'ಜೀವನದಲ್ಲಿ ಧ್ಯಾನ' ದಿಂದ 'ಧ್ಯಾನದಲ್ಲಿ ಜೀವನ'ದೆಡೆಗೆ
ನೀವು ಈಗಿನ್ನೂ ಪ್ರಾರಂಭದ ಸ್ಥಿತಿಯಲ್ಲಿಯೇ ಇದ್ದೀರಿ. ಇನ್ನೂ ಒಳಹೊಕ್ಕು ಪರೀಕ್ಷಿಸುವುದರಲ್ಲಿಯೇ ಇದ್ದೀರಿ.
ಅದಕ್ಕಾಗಿಯೇ, ನೀವು ಧ್ಯಾನವನ್ನು ನನ್ನ ಜೀವನ ಶೈಲಿಯಲ್ಲಿ ಹೇಗೆ
ಸೇರಿಸಿಕೊಳ್ಳಲಿ? ಎಷ್ಟು ಗಂಟೆಗಳ ಕಾಲ ನಾನು ಅಭ್ಯಾಸ ಮಾಡಬೇಕು? ಯಾವ ತಂತ್ರವು ನನಗೆ ಸೂಕವಾದುದು? ಎಂದೆಲ್ಲಾ ಕೇಳುತ್ತೀರಿ.
ಈ ಸ್ಥಿತಿಯಲ್ಲಿ ಈ ಪ್ರಶ್ನೆಗಳು ಸಂಪೂರ್ಣವಾಗಿ ಸರಿಯಾದದ್ದೇ.
ಪ್ರಾರಂಭದಲ್ಲಿ ನಿಮ್ಮ ಜೀವನದಲ್ಲಿ ನೀವು ಧ್ಯಾನವನ್ನು ಅಭ್ಯಾಸ ಮಾಡುತ್ತೀರಿ.
ನೀವು ಸೇರಿಸಿಕೊಳ್ಳಬೇಕು. ಒಂದು ತಂತ್ರವನ್ನು ಆರಿಸಿಕೊಳ್ಳಿ, ದಿನಕ್ಕೆ ಅರ್ಧಗಂಟೆ ಅಥವಾ ಒಂದು ಗಂಟೆಯವರೆಗೆ ಅಭ್ಯಾಸವನ್ನು ಮಾಡಿರಿ. ನಿಮಗೆ ಹೇಗೆ ಅನಿಸುತ್ತದೆ ತಿಳಿದು ನೋಡಿ. ನಿಮಗೆ ಒಂದು ತಂತ್ರವು ಸಂತೋಷವನ್ನುಂಟು ಮಾಡಿದರೆ ಹತ್ತು ದಿವಸಗಳವರೆಗಾದರೂ ಫಲವನ್ನು ಬಯಸದೆ (ಫಲಿತಾಂಶ ವನ್ನು ನಿರೀಕ್ಷಿಸದೆ) ಅದಕ್ಕೇ ತಂತ್ರವು ನಿಮಗೆ ಸಮರ್ಪಿತವೆನಿಸಿದರೆ (ನಿಮಗೆ ಹಿಡಿಸಿದರೆ) ಅದು ನಿಮ್ಮನ್ನು ಯಾವ ರೀತಿಯಲ್ಲಾದರೂ ಪರಿವರ್ತಿಸದೇ ಇರಲಾರದು. ಕೆಲವು ವೇಳೆ ಪರಿವರ್ತನೆಯು ಸೂಕ್ಷ್ಮವಾಗಿರಬಹುದು, ಮತ್ತು ಕೆಲವು ವೇಳೆ ಬೇರೆಯವರಿಗೆ ನಿಮಗಿಂತ ಸ್ಪಷ್ಟವಾಗಿ ತಿಳಿದುಬರಬಹುದು.
