KAILASA Library/ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation/ಆನಂದ ಸ್ಪುರಣ ಪ್ರೋಗ್ರಾಂನಲ್ಲಿ ಏನು ಮಾಡುತಾರೆ? (ASP)Sign in
ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation

ಆನಂದ ಸ್ಪುರಣ ಪ್ರೋಗ್ರಾಂನಲ್ಲಿ ಏನು ಮಾಡುತಾರೆ? (ASP)

ಆನಂದ ಸ್ಪುರಣ ಪ್ರೋಗ್ರಾಂ (ASP) ಇದು ಧ್ಯಾನದ ಮೂಲಕ ಚಕ್ರಗಳಿಂದ ಗುಣಪಡಿಸುವ ಎರಡು ದಿವಸದ ಪರಿಶ್ರಮ ಪೂರ್ಣವಾದ ಶಿಬಿರ. ಈ ಶಿಬಿರದಲ್ಲಿ, ಪ್ರತಿಯೊಂದು ಚಕ್ರದ ಸ್ವಭಾವ ಮತ್ತು ಅದರ ಪಾತ್ರ ಏನು ಎಂಬುದನ್ನು ನಿಮಗೆ ತಿಳಿಸಿಕೊಡಲಾಗುತ್ತದೆ ಮತ್ತು ಈ ಏಳು ಚಕ್ರಗಳನ್ನೂ ಶುದ್ಧೀಕರಿಸಿ, ಪುನಶ್ಚೇತನಗೊಳಿಸುವ ಶಕ್ತಿಯುತವಾದ ಹಾಗೂ ಸಹಜವಾಗಿ ಮಾಡಬಹುದಾದ ಏಳು ಧ್ಯಾನದ ತಂತ್ರಗಳನ್ನು ಕಲಿಸಿಕೊಡಲಾಗುತದೆ.

ಸ್ವಾಧಿಷ್ಠಾನ ಚಕ್ರದ ನಿರ್ಭಯ ಧ್ಯಾನವನ್ನು ಹೊರತುಪಡಿಸಿ ಮಿಕ್ಕಲ್ಲಾ ಧ್ಯಾನಗಳನ್ನು ಸುಲಭವಾಗಿ ವಾರಕ್ಕೆ ಒಂದಾವರ್ತಿ ಅಭ್ಯಾಸ ಮಾಡಬಹುದು. ಅಥವಾ, ನಿಮಗೆ ಸರಿಕಾಣುವ (ಸೂಕ್ತವಾದ) ಯಾವುದಾದರೂ ಒಂದು ತಂತ್ರವನ್ನು ಆರಿಸಿಕೊಂಡು 21 ದಿವಸಗಳವರಗೆ ಬಿಡದೆ ಅಭ್ಯಾಸವನ್ನು ಮುಂದುವರಿಸಿರಿ. (ಮಹಾಮಂತ್ರ, ದುಃಖಹರಣ ಅಥವಾ ಮಣಿಪೂರಕ ಶುದ್ಧಿಕ್ರಿಯ - ಇವುಗಳು ಹೊಸದಾಗಿ ಅಭ್ಯಾಸ ಮಾಡುವವರಿಗೆ ಬಹಳ ಉಪಯುಕ್ತವಾದವುಗಳು) -- ಆನಂತರ - ನೀವು -- ಹೊಸತಂತ್ರವನ್ನು ಆರಿಸಿಕೊಳ್ಳಬಹುದು. ಪ್ರಾಮಾಣಿಕವಾಗಿ, ಅಭ್ಯಾಸ ಮಾಡಿದರೆ, ಈ ತಂತ್ರಗಳು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪವಾಡಸದೃಶವಾದ ಪರಿಣಾಮವನ್ನುಂಟುಮಾಡುತವೆ.

ಏಳು ತಂತ್ರಗಳ - ಧ್ಯಾನ ವಿಧಾನವನ್ನು ಕಲಿಸುವ ಧ್ವನಿ ಸುರುಳಿಗಳು ಲಭ್ಯವಿವೆ.

