KAILASA Library/ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation/ಧ್ಯಾನವನ್ನು ಹೇಗೆ ಆಸ್ಪಾದಿಸುವುದು (ಆನಂದಿಸುವುದು) ಸಮಯ ಮಾಡಿಕೊಳ್ಳಿSign in
ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation

ಧ್ಯಾನವನ್ನು ಹೇಗೆ ಆಸ್ಪಾದಿಸುವುದು (ಆನಂದಿಸುವುದು) ಸಮಯ ಮಾಡಿಕೊಳ್ಳಿ

ಪ್ರತಿದಿನ ಅರ್ಧಗಂಟೆ ಖಚಿತವಾಗಿ ಧ್ಯಾನಕ್ಕಾಗಿ ಸಮಯವನ್ನು ಮೀಸಲಿಡಿ. ನೀವು ಯಾವಾಗ ಎಲ್ಲಿ ಬೇಕಾದರೂ ಮಾಡುವ ಧ್ಯಾನವನ್ನು ಅಭ್ಯಾಸ ಮಾಡಲು ಯೋಚಿಸಿದ್ದರೂ ಸಹ ಅರ್ಧ ಗಂಟೆಯ ಕುಳಿತು ಮಾಡುವ ಧ್ಯಾನವನ್ನೂ ಸಹ ಸೇರಿಸಿಕೊಳ್ಳಿ. ಪ್ರಾರಂಭದಲ್ಲಿ ನೀವು ಶಿಸ್ತನ್ನು ನಿಮ್ಮ ಧ್ಯಾನದಲ್ಲಿ ಪಾಲಿಸಬೇಕು ಮತ್ತು ನೀವು ಪ್ರಜ್ಞಾಪೂರ್ವಕ ಅಭ್ಯಾಸ ಮಾಡಬೇಕು. ಅದಕ್ಕಾಗಿ ಒಳ್ಳೆಯ ವಾತಾವರಣವನ್ನು ಕಲ್ಪಿಸಿ ಧ್ಯಾನಾಭ್ಯಾಸಕ್ಕಾಗಿ ಸ್ಥಳವನ್ನು ಮಾಡಿಕೊಳ್ಳಿ. ಆ ಸಮಯದಲ್ಲಿ ನಿಮಗೆ ಅಡಚಣೆಗಳು ಬಾರದಂತೆ ನೋಡಿಕೊಳ್ಳಿ. ಯಾವ ಕಾರ್ಯಕ್ರಮಗಳಿಗೂ ಒಪ್ಪಿಕೊಳ್ಳಬೇಡಿ. ನಿಮ್ಮ ಕುಟುಂಬದವರು, ಸ್ನೇಹಿತರು ಆ ಸಮಯವೆಂದೂ ಅವರಿಗೆ ತಿಳಿಯಪಡಿಸಿರಿ. ಪ್ರತಿದಿನ ಒಂದೇ ಸಮಯದಲ್ಲಿ ಮಾಡುವುದು ಯೋಗ್ಯವಾದದ್ದು. ಹಾಗೆ ಮಾಡಿದರೆ ಶರೀರ ಮತ್ತು ಮನಸುಗಳು ಅದಕ್ಕೆ ಬಹುಬೇಗ ರೂಢಿಸಿಕೊಂಡು ಬಿಡುತ್ತದೆ. ಪ್ರತಿದಿನ ಒಂದೇ ಸಮಯಕ್ಕೆ ನೀವು ಅಭ್ಯಾಸ ಮಾಡುವುದಾದರೆ ಆ ಸಮಯದಲ್ಲಿ ನೀವು ಧ್ಯಾನದ ಸ್ಥಿತಿಗೆ ಬೇಗ ಮತ್ತು ಸುಲಭವಾಗಿ ತಲುಪಿಬಿಡಬಹುದು.

ಸ್ಥಳವನ್ನು ಮಾಡಿಕೊಳ್ಳಿ :

ಒಳ್ಳೆಯ ಶುಭ್ರವಾದ, ಶಾಂತವಾದ ಜಾಗವನ್ನು ಧ್ಯಾನಕ್ಕಾಗಿ ಆರಿಸಿಕೊಳ್ಳಿ. ಸಾಧ್ಯವಾದರೆ ಅದಕ್ಕೆ ನಿಮ್ಮ ಮನೆಯಲ್ಲಿ ಒಂದು ಕೊಠಡಿಯನ್ನೇ ಧ್ಯಾನದ ಕೊಠಡಿ ಎಂದೇ ಮಾಡಿಕೊಳ್ಳಿ. ದೇವರ ಮನೆ ಈಗಾಗಲೇ ಇದ್ದರೆ ಅದು ಆದರ್ಶ ಜಾಗವೇ ಹೌದು. ಯಾವ ಜಾಗದಲ್ಲಿ ಪೂಜೆ ಮತ್ತು ಧ್ಯಾನ ಇವುಗಳು ನಡೆಯುತ್ತವೆಯೋ ಅಲ್ಲಿ ಹೆಚ್ಚಿನ ಚೈತನ್ಯವು ಇರುವುದರಿಂದ ನಿಮ್ಮ ಧ್ಯಾನಕ್ಕೆ ಹೆಚ್ಚು ಉಪಯೋಗಕಾರಿಯಾಗಿರುತ್ತೆ. ಒಂದೇ ಸ್ಥಳದಲ್ಲಿ ಪ್ರತಿನಿತ್ಯ ಧ್ಯಾನ ಮಾಡುವುದು ಒಳ್ಳೆಯದು. ಆ ಜಾಗವು ಮನೆಯೊಳಗಡೆಯಾದರೆ ಸಾಕಷ್ಟು ಗಾಳಿ, ಬೆಳಕು ಇರುವಂತೆ ನೋಡಿಕೊಳ್ಳಿ. ನೀವು ಮನೆಯ ಹೊರಗಡೆ ಅಂದರೆ ಗಾರ್ಡನ್ ತರಹದ ಸ್ಥಳವಾದರೆ, ಯಾರಿಂದಲೂ ಅಡಚಣೆಯಾಗದ, ಗಲಾಟೆಯಾಗದ ಪ್ರತ್ಯೇಕ ಸ್ಥಳದಲ್ಲಿ ಅಭ್ಯಾಸ ಮಾಡಿರಿ.