KAILASA Library/ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation/ಹೊಸಿಲಿನಲ್ಲಿಯೇ ಪ್ರಶ್ನೆಗಳು (ಪ್ರವೇಶದ್ವಾರದಲ್ಲಿಯೇ ಪ್ರಶ್ನೆಗಳು)Sign in
ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation

ಹೊಸಿಲಿನಲ್ಲಿಯೇ ಪ್ರಶ್ನೆಗಳು (ಪ್ರವೇಶದ್ವಾರದಲ್ಲಿಯೇ ಪ್ರಶ್ನೆಗಳು)

ವಿಚಾರವಾಗಿ ಪೂರ್ಣವಾಗಿ ಬಹು ಮುಖ್ಯವಾದದನ್ನೇ ಕಳೆದುಕೊಂಡು ಬಿಡುತ್ತೀರಿ. ಆಧ್ಯಾತ್ಮಿಕತೆಯು ಧ್ಯಾನವೆನ್ನುವುದು, ಈ ಜೀವನವೆಲ್ಲಾ ಕೇವಲ ಒಂದು ಲೀಲೆ ಎಂಬುದನ್ನು ಅರ್ಥಮಾಡಿಕೊಳ್ಳುವಂಥದ್ದು, ದೈವಲೀಲೆ. ಆದ್ದರಿಂದ ಅದರಲ್ಲಿ ಗಂಭೀರವಾಗಿ ಪರಿಗಣೆಸುವುದೇನಿದೆ?

ಧ್ಯಾನವನ್ನು ಒಂದು ಹಬ್ಬದಂತೆ (ಉತ್ಸವದಂತೆ) ಆಚರಿಸಿರಿ. ಸುಮ್ಮನೆ ಆನಂದದಿಂದ ನಲಿಯಿರಿ!

ನಾಲ್ಕನೆಯದಾಗಿ, ಸಹನಶೀಲರಾಗಿರಿ.

ಮೊದಲನೇ (ಧುಮುಕಿ ಬಂದುಬಿಡುವುದಿಲ್ಲ) ಇದ್ದಕ್ಕಿದ್ದಂತೆ ಉಂಟಾಗುವುದಿಲ್ಲ.

ಧ್ಯಾನವನ್ನು ಪ್ರಾರಂಭಿಸುತ್ತಿದ್ದಂತೆಯೇ ಫಲದ ಬಗ್ಗೆ ಚಿಂತಿಸಲು ತೊಡಗಬೇಡಿ. ಒಂದು ಸಣ್ಣ ಕತೆ:

ಮೂರು ಕೋತಿಗಳು ಒಮ್ಮೆ ಕಳಿತ ರಸಭರಿತವಾದ ಮಾವಿನ ಹಣ್ಣನ್ನು ಕಂಡವಂತೆ. ಎಲ್ಲಾ ಕೋತಿಗಳಂತೆ ಅವೂ ಸಹ ಸ್ವಲ್ಪ ಹೊತ್ತು ಆ ಹಣ್ಣಿಗಾಗಿ ಹೊಡೆದಾಡಿದವು. ನಂತರ ಏನೋ ಕಾರಣಕ್ಕಾಗಿ ಅವುಗಳೇ ಒಂದು ಸ್ಪಷ್ಟವಾದ ಒಳ್ಳೆಯ ತೀರ್ಮಾನಕ್ಕೆ ಬಂದುವು.

ಬುದ್ದಿಪೂರ್ವಕವಾಗಿ ಏನನ್ನೋ ನಿಶ್ಚಯಿಸಿಕೊಂಡವು. ಆ ಹಣ್ಣನ್ನು ಆಗಲೇ ತಿಂದು ಮುಗಿಸುವ ಬದಲು ಆ ಹಣ್ಣನ್ನು ಹುಟ್ಟಹಾಕೋಣ. ಆ ಹಣ್ಣಿನ ಬೀಜವು ಮೊಳೆತು, ಬೆಳೆದು ಮರವಾದ ಮೇಲೆ ಆ ಮೂರು ಕೋತಿಗಳಿಗೂ ಸಾಕಾಗುವಷ್ಟು ಮತ್ತು ಇನ್ನೂ ಹೆಚ್ಚು ಹಣ್ಣುಗಳು ಸಿಕ್ಕುತ್ತವೆ ಎಂದುಕೊಂಡವು. ಒಂದೊಂದು ಕೋತಿಯೂ ಒಂದೊಂದು ಕೆಲಸದಲ್ಲಿ ಆಸಕ್ತಿ ವಹಿಸಿ ಆ ಗಿಡವನ್ನು ಗಮನವಿಟ್ಟು ಕಾಪಾಡಿ ಬೆಳೆಸಲು ನಿರ್ಧರಿಸಿದವು.

