ßmB´ BÊ∑´X ƒ´"'@" ˆ´S¨"
˛ª≈"', ~ʃ´"`flm˙´ ^ƒ´©´¯˘ ©´m[ˆ" B"›´"– z´qÚ@""˙´. Ù¨" ¨Ê≥´¥Óʃ´z´qÚ Æ F´v¥Ó´" BÊ∑´X ÕΔF´t ¥Óʃ´.
ˆ"X©"@"¨Ê¨´ ¥Óʃ´ƒ´I ˆ´˚´" F"v·ƒ´"¨´ ¥Óʃ´. Ù¨´ˆ"y "ƒ´"◊¨´"~´ ¥Óʃ´'n©´"≠˙ÊÚ~". ~Ê◊¨"@"" Õv·ˆ´…ΔF´ÿ©´©´"≠ ˆÊw"˛Ú¨´¤ BÊ∑" ~Ê◊¨"∑" Õv·ˆ´…ΔF´ÿ©´ ∏∑"∫ Ù¨´¤ ¥Óʃ´©" ưv@"˙´ƒ´"©´ ¥Óʃ´©". ©Ê©´" `ƒ´"∑" ≥´NΔF´'F´¶≥´Ì" Ùp⁄≥´"ƒ´I¨"·©"m¨´~", ‡ ¥Óʃ´ƒ´I `·ƒ´I B"fi"Xÿ· ^S¨´ƒÊ ∑´m˚"X· nm∏"¨´~´ ∏∑"∫ ≥´m∏m◊|ßÌ˘. ^¨´" z´'·~´ˆ"y ≥´m∏m◊|ߨ´"¨´Ì˘. ^¨´" ¨"·BÊ·˛·˙´ƒÊ¨´"¨´". ^¨´" ±˙´Zˆ"y ≥´m∏m◊|ߨ´"¤.
∑´"~´"ƒ´I B"fiÊÿfl, `·ƒ´I ∑´m˚Êfl¨´¤~" ƒ´G˙´vƒ"· ƒ´"◊¨´"~´ ¥Óʃ´ƒ´I VmMÊ∑´∏Ì˘¨´" nm¨´" ˛ª@"Ó"·¶'. ^Ì˘! ∑´"~´"ƒ´I ∑´m˚Êfl, `·ƒ´« ∑´m˚Êfl¨´¤~´X ƒ´"◊¨´"~´¥Óʃ´ƒ´I VmMÊ∑´"˙´Ú¨". ^S¨´ƒÊ `·ƒ´I B"fiÊÿfl, ∑´"~´"ƒ´I B"fiÊÿfl¨´¤~´X, ƒ´"◊¨´"~´ ¥Óʃ´ƒ´I VmMÊ∑´∏B´"¨´". ƒ´"◊¨´"~´ ¥Óʃ´ˆ´Xy¨"}˜ˆ´ ≥´m∏m◊¨´ˆ´Xy @Gƒ´ ≥´m∏m◊¨´ƒ´« ÙÌ˘. ^¨´" ¨"·BÊ˛·˙´ƒÊ¨´"¨´". ^¨´" ¨"·B´ˆ"y ≥´m∏m◊|ß~´"ƒ´mS¨´¨´¤Ì˘. ^¨"Xm¨´" ∑Ê‹˚´ƒÊ¨´ ≥´m∏m◊¨´¨´ ¥Óʃ´©". `·ƒ´I B"fiÊÿ¨´~´X ±fl~´∏B´"¨´" ^S¨´ƒÊ ∑´m˚ʨ´~´X ±fl~´∏B´"¨´". ^¨´" @Gƒ´ '·˛@"¯˘@"X ƒ´"◊¨´"~´¥Óʃ´ˆ"y ≥´m∏m◊|ßÌ˘.
ˆ´˚"@" ¥Óʃ´ƒ´I ƒ´"BÊ¥Óʃ´, Ù¨´" Ï"ˆ´y ¨´" ¥Óʃ´∑´{´X ≥"·'~´"ƒ´mS¨´¨´"¤ BÊ∑´X Ù©´X≠ B"p–©´¨´"! ∑´"~´"ÕΔF´t ≥´m∏m◊¨´ƒ"Ì˘ƒ´« Ù¨"· '·˛@"¨"¤·. uƒ"XZƒ""Z `·ƒ´I ∑´"~´"ƒ´©´"≠ `ƒ´"Z ƒ´"∑´©´m˙" ˆ´m˚´~", ƒ´"˙"XÚƒ""Z `ƒ´"Z ˙´m¨"@"m˙" ¥ÓÊÏ≥´"Ï'. uƒ""Z ^ƒ´~´" `ƒ´"Z F´v¥Ó´"ƒ"m¨´" ¥ÓÊÏߨ´~", ƒ´"˙"XÚƒ""Z, `ƒ´"Z ≥"≠·˜˙´©´m˙" ¥ÓÊÏ≥´"Ï'. uƒ"XZƒ""Z ^ƒ´~´" `ƒ´"∑" ≥Êm˙´x©´ `·˚´"ƒ´ °v@"˙´ƒ´"©Êfl, `ƒ´"Z©´"≠ ನೀನು ನಿಜವಾಗಿಯೂ ಯಾರು. . .