ದಿನ 1

ದುಃಖಹರಣ ಧ್ಯಾನ

ಗುಣಪಡಿಸುವ ಚಕ್ರ : ಮೂಲಾಧಾರ

ಚಕ್ರವಿರುವ ಸ್ಥಳ : ಬೆನ್ನುಮೂಳೆಯ ಮೂಲ (ತಳಭಾಗ) ಚಕ್ರವು ಬಂಧಿಸಲ್ಪಡುವುದು : ಭ್ರಾಂತಿ (ಕಲ್ಪನೆ) ಮತ್ತು ನಿರೀಕ್ಷಣೆ ಯಿಂದ ಚಕ್ರದ ಬಂಧನ ಬಿಡುಗಡೆ : ವಾಸ್ತವಿಕತೆಯನ್ನು ಸ್ವೀಕರಿಸುವಿಕೆಯಿಂದ ಧ್ಯಾನ ತಂತ್ರ ಬಂದಿರುವುದು : ಶಿವತಂತ್ರದಿಂದ ಕಾಲಾವಧಿ : 30 ನಿಮಿಷಗಳು

ದುಃಖಹರಣಕ್ಕೆ ಸೂಚನೆಗಳು

ದುಃಖಹರಣವು 30 ನಿಮಿಷಗಳ ಧ್ಯಾನ. 10 ನಿಮಿಷಗಳ 3 ಭಾಗಗಳಿವೆ. ASP ಸೂಚನೆಗಳ ಧ್ವನಿಸುರುಳಿ (Instruction Tape) ಇದ್ದರೆ ಉಪಯೋಗಿಸಿಕೊಳ್ಳಿ, ಇಲ್ಲವಾದರೆ ಅಲಾರಂ ಗಡಿಯಾರ ಅಥವಾ ಯಾರಾದರೂ ವೇಳೆ ಗಮನಿಸಿ ತಿಳಿಸುವವರಿದರೂ ಸರಿ.

ಮೊದಲ 10 ನಿಮಿಷ ಉಸಿರಾಡುವ ಕ್ರಿಯೆ.

ಆಳವಾಗಿ ಅವ್ಯವಸ್ಥಿತವಾಗಿ ಉಸಿರಾಡಲು ಪ್ರಾರಂಭಿಸಿರಿ.

Chaotic breathing (ಅವ್ಯವಸ್ಥಿತ, ಕ್ರಮವಿಲ್ಲದ ಉಸಿರಾಟ) ಎಂದರೇನು?

ಏಳು ದಿವಸದ ಚಕ್ರ ಪ್ರಕ್ರಿಯೆ

ಈ ಕ್ರಮವಿಲ್ಲದ ಉಸಿರಾಟದಲ್ಲಿ ನಿಗದಿತ ಲಯಬದ್ದತೆ ಇಲ್ಲ. ಸುಮ್ಮನೆ ಎಷ್ಟು ಸಾಧ್ಯವೋ ಅಷ್ಟು ಅಳವಾಗಿ ಉಸಿರಾಡುವುದು ಮತೆಲ್ಲವನ್ನೂ ಮರೆತು ಆಳವಾಗಿ ಉಸಿರಾಡುವುದೊಂದೇ. ನೀವೇ ಉಸಿರಾಟವಾಗಿ ಬಿಡುವುದು.

ಈ ಅವ್ಯವಸ್ಥಿತ ಉಸಿರಾಡುವ ಸಮಯದಲ್ಲಿ, ಶರೀರ ಪ್ರಜ್ಞೆಯು ತನ್ನ ವಶಕ್ಕೆ ಶರೀರವನ್ನು ತೆಗೆದುಕೊಳ್ಳುವುದರಿಂದ, ತನಗೆ ಬೇಕಾದಷ್ಟು ಆಮ್ಲಜನಕವನ್ನು (oxygen) ನಿಯಂತ್ರಣದಲ್ಲಿಡಬೇಕಾಗಿಲ್ಲ. ಇದು ಪ್ರಾಣಾಯಾಮವಲ್ಲ,

ನೀವೇನಾದರೂ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಉಳ್ಳವರಾದರೆ, ಸಾಧ್ಯವಾದಷ್ಟು ಮಾತ್ರ, ನಿಮಗೆ ತೊಂದರೆ ಮಾಡಿಕೊಳ್ಳದೆ ಉಸಿರಾಡಿರಿ. ಯಾವ ಸಮಸ್ಯೆಯೂ ಉಸಿರಾಡಿರಿ.

ಈ 10 ನಿಮಿಷಗಳಲ್ಲಿ ಉತ್ಪತ್ತಿಯಾದ ಶಾಖವು ಎಲ್ಲಾ ಘನೀಭೂತವಾದ ನಕಾರಾತ್ಮಕ ಚೇತನಗೊಳ್ಳಲ್ಪಡುತ್ತದೆ. ನಿಗದಿತವಾದ ಉಸಿರಾಟದ ಯಾವ ಪ್ರಯೋಗವೂ ಇಲ್ಲ. ನಿಮ್ಮ ಶರೀರವು ತನಗೆ ಹೇಗೆ ಬೇಕೋ ಹಾಗೆ ವರ್ತಿಸಲಿ. ನೀವು ನಿಂತಿರಬೇಕು ಅಷ್ಟೆ,