ಎಷ್ಟೋಸಾರಿ ಜನಗಳು ಬಂದು ನನ್ನನ್ನು ಕೇಳುತ್ತಾರೆ, ಸ್ನಾಮೀಜಿ, ನಾನು ಧ್ಯಾನವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದ ನಂತರ ಬೇರೆಯವರು ನನ್ನ ಮುಖದಲ್ಲಿ ತೇಜಸ್ಸು ಪ್ರಕಾಶವು ಕಾಣಿಸುತ್ತಿದೆ ಎಂಬುದಾಗಿಯೂ, ನಾನು ಬಹಳ ಶಕ್ತಿಯುತವಾಗಿಯೂ, ಕಾಣಿಸುತ್ತಿದ್ದೇನೆಂದು ಹೇಳುತ್ತಾರೆ!
ಆದ್ದರಿಂದ, ಯಾವುದೋ ಒಂದು ಸ್ಥರದಲ್ಲಿ ಖಂಡಿತವಾಗಿಯೂ ಪರಿವರ್ತನೆ ಯು ಆಗುತ್ತಿದೆ. ನೇರವಾಗಿ ಫಲಿತಾಂಶವು ನಿಮಗೆ ದೊರೆತಿಲ್ಲವೆನಿಸಿದರೂ, ತಾಳ್ಮೆಯನ್ನು ಸಾಧಿಸಬಹುದು!
ಧ್ಯಾನಮಯ ಜೀವನದ ಕಡೆಗೆ
ಕ್ರಮೇಣವಾಗಿ ನೀವು ಹೊಸ ಹೊಸ ಹೊಸ ತಂತ್ರಗಳನ್ನು ಬೆನ್ನು ಹಂಟಿಕೊಂಡು ಹೋಗುವುದನ್ನು ನಿಲ್ಲಿಸಿಬಿಡುತ್ತೀರಿ. ಒಂದು ಅಥವಾ ಕೆಲವು ತಂತ್ರಗಳು ನಿಮಗೆ ಸರಿಹೊಂದುವುದಾಗಿ ಅನಿಸಬಹುದು, ಅವುಗಳನ್ನೇ ಅಭ್ಯಸಿಸಲು ನಿರ್ಧರಿಸಿ ಕೊಳ್ಳಿರಿ. ಈಗಲಾದರೋ ಈ ತಂತ್ರಗಳು ಇನ್ನೂ ಹೊಸದು ಮತ್ತು ನಿಮ್ಮನ್ನು ಉತ್ತೇಜಿಸುವಂಥವುಗಳು. ನಿಮ್ಮ ಮನಸಿಗೆ ಇದನ್ನೂ ಪ್ರಯತ್ತಿಸೋಣ, ಅದನ್ನೂ ಪ್ರಯತ್ನಿಸೋಣ ಅನಿಸುತ್ತಿರುತ್ತದೆ. ಅದೊಂದು ತರಹ ಕರಿದ ತಿಂಡಿಗಳ ಅಂಗಡಿಗೆ ಹೋದರೆ, ಅಲ್ಲಿನ ನಾನಾ ತರಹದ ತಿಂಡಿಗಳಲ್ಲಿ ಯಾವುದನ್ನು ನಿಜವಾಗಿಯೂ ತಿನ್ನಬೇಕು ಎಂಬುದನ್ನು ನಿರ್ಧರಿಸಲು ಆಗದಿದ್ದಂತೆ!