ನೀವು ಗುರುಗಳೊಡನೆ ಈ ಏಳು ಭಾವಗಳಲ್ಲಿ ಯಾವುದಾದರೂ ಒಂದು ಭಾವದಿಂದ ಸಂಬಂಧಿಸಬಹುದು ಅಥವಾ ಈ ಏಳು ಭಾವಗಳಿಂದಲೂ ಸಂಬಂಧಿಸಬಹುದು. ಮಹಾನ್ ಶಸ್ತ್ರ ವೈದ್ಯನಾದ ಗುರುವು ನಿಮ್ಮ ಮೇಲೆ ಮಾಡುವ ಶಸ್ತ್ರ ಚಿಕಿತ್ಸೆಯನ್ನು ಸಹಿಸಿಕೊಳ್ಳಲು ಆಗಲೇ ನಿಮಗೆ ಸಾಧ್ಯ. ನೀವು ಗುರುಗಳೊಡನೆ ಸಂಬಂಧ ಕಲ್ಪಿಸದೇ ಇದ್ದರೆ, ನಿಮ್ಮಲ್ಲಿ ಗುರುಗಳೊಡನೆ ಭಾವನಾತ್ಮಕವಾಗಿ ನಿರ್ಮಾಣವಾಗದಿದ್ದರೆ, ತಿಳಿಯಿರಿ, ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ನೀವು ತಪ್ಪಿಸಿಕೊಳ್ಳುವಿರಿ. ಏಕೆಂದರೆ, ನಾನು ಗಾಯವನ್ನು ತೆರೆದಾಗ, ನಿಮಗೆ ಕೊಳಕೆನಿಸುತ್ತಿದೆ. ' ನನಗೆ ಬಹಳ ಅಸಹ್ಯವಾಗುತ್ತಿದೆ' ಎಂದು ನಾನು ಕೀವನ್ನು ಹೊರತೆಗೆಯುತ್ತಿರುತ್ತೇನೆ. ಆ ಕಾರಣ ನಿಮಗೆ ಕೊಳಕೆನಿಸುತ್ತದೆ. ದಯವಿಟ್ಟು ತಾಳ್ಮೆಯಿಂದಿರಿ ಮತ್ತು ನಾನು ಕೊಳಕನ್ನು ಸ್ವಚ್ಛಗೊಳಿಸಲು ಬಿಡಿರಿ. ಅದು ಸಂಪೂರ್ಣವಾಗಿ ಸ್ವಚ್ಛಗೊಂಡ ನಂತರ, ಅದನ್ನು ಜಾಗರೂಕವಾಗಿ ಪುನಃ ಸೇರಿಸಿ ಹೊಲಿಯುತ್ತೇನೆ.
ಅಂದ ಹಾಗೆ, ಈಗಿನ ಹೊಚ್ಚ ಹೊಸ ತಂತ್ರವಾದ ಲೇಜರ್ ಶಸ್ತ್ರ ಚಿಕಿತ್ಸೆಯನ್ನು ನನ್ನೊಂದಿಗೆ ತಂದಿದ್ದೇನೆ! ಒಂದು ವೇಳೆ ದುರ್ಮಾಂಸ ಬಹಳ ದೊಡ್ಡದಾಗಿದ್ದರೆ. ನಾನು ಕೊಯ್ದು ತೆರೆಯಬೇಕಾಗುತ್ತದೆ. ಆದರೆ ಕೆಲವೊಮ್ಮೆ ಕೊಯ್ಯುವ ಆಗತ್ಯವಿರುವುದಿಲ್ಲ. ಅದು ಹೆಚ್ಚು ದೊಡ್ಡದಲ್ಲದಿದ್ದರೆ, ಲೇಜರ್ ಚಿಕಿತ್ಸೆಯೇ ಕೆಲಸವನ್ನು ಸುಂದರವಾಗಿ ಮಾಡುತ್ತದೆ!
ನಿಮಗೆ ಕೊಳಕೆನಿಸಿದರೂ, ನಿಮಗೆ ಅಸಹ್ಯವಾದರೂ ಸಹ, ತಿಳಿಯಿರಿ, ದುರ್ಮಾಂಸವನ್ನು ತೆಗೆಯಲೇಬೇಕು ಹಾಗೂ ಅದರಲ್ಲಿರುವ ಕೀವು ನಿಮ್ಮ ದೇಹದಿಂದ ಆಚೆಗೆ ಹೋಗಲೇಬೇಕು. ನಿಮ್ಮಲ್ಲಿ ಸತತವಾಗಿ ಶಸ್ತ್ರ ಚಿಕಿತ್ಸೆಯೇ ನಡೆಯುತ್ತಲೇ ಇರುತ್ತಿದೆ. ಕೆಲವೊಮ್ಮೆ ನಾನು ನೇರವಾಗಿ ತೊಡಗಿರುವುದೂ ಇಲ್ಲ. ನಾನು ಹೇಳಬೇಕಾದುದು ಒಂದೇ, ನೀವು ಸಂಪೂರ್ಣವಾಗಿ ವಿಚಲಿತರಾಗುತ್ತೀರಿ!
ಶಸ್ತ್ರ ಚಿಕಿತ್ಸೆಯು ಎಷ್ಟೋ ರೀತಿಗಳಲ್ಲಿ ಕೆಲವೊಮ್ಮೆ ಪರೋಕ್ಷ ರೀತಿಗಳಲ್ಲೂ ಸಹ, ನಡೆಯುತ್ತದೆ. ಅದು ಹಾಗೆಯೇ ಆಗಲು ಸುಮ್ಮನೆ ಬಿಡಿರಿ ಮತ್ತು ನೀವು ಒಂದು ಹೊಸ ವ್ಯಕ್ತಿಯಾಗಿ ಅರಳುವುದನ್ನು ಗಮನಿಸಿ. ನೀವು' ಹೊಸ' ಹಾಗೂ 'ಸ್ವಚ್ಛ' ವಾದ ವ್ಯಕ್ತಿಯಾಗುವಿರಿ. ಸ್ವಚ್ಛತರಾಗುವಿರಿ. ನೀವು ನಿಮ್ಮ ಮನೆಗೆ ಹಿಂದಿರುಗಿದಾಗ, ನೀವು ಹೊಸದಾದ ಸ್ವಚ್ಛವಾದ ವ್ಯಕ್ತಿಯಾಗಿರುತ್ತೀರಿ ಏಕೆಂದರೆ ನಿಮ್ಮಲ್ಲಿ ದುರ್ಮಾಂಸ ಹಾಗೂ ಕೀವು ತೆಗೆಯಲ್ಪಟ್ಟಿರುತ್ತದೆ.
