KAILASA Library/ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation/ಮುಂದಿನ 10 ನಿಮಿಷಗಳು ವಿರೇಚನ ಶುದ್ಧೀಕರಣSign in
ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation

ಮುಂದಿನ 10 ನಿಮಿಷಗಳು ವಿರೇಚನ ಶುದ್ಧೀಕರಣ

ವಿರೇಚನ ಎಂದರೆ: ನಿಮ್ಮ ಶರೀರದೊಳಗೆ ಬೀಜರೂಪವಾಗಿ ಇರುವ ಮತ್ತೊಂದು ವಿರೇಚನದ ಸಮಯದಲ್ಲಿ (ನಿಯಂತ್ರಿಸಲ್ಪಟ್ಟ ವಾತಾವರಣದಲ್ಲಿ) ನೀವು ತಡೆಹಿಡಿಯಲ್ಪಟ್ಟ ಭಾವನೆಗಳನ್ನು, ಮತ್ತೊಬ್ಬರಿಗೆ ತೊಂದರೆಯಾಗದಂತೆ, ಮತ್ತು ಅದನ್ನು ಒಂದು ಖಾಯಿಲೆ ಎಂದು ಪರಿಗಣಿಸಿಕೊಳ್ಳದೆ, ಹೊರಕ್ಕೆ ಎಸೆಯುವ (ಹೊರಗೆ ಹಾಕುವ) ವಿಧಾನ ಅಥವಾ ಒಂದು ಪ್ರಕ್ರಿಯೆ. ಎಷ್ಟು ಸಾಧ್ಯವೋ ಅಷ್ಟು ನಮ್ಮ ಶರೀರವನ್ನು ಗಟ್ಟಿಯಾಗಿ ಒಳಗೇ ಬಿಗಿ ಹಿಡಿಯಿರಿ. ನಿಮ್ಮ ಕೈಕಾಲುಗಳನ್ನು ಹೊರಗೆ ಸುತ್ತಲೂ ಝಾಡಿಸಿರಿ. ಹಲ್ಲು ಕಚ್ಚಿ ಬಿಗಿಗೊಳಿಸಿರಿ. ತಲೆಯನ್ನು ಸುತಲೂ ತಿರುಗಿಸಿರಿ. ನಿಮ್ಮ ಶರೀರ ಏನೇನು ಮಾಡಬೇಕೆನಿಸುತೋ ಮಾಡಲಿ. ಮಾಡಲು ಬಿಟ್ಟುಬಿಡಿ. ಆದರೆ ಕೈಕಾಲುಗಳನ್ನೂ, ಅಂಗಾಂಗಗಳನ್ನೂ ಗಟ್ಟಿಯಾಗಿ ಬಿಗಿ ಮಾಡಿಕೊಳ್ಳಿರಿ. ಈ ಮೂಲಕ ನಿಮ್ಮ ದುಃಖವನ್ನೆಲ್ಲಾ ಹೊರಕ್ಕೆ ಎಸೆಯಿರಿ. ನಿಮಗೆ ಅಳಬೇಕೆನಿಸಿದರೆ ಅತ್ತು ಬಿಡಿ, ಕಿರಿಚಿರಿ, ನಕ್ಕುಬಿಡಿ, -ಸುಮ್ಮನೆ ಮಾಡಿಬಿಡಿ. ಈ 10 ನಿಮಿಷಗಳ ಕಾಲ ನಿಮ್ಮ ಶರೀರವನ್ನು ನಿಯಂತ್ರಣದಲ್ಲಿಡಬೇಡಿ. ಉನ್ಮತ್ತರಂತೆ ವರ್ತಿಸಿರಿ.

ಚಿಂತಿಸಬೇಡಿ, ಈ ತಂತ್ರವು ನಿಮ್ಮನ್ನು ಹುಚ್ಚರನ್ನಾಗಿ ಮಾಡುವುದಿಲ್ಲ - ಸರಿಯಾಗಿ ಹೇಳಬೇಕೆಂದರೆ, ನಿಮ್ಮಲ್ಲಿ ಈಗಾಗಲೆ ಇರುವ ಹುಚ್ಚುತನವನ್ನೆಲ್ಲಾ ಹೊರಗೆ ಹಾಕಿಬಿಡುತೆ, ಅಷ್ಟೆ!

ನಿಮ್ಮ ಶರೀರದಲ್ಲಿ ಏಳುತ್ತಿರುವ ಹಿಂಸಾತ್ಮಕ ಆವೇಶಗಳ ವಿಚಾರವಾಗಿ ಭಯ ಪಡಬೇಡಿ. ಈ ಆವೇಶಗಳನ್ನೆಲ್ಲಾ ಉಪಯೋಗಿಸಿ, ಖರ್ಚು ಮಾಡಿದ ಮೇಲೆ, ಶಾಂತಿಯು ಅರಳಿ ನಿಮ್ಮಲ್ಲಿ ನೆಲೆಸಲು ಪ್ರಾರಂಭಿಸುತ್ತದೆ. ನಿಮಗೇ ತಿಳಿಯದೇ ನಿಮ್ಮ ಒಳಗೆ ಪ್ರಜ್ಞೆಯ ಆಳದಿಂದ, ಸ್ಥಿರತೆಯೂ ಮನಶಾಂತಿಯೂ ಉದಯಿಸುತಿರುವ ಅನುಭವವನ್ನು ನೀವು ಪಡೆಯುತ್ತೀರಿ.

10 ನಿಮಿಷಗಳ ನಂತರ (ನೀವು ಧ್ವನಿಸುರುಳಿ ಉಪಯೋಗಿಸುತ್ತಿದ್ದಲ್ಲಿ), ನೀವು Stop (ಸ್ಟಾಪ್) ನಿಲ್ಲಿಸಿ! ಎಂಬ ಶಬ್ದವನ್ನು ಕೇಳುವಿರಿ.

ಆ ಕ್ಷಣವೇ, ಸುಮ್ಮನೆ ನಿಲ್ಲಿಸಿಬಿಡಿ - ನೀವು ಯಾವ ಭಂಗಿಯಲ್ಲೇ ಇರಬಹುದು, ಅದೇ ಭಂಗಿಯಲ್ಲಿ ಸುಮ್ಮನೆ ನಿಲ್ಲಿಸಿ - ಜಡವಾದ ಒಂದು ವಿಗ್ರಹದಂತೆ ಇದ್ದುಬಿಡಿ.

ನೀವು ಯಾವಾಗ ಆ ಉದ್ಯೇಕಗೊಂಡ, ಹತೋಟಿ ಮೀರಿದ ಕ್ರಿಯೆಯಿಂದ ಇದ್ದಕ್ಕಿದ್ದಂತೆ ಕೂಡಲೇ ಶಾಂತ ಸ್ಥಿತಿಗೆ ಬಂದುಬಿಡುತ್ತೀರೋ ಆವಾಗ, ನಿಮ್ಮ ಮನಸ್ಸು ಪೂರ್ಣವಾಗಿ ನಿಂತುಬಿಡುತ್ತದೆ, ಒಂದು ಕ್ಷಣ ಸ್ಥಗಿತಗೊಳ್ಳುತ್ತದೆ. ಆ