ಆದ್ದರಿಂದ ಯಾವ ನಿರ್ಬಂಧನೆಗೂ ಒಳಗಾಗಬೇಡಿ! ನಿಮ್ಮ ಮನಸು ಯಾವುದನ್ನು ಪ್ರಯತ್ತಿಸೋಣವೆಂದು ಹೇಳುತ್ತದೆಯೋ ಅದನ್ನೇ ಮಾಡಿ. ಮತ್ತು ನೀವು ಪ್ರಾಮಾಣಿಕತೆಯಿಂದ ಮಾಡಿರಿ. ನಿಮ್ಮ ಪೂರ್ಣ ಶಕ್ತಿಯನ್ನೂ, ಸಾಮರ್ಥ್ಯವನ್ನೂ ಉಪಯೋಗಿಸಿ ಪ್ರಯತ್ನಿಸಿರಿ. ಒಂದೊಂದು ತಂತ್ರವನ್ನೂ, ಅದೊಂದೇ ನಿಮಗೆ ಸಿಕ್ಕಿರುವುದು ಎಂಬಂತೆ ಪ್ರಯತ್ನಿಸಿರಿ. ದುರಾಸೆಯನ್ನು ಹೊಂದಬೇಡಿ, ತಾಳೆಯನ್ನು ಕಳೆದುಕೊಳ್ಳಬೇಡಿ. ಹಾಗೆ ಮಾಡದಿದ್ದರೆ ನೀವು ಸುಮ್ಮನೆ ಧ್ಯಾನದ ವಿಷಯವಾಗಿ ಚಪಲವನ್ನು ಹೊಂದಿದವರಾಗುವಿರಿ, ಧ್ಯಾನದ ಸಾರಭೂತವಾದ ನಿಜವಾದ ಅನುಭವವನ್ನು ಹೊಂದಲಾರಿರಿ.
ಕೇವಲ ಒಂದೇ ಒಂದು ಅನುಭವ ಸಾಕು!
ಆನಂದದ ಕೇವಲ ಒಂದು ಕಣಿಕ ದರ್ಶನ ನಿಮಗಾದರೆ ಸಾಕು, ನೀವು ಧ್ಯಾನವನ್ನು ಸಂಪೂರ್ಣವಾಗಿ ಪ್ರೀತಿಸತೊಡಗುತ್ತೀರಿ. ಆಗ ನೀವು ಎಷ್ಟು ಗಂಟೆಗಳ ಕಾಲ ಧ್ಯಾನ ಮಾಡಬೇಕೆಂಬುದಾಗಿ ಪ್ರಶ್ನಿಸುವುದೇ ಇಲ್ಲ. ನೀವು ಬೆಳಗಾಗಿ ಏಳುತಿದ್ದಂತೆಯೇ ನಿಮ್ಮ ಮೊದಲನೆಯ ಆಲೋಚನೆ ಧ್ಯಾನದೇ ಆಗಿರುತ್ತದೆ. ನೀವು ಸ್ನಾನ ಮಾಡುವಾಗ, ಉಡುಪು ಹಾಕಿಕೊಳ್ಳುವಾಗ, ಊಟ ಮಾಡುವಾಗ ಪ್ರತಿಯೊಂದನ್ನೂ ಮನಃಪೂರ್ವಕವಾಗಿ ತೃಪ್ತಿಯಿಂದ ಮಾಡುತ್ತಾ
ನಿಮ್ಮ ಪ್ರತಿಯೊಂದು ಕೆಲಸವೂ ಪ್ರತಿಯೊಂದು ಕಣವೂ ಧ್ಯಾನದಿಂದಲೇ ಜೀವ ಪಡೆದಂತೆ ಅನುಭವವಾಗುತ್ತದೆ. ಧ್ಯಾನಾವಸ್ಥೆಯೇ ನಿಮ್ಮ ಜೀವನದ ಸಹಜ ಸ್ಥಿತಿಯಾಗುತ್ತದೆ. ನೀವು ನಿಮ್ಮ ಜೀವನವನ್ನು ಧ್ಯಾನದಲ್ಲಿಯೇ ಜೀವಿಸುತ್ತೀರಿ. ಈ ಸ್ಥಿತಿಯನ್ನೇ ನೀವು ಅಂತಿಮವಾಗಿ ಹೊಂದಲಿ ಎಂಬುದನ್ನೇ ನಾನು ಬಯಸುತ್ತೇನೆ.
