KAILASA Library/ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation/ಧ್ಯಾನದ ಬಗ್ಗೆSign in
ಧ್ಯಾನವು ನಿಮಗಾಗಿ - ಧ್ಯಾನದ ವಿಜ್ಞಾನ ಮತ್ತು ಕಲೆಗೆ ಒಂದು ಪರಿಚಯ (Dhyanavu Nimagagi - Dhyanada Vijnana Mattu Kalegge Ondu Parichaya) / Meditation for You - An Introduction to the Science and Art of Meditation

ಧ್ಯಾನದ ಬಗ್ಗೆ

ಈ ತಂತ್ರವು ವಿಜ್ಜಾನ ಭೈರವ ತಂತ್ರದ್ದು. ನಿಮ್ಮ ಮೂಲ ಸತ್ವವು ಕೇಂದ್ರದಿಂದ ಕೇಂದ್ರಕ್ಕೆ (ಉನ್ನತಿಯಿಂದ) ಮೇಲೇರುತ್ತಿದೆ, ಬೆನ್ನು ಹುರಿಯ ಎತ್ತರಕ್ಕೆ ಮತ್ತು ಹಾಗೆಯೇ ನಿಮ್ಮಲ್ಲಿಯ 'ಜೀವ ಚೈತನ್ಯ'ವೂ ವೃದ್ಧಿಸುತ್ತದೆ.

ಬೆನ್ನು ಹುರಿಯೇ ನಿಮ್ಮ ಶರೀರ ಹಾಗೂ ಮನಸ್ಸಿಗೆ ಆಧಾರ, ಬೇರು (ಮೂಲಾಧಾರ). ನಿಮ್ಮ ವಯಸ್ಸು ಬೆನ್ನುಹುರಿಯ ಆಧಾರದ ಮೇಲೆ ಅವಲಂಬಿಸಿದೆ. ನಿಮ್ಮ ಬೆನ್ನು ಹುರಿಯು ಮೆದುವಾಗಿದ್ದರೆ, ನೀವು ತರುಣರು (ಚಿಕ್ಕ ವಯಸ್ಸಿನವರು), ನಿಮ್ಮ ಬೆನ್ನು ಹುರಿಯು ಗಡುಸಾಗಿದ್ದರೆ, ನೀವು ವೃದ್ದರು. ಏಳು ಶರೀರದುದ್ದಕ್ಕೂ ನೆಲೆಗೊಂಡಿವೆ (ಸ್ಥಾಪಿಸಲ್ಪಟ್ಟವೆ). ಬೆನ್ನು ಹುರಿಯ ಭಾಗದಲ್ಲಿ ಮೂಲಾಧಾರ ಚಕ್ರ, ಲಿಂಗ ಸಂಬಂಧ ಕೇಂದ್ರವು ಇದೆ. ನೆತ್ತಿಯ ಮೇಲೆ ಸಹಸ್ರಾರ ಚಕ್ರ, ನಮ್ಮನ್ನು ದೈವತ್ತಕ್ಕೆ ತೆರೆದುಕೊಳ್ಳುವಂತೆ ಮಾಡುವ ಕೇಂದ್ರ. ಆ ಬೆನ್ನುಹುರಿಯ (Column) ಕೊಳವೆಯೇ ಚೈತನ್ಯವು ಹರಿಯುವ ದಾರಿ. ಈ ಧ್ಯಾನದಲ್ಲಿ ನೀವು ನಿಮ್ಮ ಚೈತನ್ಯವನ್ನು ಮೂಲಾಧಾರದಿಂದ ಮೇಲಿಂದ ಮೇಲೆ ಚಲಿಸುತ್ತಾ, ಸಹಸ್ರಾರದ ವರೆಗೂ ತಲುಪಿಸುತ್ತೀರಿ.

ಈ ಚಲನೆಯು ಅಷ್ಟು ಸುಲಭವಾಗಿ ಆಗುವುದಿಲ್ಲ. ಏಕೆಂದರೆ ಇದು ಗುರುತ್ವಾಕರ್ಷಣೆಗೆ ವಿರುದ್ದ! ನಿಮ್ಮ ಚೈತನ್ಯವು ಕೆಳಮುಖವಾಗಿ ಬಹಳ ಸುಲಭವಾಗಿ ಚಲಿಸುತದೆ. ಸರಿಯಾಗಿ ಹೇಳಬೇಕೆಂದರೆ, ನಮ್ಮ ಚೈತನ್ಯದ 80% ಭಾಗ ಮೂಲಾಧಾರದಲ್ಲಿ ತಡೆ ಹಿಡಿಯಲ್ಪಟ್ಟಿದೆ. ಅದು ಹೇಗಿದೆ ಎಂದರೆ,