ಆದ್ದರಿಂದ ತಿಳಿಯಿರಿ ಶ್ರೀಕೃಷ್ಣನು, 'ನನ್ನ ಜೀವನವನ್ನು ತಿಳಿದರೆ, ನೀವು ವಿಮುಕ್ತರಾಗುತ್ತೀರಿ' ಎಂದು ಹೇಳಿದಾಗ, ಆ ಮಾತನ್ನಾಡಿರುವುದು ಆತನ ಅಹಂಕಾರದಿಂದಲ್ಲ . ಆತನು ಹೇಳುತ್ತಿರುವುದು ನಿಮ್ಮ ಮೇಲಿನ ಕರುಣಿಯಿಂದ.
ನಾನು ಜನರನ್ನು ಹೇಗೆ ಹರಸುತ್ತೇನೆಂದು ನನ್ನ ಸುತ್ತ ಮುತ್ತಲಿರುವ ಜನರಿಗೆ ಗೊತ್ತು . ನಾನು ಒಂದು ವೇಳೆ, ' ನಾನು ನಿಮ್ಮನ್ನು ಕಾಪಾಡುತ್ತೇನೆ' ಎಂದರೆ, ಅದು ಆಗಿಯೇ ಆಗುತ್ತದೆಂದು ನನ್ನ ಅರ್ಥ. ಒಂದು ವೇಳೆ ನಾನು, 'ನಾನು ನಿಮಗಾಗಿ ಧ್ಯಾನ ಮಾಡುತ್ತೇನೆ, ಆನಂದೇಶ್ವರ ದೇವನಲ್ಲಿ ದಯವಿಟ್ಟು ಪ್ರಾರ್ಥನೆ ಸಲ್ಲಿಸಿರಿ ಹಾಗೂ ಆಲದ ಮರದಡಿಯಲ್ಲಿ ಕುಳಿತು ಧ್ಯಾನ ಮಾಡಿರಿ' ಎಂದು ಹೇಳಿದರೆ, ಆದು ಕೇವಲ ಒಂದು ಸಮಾಧಾನದ ಮಾತು. ಜನರು ನನ್ನನ್ನು ಕೇಳುತ್ತಾರೆ, 'ಕೆಲವರಿಗೆ ನೀವೇ ನೋಡಿಕೊಳ್ಳುವವ ರಾಗಿಯೂ ಕೆಲವರಿಗೆ ಧ್ಯಾನ ಮಾಡುವುದಾಗಿಯೂ ಹೇಳುವಿರಲ್ಲ, ಅದು ಏಕೆ?' ಎಂದು. ಇದಕ್ಕೆ ನಾನು ಹೇಳುವುದೇನೆಂದರೆ, 'ನಾನು ನೋಡಿಕೊಳ್ಳುತ್ತೇನೆ' ಎಂದರೆ, ಅದನ್ನು ಸ್ವೀಕರಿಸಲು ಬೇಕಾದ ಸರಳತೆ ಅವರಲ್ಲಿ ರುವುದಿಲ್ಲ. ಆದ್ದರಿಂದ ಅವರಿಗೆ ಸ್ವಲ್ಪ ಕ್ಲಿಷ್ಟ ಮಾಡುತ್ತೇನೆ.
ಅನುಬಂಧ
ನೀನು ನಿಜವಾಗಿಯೂ ಯಾರು....
ಒಂದು ಸೊಗಸಾದ, ಸುಂದರವಾದ ಕಥೆ:
ಒಮ್ಮೆ ಒಬ್ಬ ಶಿಷ್ಯನು ಗಂಗಾನದಿಯಲ್ಲಿ ಬಿದ್ದು ಅವನ ಗುರುಗಳು ನದಿಯ ದಡದಲ್ಲಿ ಕುಳಿತಿದ್ದರು .ಅವರನ್ನು ನೋಡಿದ ಕೂಡಲೇ ಶಿಷ್ಯನು ಕೂಗಿಕೊಂಡನು 'ಕಾಪಾಡಿರಿ! ಕಾಪಾಡಿರಿ! ಓ ದೇವರೇ ಕಾಪಾಡರಿ! ಗುರುಗಳೇ ಕಾಪಾಡಿರಿ!ಎಂದು.
ಗುರುಗಳು ಉತ್ತರಿಸಿದರು, 'ಮೂಢ! ಎದ್ದು ನಿಲ್ಲು . ನಿನ್ನನ್ನು ನೀನೇ ಕಾಪಾಡಿಕೊ' ಎಂದು.
ಶಿಷ್ಯನು ಪುನಃ ಕೂಗಿಕೊಂಡನು, 'ನಿಮ್ಮ ವೇದಾಂತವನ್ನು ನಂತರ ಬೋಧಿಸುವಿರಂತೆ. ಮೊದಲು ನನ್ನ ಜೀವವು ಆಪತ್ತಿನಲ್ಲಿದೆ. ನಾನು ದಡಕ್ಕೆ ಬಂದ ನಂತರ, ನಿಮ್ಮ ವೇದಾಂತವನ್ನೆಲ್ಲಾ ಉಪದೇಶಿಸಿರಿ, ಈಗ ನನ್ನನ್ನು ಸುಮ್ಮನೆ ಕಾಪಾಡಿರಿ' ಎಂದು.
ಗುರುಗಳು ಅಲುಗಾಡಲಿಲ್ಲ. ಅವರು ಹೇಳಿದ್ದನ್ನೇ ಪುನರುಚ್ಚರಿಸಿದರು. 'ಮೂಢ, ನಿನ್ನನ್ನು ನೀನೇ ಕಾಪಾಡಿಕೋ! ಎದ್ದು ನಿಲ್ಲು ', ಎಂದು.
ಶಿಷ್ಯನು ಮೊರೆಯಿಟ್ಟನು. 'ನೀವು ನನ್ನ ಗುರುವಲ್ಲವೇ? ನನ್ನನ್ನು ಕಾಪಾಡಿರಿ' ಶಿಷ್ಯನು ಹೀಗೆಯೇ ಕೂಗಿಕೊಳ್ಳುತ್ತಿರಲು, ಗುರುಗಳು ಬೇಸತ್ತು ಗಡುಸಾದ ಧ್ವನಿಯಲ್ಲಿ ಹೇಳಿದರು, 'ಮೂರ್ಖ, ಎದ್ದು ನಿಲ್ಲು'!ಎಂದು.
