KAILASA Library/ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation/ಒಂದು ಸಣ್ಣಕತೆ:Sign in
ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation

ಒಂದು ಸಣ್ಣಕತೆ:

ಕನ್ನಾರ್ ಕುಲ್‌ಜೀತ್ ಎಂಬುವನು ತನ್ನ ಮನೆಯ ಮುಂದಿನ ಅಂಗಳದಲ್ಲಿ ಏನನ್ನೋ ಬಹಳ ಕಷ್ಟಪಟ್ಟು ಹುಡುಕುತ್ತಾ ಇದ್ದ. ಅವನ ಹೆಂಡತಿ ಪ್ರಶ್ನಿಸಿದ್ದಕ್ಕೆ ಅವನು ಹೇಳಾನೆ, ನಾನು ಒಂದು ಚಿನ್ನದ ನಾಣ್ಯವನ್ನು ಕಳೆದುಕೊಂಡು ಬಿಟ್ಟಿದ್ದೀನಿ ಅಂತ. ಅವನ ಹೆಂಡತಿಯೂ ಹುಡುಕುವುದಕ್ಕೆ ನೆರವಾದಳು. ಕೂಡಲೇ ಬೇರೆಯವರೂ ಬಂದು ಸೇರಿದರು. ಹೆಚ್ಚುಕಡಿಮೆ ಅಕ್ಕಪಕ್ಕದಲ್ಲಿದ್ದವರೆಲ್ಲಾ ಕಳೆದ ಆ ನಾಣ್ಯವನ್ನು ಹುಡುಕುತ್ತಾ ಇದ್ದರು. (ಅಷ್ಟರಲ್ಲಿ) ಇದ್ದಕ್ಕಿದ್ದಂತೆ ಒಬ್ಬ ಯುವಕ ಆ ಕುಲ್‌ಜೀತ್‌ನನ್ನು ಕೇಳಿದ, - ಸರಿಯಾಗಿ ಯಾವ ಜಾಗದಲ್ಲಿ ಅದನ್ನು ಕಳೆದುಕೊಂಡಿದ್ದು? ಇಷ್ಟು ಹುಡುಕಿದರೂ ಸಿಕ್ಕುತ್ತಾ ಇಲ್ವಲ್ಲಾ?

ಕುಲ್‌ಜೀತ್ ಹೇಳಾನೆ, ''ಓ ಅದೇ, ಆ ನಾಣ್ಯವನ್ನು ನಾನು ಮನೆಯ ಒಳಗೆ ಕಳೆದುಕೊಂಡೆ''.

ಆಶ್ಚರ್ಯದಿಂದ ಆ ಯುವಕ ಹೇಳಾನೆ, ಹಾಗಾದರೆ ಇಲ್ಲಿ (ಹೊರಗಡೆ) ಏಕೆ ಹುಡುಕುತ್ತಿದ್ದೀಯೆ? (ಆಗ.) ಕುಲ್ ಜೀತ್ ಹೇಳ್ತಾನೆ - ಸಮಸ್ಯೆ ಏನಂದ್ರೆ, ಮನೆ ಒಳಗೆ ಬೆಳಕೇ ಇಲ್ಲ. ಇಲ್ಲಿ ಹೊರಗಡೆ ಆದ್ರೆ ಬೀದಿದೀಪವಾದರೂ ಇದೆ. ಆ ಬೆಳಕಿನಲ್ಲಿ ನಾವು ಹುಡುಕಬಹುದಲ್ಲಾ.