ಮೊದಲನೆಯ ಕೋತಿ, ''ಪ್ರತಿನಿತ್ಯ ಈ ಗಿಡಕ್ಕೆ ನೀರು ಹಾಕುವ ಕೆಲಸ ನನ್ನದು!'' ಎಂದಿತು.

ಎರಡನೆಯ ಕೋತಿ, ಭೂಮಿಯನ್ನು ಫಲವತ್ತಾಗಿ ಇಡಲು ಗೊಬ್ಬರ ಮುಂತಾದುವನ್ನು ಹಾಕಿ ಗಿಡವನ್ನು ಚೆನ್ನಾಗಿ ಬೆಳೆಸಲು ಭರವಸೆ ಕೊಟ್ಟತು.

ಮೂರನೇ ಕೋತಿಯು, ಕೆಟ್ಟ ಹವಾಮಾನ ಹಾಗೂ ಪ್ರಾಣಿಗಳಿಂದ ಕಾಪಾಡಿ, ಜಾಗರೂಕತೆಯಿಂದ ನೋಡಿಕೊಳ್ಳುವ ಕೆಲಸ ತನ್ನದೆಂದು ಹೇಳಿತು.

ಒಂದು ತಿಂಗಳಾಯಿತು, ಎರಡಾಯಿತು, ಮೂರು ತಿಂಗಳೂ ಮುಗಿಯಿತು. ಆ ಬೀಜದಿಂದ ಮೊಳಕೆ ಒಡೆದು, ಗಿಡ ಬೆಳೆಯುವ ಯಾವ ಕುರುಹೂ ಕಾಣಲಿಲ್ಲ. ಆದುದರಿಂದ ಆ ಮೂರು ಕೋತಿಗಳೂ ಒಂದು ತುರ್ತುಸಭೆ ಕರೆದು, ಅವುಗಳ ಒಂದೊಂದೂ ತಮ್ಮ ಪಾತ್ರವನ್ನು ಹೇಗೆ ನಿರ್ವಹಿಸಿದವು ಎಂಬುದರ ವಿಚಾರವಾಗಿ ಚರ್ಚಿಸಿದವು.

ಮೊದಲನೇ ಕೋತಿಯು, ತಾನು ಮಾತು ಕೊಟ್ಟಂತೆ ಪ್ರತಿನಿತ್ಯವೂ ಬೀಜಕ್ಕೆ ನೀರು ಹಾಕುತಿದ್ದೆ ಎಂದಿತು.

ಎರಡನೆಯ ಕೋತಿಯು ನಾನೂ ಸಹ ಮಾತು ಕೊಟ್ಟಂತೆ, ಗೊಬ್ಬರ ಹಾಕಿ ಭೂಮಿಯು ಫಲವತ್ತಾಗುವಂತೆ ನೋಡಿಕೊಂಡೆ ಎಂದಿತು.

ಮೂರನೇ ಕೋತಿಯು, ನಾನು ಮಾತು ಕೊಟ್ಟಂತೆ, ಚೆನ್ನಾಗಿ, ಜೋಪಾನವಾಗಿ ಕಾಪಾಡಿಕೊಂಡೇ ಬರುತ್ತಿದ್ದೀನಿ. ಅಷ್ಟೇ ಅಲ್ಲ, ಪ್ರತಿದಿನವೂ ಆ ಬೀಜವನ್ನು ಹೊರತೆಗೆದು ಮೊಳಕೆ ಬಂದಿದೆಯೋ ಇಲ್ಲವೋ ಎಂಬುವುದನ್ನೂ ಪರೀಕ್ಷಿಸುತ್ತಾ ಇದ್ದೇನೆ ಅಂದಿತು.

ಆದ್ದರಿಂದ, ನೀವೂ ಸಹ ಮೊದಲನೇ ಸಾರಿಯೇ ಏನೋ ಅದ್ಭುತವಾದದ್ದು ಆಗುವುದೆಂದು ನಿರೀಕ್ಷಿಸಬೇಡಿ! ಧ್ಯಾನದ ಪ್ರಕ್ರಿಯೆಯು ನಿಮ್ಮಲ್ಲಿ ಕೆಲಕಾಲ ಬೆಳೆಯಲು ಅವಕಾಶ ಕೊಡಿ. ನೀವು ಆತುರಪಟ್ಟು ಕೂಡಲೇ ಫಲವನ್ನು