ಶಿಷ್ಯನು ಹೆದರಿ, ಎದ್ದು ನಿಂತ.... ನೀರು ಅವನ ಸೊಂಟಮಟ್ಟ ಮಾತ್ರ ಇರುವುದನ್ನು ಕಂಡ!
ಸಿಂಹ ಹಾಗೂ ಮರಿಯ ಕಥೆ
ತಿಳಿಯಿರಿ, ನೀವು ಕಷ್ಟಪಡುತ್ತಿರುವುದು 'ನೀರಿನಲ್ಲಿ ಬಿದ್ದಿರುವುದಕ್ಕಾಗಿ' ಆದರೆ, ನೀರು ಕೇವಲ ನಿಮ್ಮ ಹಣೆಬರಹ ಎಂದು ಗೊತ್ತಿಲ್ಲ. ನೀವು ಎದ್ದು ನಿಂತಾಗ ಮಾತ್ರವೇ ನೀರು ಸೊಂಟಮಟ್ಟ ಇರುವುದೆಂದು ತಿಳಿಯುವಿರಿ. ನಾನು, 'ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ' ಎಂದು ಹೇಳಿದಾಗ, ನಿಮಗೆ ನಾನು ಎದ್ದು ನಿಲ್ಲಲು ಒಂದು ಊರೆಗೋಲನ್ನು ಕೊಟ್ಟು ಕಾಪಾಡುತ್ತೇನೆ. ' ನಾನು ನಿಮ್ಮನ್ನು ಕಾಪಾಡುತ್ತೇನೆ' ಎಂದು ಗುರುಗಳು ಹೇಳಿದಾಗ, ನೀವದನ್ನು ಅನುಮಾನಿಸಿದರೆ, ಆಗ ಸಂಬಂಧವು ಆಕ್ಷಣವೇ ಅಲ್ಲಿಯೇ ಕಡಿದು ಹೋಗುತ್ತದೆ.
ಒಮ್ಮೆ ಒಬ್ಬರು ನನ್ನನ್ನು ಕೇಳಿದರು, 'ಗುರುಗಳೇ, ನಾವು 'THE SUPREME PONTIFF OF HINDUISM BHAGAWAN SRI NITHYANANDA PARAMASHIVAM' ಎಂಬ ನಿಮ್ಮ ಹೆಸರನ್ನು ಹಾಡಿ ಆನಂದ ಪಡುತ್ತೇವೆ. ನಮಗದು ತಿಳಿಯುತ್ತದೆ. ಆದರೆ ನೀವೂ ಸಹ ನಿಮ್ಮ ಹೆಸರನ್ನು ನಮ್ಮೊಂದಿಗೆ ಹಾಡಿ, ಕುಣಿದು, ಆನಂದಿಸುವಿರಲ್ಲ , ಅದು ಹೇಗೆ?' ಎಂದು.
ಇದೇ ಪ್ರಶ್ನೆಯನ್ನು ರಮಣ ಮಹರ್ಷಿಗಳಿಗೆ ಕೇಳಲಾಗಿತ್ತು. ಒಬ್ಬರು ಅವರ ಬಳಿ ಹೋಗಿ, ಕೇಳಿದರು, 'ಭಗವಾನ್, ಇದೇನು? ನಾವು ರಮಣ ಸದ್ಗುರು, ರಮಣ ಸದ್ಗುರು ಎಂದು ಜಪಿಸುತ್ತೇವೆ. ಆದರೆ ನೀವೂ ಸಹ ಅದೇ ಮಂತ್ರವನ್ನು ಜಪಿಸುವಿರಲ್ಲಾ, ನೀವು ಹೀಗೇಕೆ ಮಾಡುವಿರಿ? ಎಂದು. ಅಷ್ಟೇ ಅಲ್ಲದೆ, ರಮಣರು ತಮ್ಮ ಮೇಲೆಯೇ ದೊಡ್ಡದಾದ ಹಾಗೂ ಒಂದು ಸುಂದರವಾದ ಪದ್ಯವನ್ನೂ ಬರೆದಿದ್ದರು!
ರಮಣರ ಮಹಿಮೆಯನ್ನು ಕುರಿತ 'ರಮಣ ಪುರಾಣ'ವನ್ನು ಅವರ ಶಿಷ್ಯರೊಬ್ಬರು ಬರೆಯುತ್ತಿದ್ದರು. ಆದರೆ ಅವರಿಗೆ 'ಬರಹಗಾರರ ತಡೆ' ಉಂಟಾಯಿತು. ನೀವು ಅಹಂಕಾರದಿಂದ ಏನನ್ನಾದರೂ ಬರೆದರೆ, ನಿಮ್ಮಲ್ಲಿ 'ಬರಹಗಾರರ ತಡೆ' ಉಂಟಾಗುತ್ತದೆ. ಆ ಶಿಷ್ಯರು ಭಗವಾನರ ಬಳಿ ಬಂದು 'ಭಗವಾನ್, ನನಗೆ ಈ ಬರವಣೆಗೆಯನ್ನು ಮುಂದುವರಿಸಲಾಗುತ್ತಿಲ್ಲ. ನನಗೆ ಸಹಾಯ ಮಾಡಿರಿ' ಎಂದು ಕೇಳಿದರು. 'ಆ ಕಾಗದವನ್ನು ಅಲ್ಲಿಯೇ ಇಟ್ಟು ಹೋಗು. ನಾನು ನಿನ್ನೊಡನೆ ನಂತರ ಮಾತನಾಡುವೆ' ಎಂದು.
