ದಿವ್ಯನೇತ್ರ ಧ್ಯಾನ
ಗುಣಪಡಿಸುವ ಚಕ್ರ : ಆಜ್ಞಾ ಚಕ್ರವಿರುವ ಸ್ಥಳ : ಭ್ರೂಮಧ್ಯ ಚಕ್ರವು ಬಂಧಿಸಲ್ಪಡುವುದು : ಗಂಭೀರತೆ (ತೀವ್ರತೆಯಿಂದ ಪರಿಗಣಿಸುವಿಕೆ Seriousness) ಚಕ್ರದ ಬಂಧನ ಬಿಡುಗಡೆ : ಮುಗ್ದತೆ ಮತ್ತು ಸರಳತೆ ಧ್ಯಾನ ತಂತ್ರ ಬಂದಿರುವುದು : ಕ್ರಿಶ್ಚಿಯಾನಿಟಿ ಕಾಲಾವಧಿ : 30 ನಿಮಿಷಗಳು
ಆಜ್ಞಾ ಚಕ್ರವನ್ನು ಚಕ್ರಗಳ ರಾಜ ಎಂದು ಪರಿಗಣೆಸಲಾಗಿದೆ - ಮಾಸ್ಟರ್ ಚಕ್ರ. ಇದು ಎಷ್ಟು ಪ್ರಾಮುಖ್ಯವಾದ ಚಕ್ರವೆಂದರೆ, ಯಾವ ಧರ್ಮದವರೂ ಈ ಚಕ್ರವನ್ನು ಕಾರ್ಯಗತಗೊಳಿಸದೇ ಬಿಟ್ಟಲ್ಲ. ಆಜ್ಞಾ ಚಕ್ರವು ಎಚ್ಚರಗೊಂಡಾಗ - ಪೂರ್ಣ ಅಸ್ತಿತ್ವವೇ ಬೇರೆಬೇರೆಯ ಕ್ಷೇತ್ರಗಳಲ್ಲಿ ಪ್ರವೇಶಿಸುತ್ತದೆ. ಸಮಸ್ತ ಸಾಮರ್ಥ್ಯದ ಪದರಗಳು ತೆರೆಯಲ್ಪಡುತ್ತವೆ.
ದಿವ್ಯ ನೇತ್ರ ಧ್ಯಾನವು, ಗುರುವಿನ ಚೈತನ್ಯದೊಡನೆ ನೇರ ಸಂಪರ್ಕವನ್ನು ಪ್ರತಿಷ್ಠಾಪಿಸುವ, ಅತೀವ ಶಕ್ತಿಯುತವಾದ ತಂತ್ರ. ಈ ಧ್ಯಾನವನ್ನು ಗುರುಗಳ ಸನ್ನಿಧಿಯಲ್ಲಿಯೇ ಅಭ್ಯಾಸ ಮಾಡಿದರೆ ಅತ್ಯಂತ ಪ್ರಭಾವಶಾಲಿಯಾದ ಪರಿಣಾಮ ಉಂಟಾಗುವುದು. ಇದು ಸಾಧ್ಯವಾಗದಿದ್ದಾಗ, THE SUPREME PONTIFF OF HINDUISM BHAGAWAN SRI NITHYANANDA PARAMASHIVAM ರವರ ಕಣ್ಣುಗಳ ಭಾವಚಿತ್ರವನ್ನು ಉಪಯೋಗಿಸಿ ಧ್ಯಾನಾಭ್ಯಾಸ ಮಾಡಬಹುದು. ಈ ಧ್ಯಾನಕ್ಕೆ THE SUPREME PONTIFF OF HINDUISM BHAGAWAN SRI NITHYANANDA PARAMASHIVAM ರವರ ಯಾವುದೋ ಭಾವಚಿತ್ರವನ್ನು ಉಪಯೋಗಿಸದೆ, ಆಜ್ಞಾಧ್ಯಾನದ ತರಗತಿಯ ವೇಳೆಯಲ್ಲಿ ಧ್ಯಾನ ಮಾಡುತಿದ್ದಾಗಲೇ ತೆಗೆದ ಭಾವಚಿತ್ರವನ್ನು ಇದಕ್ಕಾಗಿಯೇ ಶಿಫಾರಸು ಮಾಡಿರುವುದರಿಂದ ಅದು ನಿರೀಕ್ಷಿತ ಪರಿಣಾಮಕಾರಿಯಾದದ್ದು.