ಆದರೆ, ಇದು ಅಷ್ಟು ಸುಲಭವಲ್ಲ ಮೊದಲು ಧ್ಯಾನವೆಂದರೇನೆಂಬ ಅಭಿಪ್ರಾಯವನ್ನು ಮನಗಂಡು ಆ ಭಾವನೆಗೆ ಹೊಂದಿದವರಾಗಿರಬೇಕು. ನೀವು ಪ್ರತಿದಿನ ಸ್ವಲ್ಪ ಸ್ವಲ್ಪವಾಗಿ ಅಭ್ಯಾಸ ಮಾಡಿ ಅದೇ ಅನುಭವವನ್ನು ದಿನದ ಉಳಿದ ಸಮಯಕ್ಕೂ ಬೆಳೆಸಿಕೊಳ್ಳಬೇಕು.
ಈ ಪುಸ್ತಕದಲ್ಲಿ ಎರಡು ತರಹದ ಧ್ಯಾನದ ತಂತ್ರಗಳ ಸಂಗ್ರಹವನ್ನು ನೀವು ಕಾಣುತೀರಿ.
- ಕುಳಿತು ಮಾಡುವ ತಂತ್ರಗಳು: ಇವು ನಿರ್ಧಿಷ್ಟ ಕಾಲದವರೆಗೆ ಮತ್ತು ದಿನದಲ್ಲಿ ನಿರ್ಧಿಷ್ಟ ಸಾರಿ ಅಭ್ಯಾಸ ಮಾಡುವಂತಹವುಗಳು.
- ಯಾವಾಗಲಾದರೂ - ಎಲ್ಲಿ ಬೇಕಾದರೂ ಮಾಡುವ ತಂತ್ರಗಳು: ಇವನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಅಭ್ಯಾಸ ಮಾಡುವಂತಹವುಗಳು! (ಅಂದರೆ) ನೀವು ಡ್ರೈವ್ ಮಾಡಿಕೊಂಡು ಕೆಲಸಕ್ಕೆ ಹೋಗುವಾಗ, ಬಟ್ಟೆಗಳನ್ನು ಇಸ್ತ್ರಿ ಮಾಡುವಾಗ, ನಿಮ್ಮ ಮಲಗುವ ಕೊಠಡಿಯಿಂದ ಅಡಿಗೆ ಮನೆಗೆ ನಡೆಯುವಾಗ ಹೀಗೆ ನೀವು ಈ ತಂತ್ರಗಳನ್ನು ಅಭ್ಯಾಸ ಮಾಡಬಹುದು.
ನಿಮಗೆ ಬೇಕೆನಿಸಿದರೆ, ಕೆಲವು ಕುಳಿತು ಮಾಡುವ ತಂತ್ರಗಳನ್ನು ಮತ್ತು ಒಂದು ಯಾವಾಗಲಾದರೂ - ಎಲ್ಲಿ ಬೇಕಾದರೂ ಮಾಡುವ ತಂತ್ರವನ್ನು ಪ್ರತಿ ಹತ್ತು ದಿವಸಗಳಿಗೆ ಆರಿಸಿಕೊಳ್ಳಬಹುದು. ಏಕ ಕಾಲದಲ್ಲಿ ಹೆಚ್ಚು ತಂತ್ರಗಳನ್ನು ಪ್ರಯತ್ನಿಸಬೇಡಿ, ಏಕೆಂದರೆ ಯಾವುದೂ ಪೂರ ಫಲಕಾರಿಯಾಗುವುದಿಲ್ಲ. Anytime-anywhere ತಂತ್ರಗಳು ನಮ್ಮ ಜೀವನವನ್ನೇ ಧ್ಯಾನವನ್ನಾಗಿ ಬದಲಾಯಿಸುವ ಮೊದಲನೇ ಹೆಜ್ಜೆಯಾಗಿವೆ.