ಆ ಶಿಷ್ಯನು ಕಾಗದವನ್ನು ಅಲ್ಲಿಯೇ ಇಟ್ಟು ಹೋದನು. ಮಾರನೆಯ ದಿನ, ಆತ ಬಂದಾಗ, ಆ ಪದ್ಯವು ಪೂರ್ತಿಯಾಗಿ ಮುಗಿದಿತ್ತು! ರಮಣ ಮಹರ್ಷಿಗಳು 300 ಪಂಕ್ತಿಗಳನ್ನು ತಾವೇ ಬರೆದಿದ್ದರು. ಪುಸ್ತಕವು ಮುದ್ರಣವಾದಾಗ, ಬರಹಗಾರರು 'ಈ 300 ಪಂಕ್ತಿಗಳನ್ನು ಭಗವಾನರೇ ಬರೆದಿದ್ದಾರೆ' ಎಂದು ಉದ್ದರಣ ಚಿಹ್ನೆಗಳಲ್ಲಿ ಉಲ್ಲೇಖಿಸಿ, ಅಡಿ ಟಿಪ್ಪಣಿ ಬರೆದಿದ್ದನು.
ಭಗವಾನರು ಪುಸ್ತಕವನ್ನು ನೋಡಿಕೇಳಿದರು. 'ಓ! ಹಾಗಿದ್ದರೆ, ಉಳಿದ ಪಂಕ್ತಿಗಳು ನಿನ್ನಿಂದ ಬರೆಯಲ್ಪಟ್ಟಿವೆಯಾ ? ಅವರ ಈ ಒಂದು ಟೀಕೆಯೇ ಶಿಷ್ಯನಿಗೆ ಜ್ಞಾನೋದಯವಾಗಲು ಸಾಕಾಯಿತು.
ಮುರುಗನಾರ್ ಎಂಬ ಆ ಶಿಷ್ಯರು ಭಗವಾನರು ದೇಹದಲ್ಲಿ ಇದ್ದಾಗಲೇ ಜ್ಞಾನೋದಯ ಹೊಂದಿದ ನಾಲ್ಕು ಶಿಷ್ಯರಲ್ಲಿ ಒಬ್ಬರು. ರಮಣರ ಮೇಲೆ ಅವರು ಬರೆದ 16000 ಶ್ಲೋಕಗಳು 25 ಸಂಪುಟಗಳಲ್ಲಿ ಪ್ರಕಟವಾದವು.
ಮುರುಗನಾರ್ರವರು ತಮ್ಮ ಆತ್ಮ ಕಥೆಯಲ್ಲಿ ಈ ರೀತಿ ಬರೆದಿದ್ದಾರೆ. ನನ್ನಲ್ಲಿ ಒಂದೇ ಒಂದು ಇಷ್ಟ ಅದೇನೆಂದರೆ, ನಾನೊಬ್ಬ ಸಂಗೀತಗಾರ ಹಾಗೂ ಕವಿ ಎಂದು. ಮಿಕ್ಕೆಲ್ಲಾ ಅಹಂಕಾರಗಳೂ ನನ್ನಿಂದ ದೂರವಾಗಿದ್ದವು. ಅದೊಂದೇ ಸಂಸ್ಕಾರವು ಅಥವಾ ಸೂಕ್ಷ್ಮವಾದ ವಾಸನೆಯು, ನನ್ನಲ್ಲಿ ಅಡಗಿದ್ದಿತು. ಆ ವಾಸನೆಯು ನನ್ನಲ್ಲಿ ಇದೆ ಎಂದೂ ಸಹ ನನಗೆ ತಿಳಿದಿರಲಿಲ್ಲ' ಎಂದು.
ಒಂದು ದೊಡ್ಡ ಸಮಸ್ಯೆಯೆಂದರೆ, ಒಂದು ಸಂಸ್ಕಾರವು ನಿಮ್ಮಲ್ಲಿ ಅದು ಇದೆ ಎಂದು ತಿಳಿಯಲೂ ಅದು ಬಿಡುವುದಿಲ್ಲ. ಅದು ತನ್ನ ಅಸ್ಥಿತ್ವದ ಪ್ರಜ್ಞೆಯಾದ್ದರಿಂದ ತನ್ನನ್ನೇ ತಾನು ಸಮರ್ಥಿಸಿಕೊಳ್ಳುತ್ತದೆ. ಆದ್ದರಿಂದಲೇ ನಾನು ಜನರಿಗೆ ಯಾವಾಗಲೂ ಹೇಳುವುದು', ನೀವು ವಾಸನೆಯಲ್ಲಿ ಸಿಲುಕಿದಾಗ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ' ಎಂದು ಗುರುಗಳ ಸನ್ನಿಧಾನದಲ್ಲಿದ್ದು ಬಿಡಿ. ಇದನ್ನು ಕಳೆದುಕೊಳ್ಳದಿರಿ. ಇದೊಂದು
ಸಿಂಹ ಹಾಗೂ ಮರಿಯ ಕಥೆ
ಅದ್ಭುತವಾದ ಅವಕಾಶ, ನೀವು ಸಂಪೂರ್ಣವಾಗಿ ಉಪಶಮನ ಹೊಂದುವಿರಿ ಹಾಗೂ ಆ ವಾಸನೆಯಿಂದ ಹೊರಬರುವಿರಿ. ನೀವು ವಾಸನೆಯ ಹಿಡಿತದಲ್ಲಿ ಇದ್ದಾಗ, ಎಂದೂ ಸಹ ಗುರುಗಳಿಂದ ತಪ್ಪಿಸಿಕೊಂಡು ಹೋಗದಿರಿ.
