕೊನೆಯಲ್ಲಿ ಸಿಗುವಂತಹುದಲ್ಲ., ಆದರೆ ಅದರ ಹಾದಿಯೇ ಪರಮಾನಂದವೆಂಬ ಅವರ ಅನುಭವ ಸಹಿತ ಜ್ಞಾನವನ್ನು ಮೊದಲು ನೀಡುವುದೇ ಅವರ ಜೀವಿತದ ಧ್ಯೇಯವಾಗಿದೆ. ಎಂದರೆ ದಿನದ 24 ಗಂಟೆಗಳಲ್ಲಿಯೂ ಪರಮಾನಂದದಲ್ಲಿ ಇರಲು ಸಾಧ್ಯವಾಗುವಂತಹ ಸ್ಥಿತಿ! ನಾವು ನಮ್ಮ ಜೀವಾವಕಾಶದಲ್ಲಿ ಶ್ರಮಿಸುವುದರ ಮೂಲಕ ಈ ಸ್ಥಿತಿಯನ್ನು ಪಡೆಯಲು ಸಾಧ್ಯವೆಂದು ಅವರು ತಿಳಿಯಪಡಿಸುತ್ತಾರೆ.

THE SUPREME PONTIFF OF HINDUISM BHAGAWAN SRI NITHYANANDA PARAMASHIVAM ದಕ್ಷಿಣ ಭಾರದ ಒಂದು ಪ್ರಮುಖವಾದ ಆಧ್ಯಾತ್ಮಿಕ ಕೇಂದ್ರವಾದ ತಿರುವಣ್ಣಾಮಲೈ, ಎಂಬ ಊರಿನಲ್ಲಿ ಜನಿಸಿದರು. ತೀವ್ರ ಧ್ಯಾನ, ಹಾಗೂ ಯೋಗ, ತಂತ್ರ ಮತ್ತು ಇತರ ಪೌರಾತ್ಯ ಅತೀಂದ್ರಿಯ ಜ್ಞಾನಗಳ ಅಧ್ಯಯನದ ಮೂಲಕ ಆಂತರ್ಯದ ಪರಮಾನಂದ ಸ್ಥಿತಿಯನ್ನು ಹೊಂದಿದರು. ವೈಯಕ್ತಿಕ ಅರಿವನ್ನು ಸ್ಫೋಟಗೊಳಿಸಿ ಆಧ್ಯಾತ್ಮಿಕವಾಗಿ ವ್ಯಕ್ತಿಗಳನ್ನು ಸೃಷ್ಟಿಸಲು ಅವರು ಸ್ವಾನುಭವದಿಂದ ಪರಮಾನಂದದ ತಂತ್ರಶಾಸ್ತ್ರವನ್ನು ನಿರೂಪಿಸಿದ್ದಾರೆ.

ನಮ್ಮ ಸಹಜಸ್ಥಿತಿಯಾದ ಧ್ಯಾನದಲ್ಲಿ ಮುಳುಗಲು ಅವರು ಅಸಂಖ್ಯಾತ ಕ್ರಮವಿಧಾನಗಳನ್ನು ಅವರು, 'ವಾಸ್ತವ ಪ್ರಪಂಚದಲ್ಲಿ ಯಶಸ್ಸನ್ನು ಗಳಿಸಲು ಹಾಗೂ ಆಂತರ್ಯದಲ್ಲಿ ಆಳವಾದ ಪೂರ್ಣತೆಯನ್ನು ಪಡೆಯಲು, ಧ್ಯಾನವೊಂದೇ ಇಂತಹ ಬೀಗಗಳನ್ನು ತೆಗೆಯಬಲ್ಲ ಕೀಲಿಕೈ' ಎಂದು ಹೇಳುತ್ತಾರೆ.