ಯಾರಾದರೂ ಖಿನ್ನರಾಗಿ ನನ್ನನ್ನು ಬಿಟ್ಟು ಹೋದರೆ, ನಾನು ಅವರಿಗಾಗಿ ಬಹಳಷ್ಟು ಮರುಗುತ್ತೇನೆ. ನಮ್ಮ ಸಂಸ್ಥೆಯಲ್ಲಿ ಒಬ್ಬರು ಕಡಿಮೆಯಾದರಲ್ಲಾ ಎಂಬ ಕಾರಣದಿಂದಲ್ಲ! ಅಲ್ಲ! ವಾಸ್ತವಿಕವಾಗಿ ಹೇಳುವುದಾದರೆ, ಒಬ್ಬರು ಕಡಿಮೆಯಾದರೆ, ನನಗೆ ಅಷ್ಟು ಸಮಸ್ಯೆಯು ಕಡಿಮೆಯಾಗುತ್ತದೆ. ಆದರೆ ಅದೇ ಸಂತೋಷವಾಗಿ ನನ್ನಿಂದ ದೂರ ಸರಿದರೆ, ಅದು ಸರಿ. ಅದು ನಿಖರವಾಗಿ ಸರಿಯಾಗಿರುತ್ತದೆ. ಅದು ಚೆನ್ನಾಗಿರುತ್ತದೆ. ಅದು ಒಂದು ಸಹಜವಾದ ಸಂಬಂಧವಾಗುತ್ತದೆ. ಅವನು ಹೋದಲ್ಲೆಲ್ಲಾ ನೆನಪ ನೆನೆಯುತ್ತಿರುತ್ತಾನೆ. ಆದರೆ, ಅವನು ವಿಷಣ್ಣನಾದಾಗ, ಅವನು ಬೆಳೆಯದೇ ಇರುವುದಲ್ಲದೆ, ಎಂದಿಗೂ ಆ ವಾಸನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಅವನಲ್ಲಿ ಅದೊಂದು ದೊಡ್ಡ ಗಾಯವಾಗಿ ಉಳಿದು ಬಿಡುತ್ತದೆ. ಒಂದು ಬೆಕ್ಕು ಬಿಸಿಹಾಲನ್ನು ಕುಡಿದು, ಬಾಯಿ ಸುಟ್ಟುಕೊಂಡು, ಹಾಲಿನ ಬಳಿ ಎಂದೂ ಹೋಗದಂತೆ.
ನಾನು ಯಾವಾಗಲೂ ಜನರಿಗೆ ಹೇಳುತ್ತೇನೆ. 'ನೀವು ಖಿನ್ನರಾದಾಗ, ನನ್ನನ್ನು ಬಿಟ್ಟು ಹೋಗಬೇಡಿರಿ. ನನ್ನೊಡನಿರಲು ಅದೇ ಸರಿಯಾದ ಸಮಯ ? ಅಂತಹ ಸಮಯದಲ್ಲಿ ನನ್ನಿಂದ ದೂರಸರಿಯುವುದು ಹೇಗೆಂದರೆ, ನೀವು ರೋಗಗ್ರಸ್ತರಾದಾಗ, ಆಸ್ಪತ್ರೆಯಲ್ಲಿ ಇರಲು ಇಷ್ಟ ಪಡದಂತೆ. ಆಸ್ಪತ್ರೆಯಲ್ಲಿ ಇರಲು ಅದೇ ಸರಿಯಾದ ಸಮಯ. ನೀವು ವಿಷಣ್ಣರಾಗಿ, ವಾಸನೆಗಳಿಂದ ಹಿಡಿಯಲ್ಪಟ್ಟಿದ್ದಾಗ, ನೀವು ಆಸ್ಪತ್ರೆಯಲ್ಲಿ ಇರಬೇಕು.
ಮುರುಗನಾರ್ರವರು ತಮ್ಮ ಆತ್ಮ ಕಥೆಯಲ್ಲಿ ತಮ್ಮಲ್ಲಿ ಒಂದೇ ಒಂದು ವಾಸನೆ ಇದಿತ್ತೆಂದು ಬರೆದಿದ್ದಾರೆ. ಯಾವಾಗ ಭಗವಾನರು, 'ಓ! ಉಳಿದ ಪಂಕ್ತಿಗಳು ನಿನ್ನಿಂದ ಬರೆಯಲ್ಪಟ್ಟಿವೆಯಾ?' ಎಂದು ಕೇಳಿದಾಗ ನನ್ನೊಳಗೇನೋ ಒಂದು ಮುರಿದು ಬಿದ್ದಿತು. ಏನೋ ಒಡೆದಂತೆ ಆಯಿತು. ಕಣ್ಣೇರು ಧಾರೆಯಾಗಿ ಬರಲು, ನಾನು ಭಗವಾನರ ಪಾದಗಳ ಮೇಲೆ ಬಿದ್ದೆ! ನಾನು ಮತ್ತೆ ಮೇಲೇಳಲೇ ಇಲ್ಲ! ಎಂದು ಬರೆದಿದ್ದಾರೆ.
ಭಗವಾನರು ತಮ್ಮ ಹೆಸರಿದ್ದ ಹಾಡನ್ನು ಹಾಡುತ್ತಿದ್ದರು. ಒಬ್ಬರು ಭಗವಾನರನ್ನು ಕೇಳಿದರು, 'ನಿಮ್ಮ ಹೆಸರನ್ನೇ ನೀವು ಏಕೆ ಹಾಡುತ್ತೀರಿ?' ಎಂದು.
ಭಗವಾನರು ಉತ್ತರಿಸಿದರು, 'ನೀವೇಕೆ ರಮಣ ಎಂಬ ಹೆಸರನ್ನು ಈ ಆರಡಿ ದೇಹಕ್ಕೆ ಕುಗ್ಗಿಸುತ್ತಿದ್ದೀರಿ? ರಮಣ ಎಂಬುದು ಈ ದೇಹವನ್ನು ಬಳಸಿಕೊಳ್ಳುತ್ತಿರುವ ಶಕ್ತಿ, ಈ ದೇಹವಲ್ಲ. ಆದ್ದರಿಂದ, ನೀವು ಈ ದೇಹವನ್ನು ಬಳಸಿ ಆನಂದಿಸುವಂತೆ ನಾನೂ ಆನಂದಿಸುತ್ತೇನೆ' ಎಂದು.
ಅದೇ ರೀತಿ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಈ ದೇಹವಲ್ಲ - THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಎಂಬುದು ಈ ದೇಹವನ್ನು ಬಳಸಿಕೊಳ್ಳುತ್ತಿರುವ ಶಕ್ತಿ, ಈ ಕಾರಣದಿಂದಲೇ ನಾನು ಜನರಿಗೆ ಹೇಳುವುದು. ನಾನು ಹಾಡುವುದೊಂದೇ ಅಲ್ಲ, ನನ್ನ ಭಾವಚಿತ್ರಗಳನ್ನು ನೋಡುವ ಮೊದಲ ವ್ಯಕ್ತಿ ನಾನಾಗಿರುತ್ತೇನೆ! ನನ್ನ ಭಾವಚಿತ್ರಗಳ ಸಂಪುಟವನ್ನು ನನಗೆ ತೋರಿಸಿದಾಗ, ಮುಂದಿನ ಎರಡು ದಿನಗಳು ಆ ಸಂಪುಟವು ನನ್ನ ಹಾಸಿಗೆಯ ಮೇಲಿರುತ್ತದೆ. ನಾನು ಕುಳಿತು, ಸಂಪುಟದಲ್ಲಿರುವ ಎಲ್ಲಾ ಭಾವಚಿತ್ರಗಳನ್ನೂ ನೋಡಿ ಆನಂದಿಸುತ್ತೇನೆ. ಎರಡು ದಿನಗಳ ಬಳಿಕವೇ ನಾನು ಆ ಸಂಪುಟವನ್ನು ಪ್ರಾಚೀನ ಪತ್ರಾಗಾರಕ್ಕೆ ಕಳುಹಿಸುವುದು.
ಕೆಲವೊಮ್ಮೆ ಜನರು ನನ್ನನ್ನು ಕೇಳುತ್ತಾರೆ. 'ಇದೇನು ಗುರುಗಳೇ, ನಿಮ್ಮ ಭಾವಚಿತ್ರಗಳನ್ನು ನೋಡಿ ಇಷ್ಟೊಂದು ಸಂತೋಷ ಪಡುತ್ತೀರಿ?' ಎಂದು. ನನಗೇ ನಾನು ಭಾಸದಿರುವುದರಿಂದ ನಾನು ಹಾಗೆ ಮಾಡಲು ಸಾಧ್ಯ.
ನಾನು ಈ ದೇಹವೆಂಬ ಭಾವನೆಯು ನನಗಿಲ್ಲ. ನನಗೆ ಆ ಭಾವನೆ ಇದ್ದಿದ್ದರೆ, ಆ ಚಿತ್ರಗಳನ್ನು ನೋಡಿ ಆನಂದ ಪಡಲಾಗುತ್ತಿರಲಿಲ್ಲ. ನಾನು ಈ ದೇಹವೆಂದು ನನಗಿಸುವುದೇ ಇಲ್ಲ. ನೀವು ನನ್ನ ಆಕೃತಿಯನ್ನು ನೋಡಿ ಆನಂದಿಸುವಂತೆ ನಾನೂ ಸಹ ಆನಂದಿಸಬಹುದಾದರೆ, ನಾನು ಏಕೆ ಕೂಡದು?
ಹಾಗೆಯೇ ನಾನು 'ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ' ಎಂದಾಗ ಹಾಗೆ ಹೇಳುವುದು ನನ್ನ ಅಹಂಕಾರದಿಂದಲ್ಲ ನೀವು ಸ್ವಪ್ರತಿಷ್ಠೆಯಿಂದ ಜೀವನ ಮಾಡುವುದರಿಂದ, ನಾನೂ ಸಹ ಅಹಂಕಾರದಿಂದ ಹೇಳುತ್ತಿದ್ದೇನೆಂದು ತಿಳಿದುಕೊಳ್ಳುವಿರಿ. ಆದ್ದರಿಂದಲೇ, ನಾನು ಜನರಿಗೆ ಯಾವಾಗಲೂ ಹೇಳುವುದು ' ನಾನು ದೇವರು' ಎಂದಾಗ, ಅದು ನನಗೊಂದು ಸತ್ಯ ವಾದ ಅನುಭವ
ಆದರೆ ನಾನು 'ನಾನು' ಎಂದಾಗ ಅದೊಂದು ಖಾಲಿ ಪದ. ನಿಮ್ಮ ವಿಚಾರದಲ್ಲಿ, ನೀವು' ದೇವರು' ಎಂದಾಗ, ನಿಮಗೆ ಅದೊಂದು ಖಾಲಿ ಪದವಾಗುತ್ತದೆ. ನೀವು 'ನಾನು' ಎಂದಾಗ, ನಿಮಗೆ ಅದೊಂದು ಪ್ರಬಲವಾದ ಅನುಭವವಾಗಿರುತ್ತದೆ. ನೀವು ದೇವರ ಬಗ್ಗೆ ಏನು ತಿಳಿದುಕೊಂಡಿರುವಿರಿ ಎಂದುಕೊಳ್ಳುವಿರೋ ಅದು ದೇವರ ಬಗೆಗಿನ ನಿಮ್ಮ ಭಾವನೆ ಮಾತ್ರ. ನೀವು ತಿಳಿದುಕೊಂಡಿರುವುದು ದೇವರನ್ನೇ ಅಲ್ಲ. ಸರಿಯಾಗಿ ತಿಳಿಯಿರಿ, ನೀವು 'ದೇವರು' ಎಂದಾಗ ಅದೊಂದು ಟೊಳ್ಳು ಪದವಾಗಿರುತ್ತದೆ. ನೀವು' ನಾನು' ಎಂದಾಗ ಮಾತ್ರ ಅದು ಗಟ್ಟಿಯಾದ ಅನುಭವವಾಗಿರುತ್ತದೆ. ಅದೇ ರೀತಿ, ನಾನು 'ದೇವರು' ಎಂದಾಗ, ಅದು ನನಗೆ ಗಟ್ಟಿಯಾದ ಅನುಭವವಾಗಿರುತ್ತದೆ. ನಾನು' ಎಂದಾಗ, ಅದೊಂದು ಟೊಳ್ಳುಪದವಷ್ಟೇ.
ನೀವು 'ಭಗವಂತ'ಎಂದಾಗ, ನಿಮ್ಮ ಅಹಂಕಾರವು ಪ್ರತಿಬಂಬಿತವಾಗಿರುತ್ತದೆ. ನೀವು ಏನನ್ನು ದೇವರೆಂದು ಭಾವಿಸಿರುತ್ತಿರೋ, ಅದು ನಿಮ್ಮ ಅಹಂಕಾರವಲ್ಲದೆ ಮತ್ತೇನೂ ಅಲ್ಲ. ಆದ್ದರಿಂದಲೇ ಒಬ್ಬ ಬಡವನು ಯಾವಾಗಲೂ ಸಂಪತ್ತಿನ ದೇವತೆಯಾದ ಲಕ್ಷ್ಮಿಗೆ ಆಕರ್ಷಿತನಾಗುತ್ತಾನೆ. ಅವನಿಗೆ ಏನಿಲ್ಲವೋ ಅದನ್ನು ಕಲ್ಪಿಸಿಕೊಂಡು ತೃಪ್ತಿ ಪಡುತ್ತಾನೆ. ಅವನಿಗೆ ಹಣವಿಲ್ಲದ ಕಾರಣ, ಅವನು ಯಾವಾಗಲೂ ಲಕ್ಷ್ಮಿಯ ಬಗ್ಗೆ ಚಿಂತಿಸುತ್ತಾನೆ. ಅದೇ ರೀತಿ, ಮಂದಮತಿಯಾದವನು ವಿದ್ಯಾದೇವತೆಯಾದ ಸರಸ್ವತಿಗೆ ಆಕರ್ಷಿತನಾಗುತ್ತಾನೆ. ಏಕೆಂದರೆ ಅವನಿಗೆ ಬೇಕಾಗಿರುವುದು ಜ್ಞಾನ. ಯಾವನಲ್ಲಿ ಆತ್ಮವಿಶ್ವಾಸ ಇರುವುದಿಲ್ಲವೋ ಅವನು ಕಾಳೀದೇವಿಗೆ ಆಕರ್ಷಿತನಾಗುತ್ತಾನೆ. ಏಕೆಂದರೆ ಅವನು ತೃಪ್ತನಾಗಲು, ಅವನಿಗೆ ಆಕೆಯಿಂದ ಧೈರ್ಯದ ಅವಶ್ಯಕತೆ ಇರುತ್ತದೆ. ಈ ರೀತಿ, ನಿಮಗೇನಿಲ್ಲವೋ ಅದನ್ನು ಪೊರೈಸಿಕೊಳ್ಳಲು ನೀವು ಪ್ರಯತ್ನಿಸುವಿರಿ.
ಸ್ಪಷ್ಟವಾಗಿ ತಿಳಿಯಿರಿ, ನಿಮ್ಮ ದೇವ ದೇವತೆಗಳೂ ಸಹ ನಿಮ್ಮ ಅಹಂಕಾರದ ಪ್ರಕ್ಷೇಪಣೆ. ಆದ್ದರಿಂದಲೇ ನೀವು 'ಭಗವಂತ' ಎಂದಾಗ, ಆದು ನಿಮ್ಮ ಅಹಂಕಾರವೇ ಆಗಿರುತ್ತದೆ. ನನ್ನ ವಿಷಯದಲ್ಲಿ ನಾನು ನಾನು' ಎಂದಾಗ, ಅದು ದೇವರ ಪ್ರಕ್ಷೇಪಣೆಯೇ ಆದ್ದರಿಂದ, ನಾನು 'ನಾನು'ಎಂದಾಗ ಆದು ದೈವೀಶಕ್ತಿಯೇ ಆಗಿರುತ್ತದೆ. ಆದ್ದರಿಂದ ನಾನು 'ನಾನು' ಎಂದಾಗಲೆಲ್ಲಾ ತಿಳಿಯಿರಿ, ಅದು ನನ್ನ ಆರಡಿ ದೇಹವನ್ನು ಕುರಿತದ್ದಾಗಿರುವುದಿಲ್ಲ, ಆದರೆ ಅದರ ಹಿಂದಿರುವ ಶಕ್ತಿಯನ್ನು ಕುರಿತದ್ದಾಗಿರುತ್ತದೆ.
ಶ್ರೀಕೃಷ್ಣನು 'ನನ್ನ ಜೀವನವನ್ನು ತಿಳಿಯಿರಿ ಮತ್ತು ಅದರಿಂದ ಮುಕ್ತಿಯನ್ನು ಪಡೆಯಿರಿ' ಎಂದು ಹೇಳುವುದು ಇದೇ ಅರ್ಥದಲ್ಲಿ.
ಈಗ ನನ್ನ ಜೀವನವನ್ನು ತಿಳಿದು, ವಿಮುಕ್ತರಾಗಿರಿ, ನಿಮಗೆಲ್ಲಾ ನನ್ನ ಜೀವನವು ತಿಳಿಯುವಂತಾಗಲಿ ಹಾಗೂ ನೀವು ಅದರಿಂದ ಮುಕ್ತರಾಗುವಂತಾಗಲಿ. ನಿಮಗೆ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ತಿಳಿಯುವಂತಾಗಲಿ, ನಿಮಗೆ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಜೀವನ ತಿಳಿಯುವಂತಾಗಲಿ ಹಾಗೂ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ಜೀವನವನ್ನು ಬಾಳುವಂತಾಗಲಿ – ನಿತ್ಯಾನಂದ ಎಂದರೆ ನಿರಂತರವಾದ ಮಹದಾನಂದ.
ಈ ಇಡೀ ಅನುಭವವು ನಿಮ್ಮಲ್ಲಿ ಪರಿವರ್ತನೆಯನ್ನುಂಟುಮಾಡಲಿ ಹಾಗೂ ನಿಮಗೆ ವಿಶೇಷವಾದ ದೈವಾನುಗ್ರಹವಾಗಲಿ, ನೀವು ಗುರುಗಳೊಡನೆ ಸಂಬಂಧಿಸುವಂತಾಗಲಿ, ನಿಮ್ಮ ಆತ್ಮ ಪರಿವರ್ತಿಸಲಿ, ನೀವು ನಿರಂತರವಾದ ಮಹದಾನಂದ ನಿತ್ಯಾನಂದವನ್ನು ಪಡೆದು ಪ್ರಸರಿಸುವಂತಾಗಲಿ.
ಧನ್ಯವಾದಗಳು.